ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಶ್ರೀಮದ್ರಾಮಾಯನಪು ಸರ್ಗ » ವುಂಟಾಗಿರುವುದು. ನೀವು ಇಷ್ಟು ಆತುರದಿಂದ ಆ ಮಾತನ್ನು ಹೇಳುವುದಕ್ಕೆ ಕಾರಣವೇನು ? ನಾನು ಎಷ್ಟೇ ಧರದಿಂದ ನಿಮ್ಮನ್ನು ಪಾಲಿಸುತ್ತಿರುವಾ ಗಲೂ, ಏನೂ ಕಂಡರಿಯದ ಬಾಲನಾದ ರಾಮನಿಗೆ ಪಟ್ಟವನ್ನು ಕಟ್ಟಬೇಕಂ, ದು ನೀವು ಅಪೇಕ್ಷಿಸುವುದೇಕೆ ? ನನ್ನಲ್ಲಿರತಕ್ಕ ದೋಷಗಳೇನು ! ನಿಮ್ಮ ಮ ನೋಭಿಪ್ರಾಯವನ್ನು ಮುಚ್ಚು ಮರೆಯಿಲ್ಲದೆ ಯಥಾರವಾಗಿ ತಿಳಿಸಿರಿ?” ಎಂ ದನು. ಅದನ್ನು ಕೇಳಿ, ಅಲ್ಲಿದ್ದ ರಾಜರೂ, ಪರಜಾನಪದರೂ, ಮಹಾತ್ಮನಾದ ದಶರಥನನ್ನು ನೋಡಿ, * • ರಾಜೇಂದ್ರಾ! ನಿನ್ನ ಮಗನ ಕಲ್ಯಾಣಗುಣಗಳು ಅಪರಿಮಿತವಾಗಿರುವುವು. ಆರೋಪಿತಗಳಲ್ಲದ ಸ್ವಾಭಾವಿಕಗುಣಗಳುಳ್ಳವ ನಾಗಿ, ದೇವತೆಗಳಿಗೆ ಸಮಾನನಾಗಿ, ಮಹಾಬುದ್ಧಿಶಾಲಿಯಾಗಿ ಪ್ರಕಾ ಶಿಸುತ್ತಿರುವ ಆ ರಾಮನ ಗುಣಗಳು ಸತ್ವಲೋಕಪ್ರಿಯಗಳಾಗಿಯೂ, ಸಂತೋಷಜನಕಗಳಾಗಿಯೂ ಇರುವುವು. ಈಗ ನೀನಾಗಿ ಕೇಳಿದುದ ರಿಂದ ಆ ಗುಣಗಳೆಲ್ಲವನ್ನೂ ನಾವು ಸಂಪೂರ್ಣವಾಗಿ ವಿವರಿಸಬೇಕಾಯಿತು. * * “ಬಹವೋ ನೃಪ ಕಲ್ಯಾಣಾ ಗುಣಾ: ಪತ್ರಸ್ಯ ಸಂತೇ”ಎಂಬುದೇ ಇದಕ್ಕೆ ಲವು, ಇದರಲ್ಲಿರುವ ವಿಶೇಷಾರಗಳೇನೆಂದರೆ:-(ಕೃಪ)"ಎಲೈ ಪ್ರಜಾಪಾಲಕನೆ!” ಈ ಸಂಬೋಧನೆಯಿಂದಲೇ ದಶರಥನಿಗೂ ರಾಮನಿಗೂ ಇರುವ ತಾರತಮ್ಯವು ಸೂಚಿತವಾ ಗುವುದು.ಪ್ರಜಾಪಾಲನವೆಂಬ ಗುಣವೊಂದುಮಾತ್ರವೇ ನಿನ್ನಲ್ಲಿ ಸಂಪೂರವಾಗಿರಬಹು ಬಾದರ, ರಾಮನಲ್ಲಿರತಕ್ಕ ಕಲ್ಯಾಣಗುಣಗಳು ಇನ್ನೂ ಅಪರಿಮಿತವೆಂದು ಭಾವವು. (ಈ ಪತ್ರಸ್ಯ ಗುಣಾಃ) ನಿನ್ನ ಮಗನ ಗುಣಗಳೆಂಬುದರಿಂದ ಬೇರೆ ಯಾರಲ್ಲಿಯಾ ದರೂ ನಿನಗಿಂತಲೂ ಹೆಚ್ಚಾದ ಗುಣಾಧಿಕ್ಯವನ್ನು ಹೇಳಿದರೆ, ನಿನ್ನ ಮನಸ್ಸಿಗೆ ಕಿಂಕೃತಿ ಯುಂಟಾಗಬಹುದು. ಪುತ್ರಾದಿತ್ಪರಾಜಯಂ” ಎಂಬ ನ್ಯಾಯದಿಂದ, ನಿನ್ನ ಮ ಗನ ಗುಣಾತಿಶಯಗಳನ್ನೇ ನಾವು ಹೇಳುವುದರಿಂದ, ನೀನು ಅಂಗೀಕರಿಸಬೇಕಾದುದೆಂ ದೇ ಭಾವವು, ಮತ್ತು ನಿನ್ನ ಶತ್ರನಾದುದರಿಂದಲೇ ಆತನಿಗೆ ಈ ಗುಣಗಳುಂಟಾದುವೆಂ ದೂ ಸೂಚಿತವು. (ಕಲ್ಯಾಣಾ:) ಎಂದರೆ,ಸಕಲವಿಧವಾದ ಹೇಯಗುಣಗಳಿಗನಿರೋ ಧಿಗಳೆಂದರೆ, ಇದರಿಂದ ಆತನ ಗುಣಗಳು ಸ್ವತ: ಶುಭಕರಗಳಾದುವಲ್ಲದ'ದುರ್ಗ ರಗಳನ್ನು ಪರಿಹರಿಸತಕ್ಕವುಗಳೂ ಆಗಿರುವುವೆಂದಭಿಪ್ರಾಯವು ಈ ಗುಣಾತಿಶಯಗಳಿ ಭಾಗಿಯೇ ಆತನು ಅಭಜೇಹನೆಂದು ಹೇಳುವೆವೇಹೊರತು, ಬೇರೆ ಕಾರಣಗಳಿಂದ ನಾವು ಹೇಳಿದವರಲ್ಲವೆಂದು ಜನಗಳ ಆಶಯವು.