ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


-... - ಸರ್ಗ, ೨.] ಆಯೋಳ್ಳಾಕಾಂಡವು. ತರಭಾಗ್ಯವಿಶೇಷವಲ್ಲದೆ ಮತ್ತೆ ಬೇರೆಯಲ್ಲ ! ಎಲೈ ರಾಜನೆ ! ನಮ್ಮ ಅಭಿಪ್ರಾಯವೂ ಹಾಗಿರಲಿ ! ದೇವಜಾತಿಯವರಾಗಲಿ, ರಾಕ್ಷಸಜಾತಿಯ ವರಾಗಲಿ, ಮನುಷ್ಯರಾಗಲಿ, ಗಂಧರಾಗಲಿ, ನಾಗರಾಗಲಿ,ನಿನ್ನ ದೇಶದಲ್ಲಿ ಇರತಕ್ಕವರೊಬ್ಬೊಬ್ಬರೂ ಪ್ರಸಿದ್ಧಶೀಲನಾದ ಆ ರಾಮನಿಗೆ ಯಾವಾ ಗಲೂ ಶ್ರೇಯಸ್ಸನ್ನೇ ಕೋರುತ್ತ, ಆತನ ಆಯುರಾರೋಗ್ಯವೀರಾದಿಗಳನ್ನೇ ಬಯಸುತ್ತಿರುವರು. ನಿನ್ನ ದೇಶದೊಳಗಿನ ಪರಜಾನಪದರುಮಾತ್ರವೇ ಅಲ್ಲದೆ, ಹೊರದೇಶದವರೂಕೂಡ ನಿನ್ನ ರಾಮನ ಅಭ್ಯುದಯಕಾಲವನ್ನೇ ಆ ತ್ಯಾತುರದಿಂದ ಇರಿರುನೋಡುತ್ತಿರುವರು..* ಯರಲ್ಲಿ ವಯಸ್ಸುಕ ಳೆದವರಾಗಿದ್ದರೂ,ನಡುಪ್ರಾಯದವರಾಗಿದ್ದರೂ, ಯಶಸ್ವಿಯಾದ ನಿನ್ನ ರಾ ಮನ ಶ್ರೇಯಸ್ಸಿಗಾಗಿ,ಹಗಲುರಾತ್ರಿಯೂ ಕಂಡಕಂಡ ದೇವತೆಗಳಿಗೆಲ್ಲಾ ಆ ಕರೆಯಿಂದ ಕೈಮುಗಿಯುತ್ತಿರುವರು. ಎಲೈ ಸ್ವಾಮಿಯೇ! ಅವರ ಈಕೋರಿ

  • ಇಲ್ಲಿ ಸ್ತ್ರೀಯರೆಂಬುದರಿಂದ, ಅವರು ಯಾವಾಗಲೂ ತಮ್ಮ ಅಂತರಂಗಾಭಿಪ್ರಾ ಯವನ್ನು ಹೊರಕ್ಕೆ ಕಾಣಿಸದ ಗಂಭೀರಸ್ವಭಾವವುಳ್ಳವರಾಗಿದ್ದರೂ, ರಾಮನಲ್ಲಿರ ತಕ್ಕ ಪ್ರೇಮಕ್ಕೆ ಪರವಶರಾಗಿ ತಮ್ಮ ಅಂತರಂಗವನ್ನು ದೇವತಾನಮಸ್ಕಾರಾದಿಗಳಿಂದ (ರಬೀಳಿಸಬೇಕಾಯಿತೆಂದು ಭಾವವು.

ಇದರಂತೆಯೇ ಅವಯವಪಾಟವವಿಲ್ಲದ ಸೋಮಾರಿಗಳಾಗಿ, ಯಾವ ಕೆಲಸದಲ್ಲಿ ಯ ಆದರವಿಲ್ಲದಷ್ಟು ವೃದ್ಧರಾದವವರೂ, ಪ್ರಾಯದ ಮದದಿಂದ ಏವೇಕಶೂನ್ಯರಾಗಿ ಮುಂದುಗಾಣದಿರುವವರಕಡ, ರಾಮನಲ್ಲಿರುವ ಪ್ರೇಮಾತಿಶಯಕ್ಕೆ ಕಟ್ಟುಬಿದ್ದು, ಆತನ ಶ್ರೇಯಸ್ಸಿಗಾಗಿ ಮಾಡಬೇಕಾದ ದೇವತಾನಮಸ್ಕಾರಗಳನ್ನು ಮಾಡುತಿದ್ದ ರೆಂದೂ ಗ್ರಹಿಸಬೇಕು. ಕಂಡಕಂಡ ದೇವತೆಗಳಿಗೆಲ್ಲಾ ಕೈಮುಗಿಯುತ್ತಿರುವ ರಂ ಬುದರಿಂದ, ಇವರಿಗೆ ರಾಮನಲ್ಲಿರುವ ಪ್ರೇಮದ ಪರಾಕಾಷ್ಠೆಯು, ಯಾವ ದೇವ ಯನ್ನು ಭಜಿಸಬಹುದು? ಯಾವ ದೇವತೆಯನ್ನು ಭಜಿಸಬಾರದು? ಯಾವ ದೇವರ ಯನ್ನು ಭಜಿಸುವುದು ತಮ್ಮ ಸ್ವರೂಪಾನುರೂಪವಾದುದು?” ಎಂಬ ಯುಳ್ಳಯಕ್ಕೆ ವಿವೇಚನೆಯನ್ನ ತಪ್ಪಿಸುವಷ್ಟು ಶರವಶರನ್ನಾಗಿ ಮಾಡಿತಂದು ಭಾವವು, ಅಥವಾ (ಯಶಸ್ಸಿನ:) ಎಂಬುದನ್ನು ದೇವತೆಗಳಿಗೆ ವಿಶೇಷವನ್ನಾಗಿ ಮಾಡಿದರೂ ಮಾಡಬಹು ದು, ಆಗ ಬಯಸಿದ ಕೋರಿಕೆಗಳೆಲ್ಲವನ್ನೂ ಕೊಡುವುದರಿಂದ ಖ್ಯಾತಿಹೊಂದಿದ ದೇಹ ತೆಗಳನ್ನು ಭಜಿಸುತ್ತಿದ್ದರೆಂದು ಭಾವವು.