ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩oಳಿ. ಶ್ರೀಮದ್ರಾಮಾಯಣವು [ಸರ್ಗ, , , ವಂತೆ ಉದ್ದವಾದ ತೋಳುಗಳುಳ್ಳವನಾಗಿ, ಮಹಾಬಲವುಳ್ಳವನಾಗಿ, ಮದ ದಾನೆಯಂತೆ ಗಂಭೀರವಾದ ನಡೆಯುಳ್ಳವನಾಗಿ,ಚಂದ್ರನಂತೆ ಆಹ್ಲಾದಕರ ವಾದ ಮುಖಕಮಲವುಳ್ಳವನಾಗಿ, ನೋಡುತಿದ್ದಷ್ಟೂ ಮೇಲೆಮೇಲೆ ಆಚೆ ಯನ್ನು ಹೆಚ್ಚಿಸುವ ಪ್ರಿಯದರ್ಶನವುಳ್ಳವನಾಗಿ, ರೂಪದಾಗ್ಯಗಳೇ ಮೊ ದಲಾದ ಗುಣಾತಿಶಯಗಳಿಂದ ತನ್ನನ್ನು ನೋಡತಕ್ಕ ಹೆಂಗಸರಿಗೆ ಮಾತ್ರವೇ ಅಲ್ಲದೆ, ಪುರುಷರಿಗೂಕೂಡ ಮೋಹವನ್ನು ಹುಟ್ಟಿಸಿ, ಅವರ ಕಣ್ಣುಗಳನ್ನೂ ಮನಸ್ಸನ್ನೂ ಆಕರ್ಷಿಸತಕ್ಕ ಮಹಾಮಹಿಮೆಯುಳ್ಳ ರಾಮನನ್ನು , ಅಲ್ಲಿ ನೆರೆದಿದ್ದ ಪ್ರಜೆಗಳೆಲ್ಲರೂ ನೋಡಿದರು. ಬೇಸಗೆಯಿಂದ ತಪಿಸುತ್ತಿರುವವರಿಗೆ ವರ್ಷೋನ್ಮುಖಗಳಾದ ಮೇಫುಗಳು ಹೇಗೋಹಾಗೆ, ಅಲ್ಲಿದ್ದ ಪ್ರಜೆಗಳೆಲ್ಲ ರಿಗೂ ರಾಮನ ದರ್ಶನವು ಬಹಳ ಆಹ್ವಾದವನ್ನುಂಟುಮಾಡಿತು. ಹೀಗೆ ಬರೆ ತಿರುವ ರಾಮನನ್ನು ದಶರಥನು ಎಡೆಬಿಡದೆ ಎಷ್ಟೆಷ್ಟು ನೋಡುತಿದ್ದರೂ ತೃಪ್ತಿಪಡದೆ, ಕ್ಷಣಕ್ಷಣಕ್ಕೂ ಮೇಲುಮೇಲಿನ ಪ್ರೇಮರಸದಿಂದ ಉಕ್ಕುತಿದ್ದ ನು. ಆಮೇಲೆ ಸುಮಂತ್ರನು, ರಾಮನನ್ನು ರಥದಿಂದ ಕೈಗೊಟ್ಟು ಕೆಳಗಿಳಿಸಿ, ಆತನು ತಂದಯ ಸಮೀಪಕ್ಕೆ ಹೋಗುತ್ತಿರುವಾಗ, ಅವನ ಹಿಂದೆ ತಾ ನೂ ಬಹಳವಿನಯದಿಂದ ಬದ್ಧಾಂಜಲಿಯಾಗಿ ಹಿಂಬಾಲಿಸಿಹೋದನು. ಹೀಗೆ ರಾಮನು' ತಂದೆಯನ್ನು ನೋಡುವುದಕ್ಕಾಗಿ ಸುಮಂತ್ರನೊಡಗೂಡಿ ಹೊರಟು, ಕೈಲಾಸಶಿಖರದಂತೆ ಬಿಳುಪಾಗಿಯೂ ಮಹೋನ್ನತವಾಗಿಯೂ ಇರುವ ಉಪ್ಪರಿಗೆಯನ್ನೇರಿ, ತಂದೆಯ ಸಮೀಪಕ್ಕೆ ಬಂದು, ವಿನಯದಿಂದ ಕೈಮುಗಿದು ಇದೋ ! ರಾಮವಮ್ಮನಾದ ನಾನು ನಮಸ್ಕರಿಸುವೆನು” ಎಂ ದು ತನ್ನ ಹೆಸರನ್ನು ತಿಳಿಸುತ್ತ, ತಂದೆಯ ಕಾಲುಗಳನ್ನು ಹಿಡಿದು ನನ್ನ ಸ್ಕರಿಸಿದನು. ಹೀಗೆ ವಿನಯದಿಂದ ಸಾಷ್ಟಾಂಗಪ್ರಣಾಮವನ್ನು ಮಾಡಿ, ಪಕ್ಕದಲ್ಲಿ : ಕೈಮುಗಿದು ನಿಂತಿರುವ ರಾಮನನ್ನು ನೋಡಿ, ದಶರ ಥನು ಜೋಡಿಸಿದ್ದ ಆರಾಮನ ಕೈಯ್ಯನ್ನು ಹಿಡಿದು, ತನ್ನ ಸಮೀಪಕ್ಕೆ ಕರೆದು ಆತನನ್ನು ಅಪ್ಪಿಕೊಂಡು, ಅವನಿಗಾಗಿ ರತ್ನಖಚಿತವಾದ ಒಂದು ದಿವ್ಯಾಸನ ವನ್ನು ಕೊಟ್ಟನು. ರಾಮನು ಆ ಪೀಠವನ್ನು ಅಲಂಕರಿಸಿದಾಗ,ಸೂರನು ಉದ