ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


B೧೦ ಶ್ರೀಮದ್ರಾಮಾಯಣವು [ಸರ್ಗ, ೪, ಳುಂಟಾದಾಗ್ರಪ್ರಾಯಕವಾಗಿ ರಾಜ್ಯಾಧಿಪತಿಯಾದವನಿಗೆಮರಣವೇಉoಟಾ ಗಬೇಕು. ಅಥವಾ ಮಹಾವಿಪತ್ತಾದರೂ ಸಂಭವಿಸುವುದು. ಅದರಿಂದ ಈಗ ಲೇ ನಿನಗೆ ಯ್ವರಾಜ್ಯಾಭಿಷೇಕವನ್ನು ಮಾಡಬೇಕೆಂಬ ಬುದ್ದಿ ಹುಟ್ಟಿರುವು ದು, ಮನುಷ್ಯನ ಮನಸ್ಸು ಕ್ಷಣಕ್ಷಣಕ್ಕೆ ವ್ಯತ್ಯಾಸಪಡತಕ್ಕ ಚಂಚಲಸ್ವಭಾ ವವುಳ್ಳುದಾದುದರಿಂದ, ಈಗ ನನಗೆ ಹುಟ್ಟಿರುವ ಈ ಉದ್ದೇಶವು ವ್ಯತ್ಯಾಸ ಹೊಂದುವುದಕ್ಕೆ ಮೊದಲೇ, ಆ ಕಾರವನ್ನು ನಡೆಸಿಬಿಡಬೇಕು. ಈಗ ಚಂದ್ರ ನು ಪುಷ್ಯಪೂವಾದ ಪುನಸುನಕ್ಷತ್ರದೊಡಗೂಡಿರುವನು. ಪುಷ್ಯ ನಕ್ಷತ್ರ ದ ಸಂಬಂಧವು ನಾಳೆಯೇ ಪ್ರಾಪ್ತವಾಗುವುದೆಂದು ಜ್ಯೋತಿಷ್ಯರು ಹೇಳುವರು. ಆದುದರಿಂದ ಈ ಪ್ರಷ್ಯ ನಕ್ಷತ್ರದಲ್ಲಿಯೇ ನೀನು ಅಭಿಷೇಕವನ್ನು ಹೊಂದುವನಾಗು! ನನ್ನ ಮನಸ್ಸೇ ನನ್ನನ್ನು ಆತುರಪಡಿಸುತ್ತಿರುವಂತೆ ತೋರುವುದು. ನಾಳೆಯೇ ನಿನಗೆ ಅಭಿಷೇಕವನ್ನು ಮಾಡುವನು. ಇದು ಮೊ ದಲುಗೊಂಡು,ನೀನು ಈ ರಾತ್ರಿಯೆಲ್ಲವೂ ದಾಸನದಲ್ಲಿದ್ದು,ಸಪಕನಾ ಗಿ ಉಪವಾಸವಿರಬೇಕು. ಪ್ರಾಯಕವಾಗಿ ಇಂತಹ ಶ್ರೇಯಸ್ಕರವಾದ ಕಾವ್ಯ ಗಳಿಗೆ ನಡುವೆ ಅನೇಕವಿಸ್ಸುಗಳು ಸಂಭವಿಸುವುದುಂಟು. ಆದುದರಿಂದ ನಿನ್ನ ಮಿತ್ರರೆಲ್ಲರೂ ಎಚ್ಚರಿಕೆಯಿಂದ ನಿನ್ನ ಸಮೀಪದಲ್ಲಿಯೇ ಇದ್ದುಕೊಂಡು ನಿನ್ನ ನ್ನು ರಕ್ಷಿಸುತ್ತಿರಲಿ! ಭರತನು ಈಗ ದೇಶಾಂತರಕ್ಕೆ ಹೋಗಿರುವನು. * ಆತನು ಈ ಪಟ್ಟಣಕ್ಕೆ ಬಂದುಸೇರುವುದಕ್ಕೆ ಮೊದಲೇ ಈ ಅಭಿಷೇಕಕಾರವನ್ನು ನಡೆ ಸಿಬಿಡಬೇಕಾಗಿರುವುದು. ಈ ಮಹೋತ್ಸವಕ್ಕೆ ಆತನನ್ನು ಕರೆತರಿಸುವುದಕ್ಕೆ ತಕ್ಕಷ್ಟು, ಸಾವಕಾಶವಿಲ್ಲ. ಇದಲ್ಲದೆ ನಿನ್ನ ತಮ್ಮನಾದ ಭರತನು ಬಹಳ ಸೌಜನ್ಯವುಳ್ಳವನಾಗಿಯೂ, ಜೈಷ್ ಭಾತೃವಾದ ನಿನ್ನಲ್ಲಿ ಭಕ್ತಿಯನ್ನಿಟ್ಟು ನಿನ್ನ ಮನಸ್ಸನ್ನ ನುಸರಿಸಿ ನಡೆಯತಕ್ಕವನಾಗಿಯೂ,ಧಾತ್ಮನಾಗಿಯೂ,ದ

  • ದಶರಥನು ಕೇಕಯರಾಜನಿಗೆ ರಾಜ್ಯವನ್ನೇ ಶುಲ್ಕವಾಗಿಟ್ಟು ಕೈಕೇಯಿಯನ್ನು ವಿವಾಹಮಾಡಿಕೊಂಡುದಾಗಿ ಪ್ರಸಿದ್ದಿಯುಂಟು.ಈಅಭಿಪ್ರಾಯವನ್ನು ಮನಸ್ಸಿನಲ್ಲಿಟ್ಟು ಕೊಂಡೇ ದಶರಥನು, ಭರತನು ಹಿಂತಿರುಗಿ ಬಂದುಬಿಟ್ಟರೆ ರಾಜ್ಯವನ್ನು ಅವನಿಗೇ ಕೊ ಡಬೇಕಾಗಿ ಬರುವುದೆಂಬ ಶಂಕೆಯಿಂದ ಈ ಮಾತನ್ನು ಹೇಳಿದುದಾಗಿ ಗ್ರಹಿಸಬೇಕು. ಇದೇ ವೃತ್ತಾಂತವು ಈ ಕಾಂಡದ ನೂರೇಳನೆಯ ಸರ್ಗದಲ್ಲಿ ವಿವರಿಸಲ್ಪಡುವುದು,