ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

193 ಶ್ರೀಮದ್ರಾಮಾಯಣವು [ಸರ್ಗ' ೭, ಅವಳನ್ನು ಮೈಮರೆಯುವಂತೆ ಮಾಡಿತು. ಆಗ ಆ ಗೂನಿಯನ್ನು ನೋಡಿ, ((ಇದೇನು! ನೀನು ಇದುವರೆಗೂ ಕೇಳಲಿಲ್ಲವೆ?ನಾಳೆ ನಮ್ಮ ರಾಮನಿಗೆ ಯು ವರಾಜಪಟ್ಟವು ಕಟ್ಟಲ್ಪಡುವುದು. ರಾಮನು ಶಾಂತ್ಯಾದಿಸದ್ದು ಣಗಳಿಂದ ಕೂಡಿ, ದೋಷರಹಿತನಾಗಿರುವುದನ್ನು ನೋಡಿ, ದಶರಥರಾಜನು ಆತನಿಗೆ ನಾ ಳೆಯೇ ಪಟ್ಟವನ್ನು ಕಟ್ಟುವುದಾಗಿ ನಿಶ್ಚಯಿಸಿರುವನು ?” ಎಂದಳು. ದಾ ದಿಯು ಹೇಳಿದ ಈ ಮಾತು ಕಿವಿಗೆ ಬಿದ್ದೊಡನೆಯೇ ಮಂಥರೆಗೆ ಸಹಿಸಲಾರ ದ ಸಂಕಟವುಂಟಾಯಿತು. ಕೈಲಾಸದಿಂದ ಕೆಳಕ್ಕೆ ಬೀಳುವಂತೆ ಆ ಉಪ್ಪ ರಿಗೆಯನ್ನು ಬಿಟ್ಟು ಥಟ್ಟನೆ ಕೆಳಕ್ಕಿಳಿದಳು.ಸಹಜವಾಗಿ ಪಾಪಬುದ್ದಿಯುಳ್ಳ ಆ ಮಂಥರೆಗೆ,ರಾಮನ ಪಟ್ಟಾಭಿಷೇಕವಾರ್ತೆಯು ಎದೆಯಲ್ಲಿ ಬೆಂಕಿಯಿಟ್ಟಂ ತಾಯಿತು. ಅಲ್ಲಿಂದ ನೆಟ್ಟನೆ ಹೊರಟುಬಂದು, ಕೈಕೇಯಿಯನ್ನು ನೋಡಿ, Cಅಯ್ಯೋ ! ಬುದ್ದಿಯಿಲ್ಲದವಳೆ! ಏಳೇಳು! ಇನ್ನೂ ಮಲಗಿರುವೆಯಾ? ಈಗ ನಿನಗೆ ಬಹಳ ಭಯಂಕರವಾದ ಮಹಾವಿಪತ್ತೊಂದು ಬಂದೊದಗಿರುವು ದಲ್ಲವೆ' ಈಗ ನಿನ್ನನ್ನು ಸುತ್ತಿರುವ ಕಷ್ಟಪರಂಪರೆಗಳನ್ನೇ,ಇನ್ನೂ ನೀನು ತಿಳಿ ಯದೆ ಹೋದೆಯೆಂದರೆ ಹೇಳತಕ್ಕುದೇನು? ಯಾವಾಗಲೂ ನೀನು ನಮ್ಮೆಲ್ಲ ರ ಮುಂದೆ ಪತಿಗೆ ನನ್ನಲ್ಲಿ ಪರಮಪ್ರೀತಿ”ಯೆಂದೂ, (ನನ್ನ ಭಾಗ್ಯಕ್ಕೆ ಎಣೆ ಯೇ ಇಲ್ಲ” ವೆಂದೂ ಹೇಳಿಕೊಳ್ಳುತಿದ್ದ ಹೆಮ್ಮೆಯೆಲ್ಲವೂ ಈಗ ಏನಾಯಿ ತು? ನಿನ್ನ ಸುಳ್ಳುಸೌಭಾಗ್ಯವೆಲ್ಲವೂ ಎಲ್ಲಿ ಹೋಯಿತು? ರಾಜನಿಗೆ ನಿನ್ನಲ್ಲಿ ಸ್ವ ಲ್ಪವೂ ಪ್ರೇಮವಿಲ್ಲವೆಂಬುದು ಈಗ ಚೆನ್ನಾಗಿ ಸ್ಪಷ್ಟವಾಯಿತಲ್ಲವೆ?ಬೇಸಗೆ ಯಲ್ಲಿ ನಹೀ ಪ್ರವಾಹವು ಹೇಗೋ ಹಾಗೆ,ನಿನ್ನ ಸೌಭಾಗ್ಯಗಳೆಲ್ಲವೂ ಈಗ ಬತ್ತಿ ಹೋಗುತ್ತಿರುವುವು” ಎಂದಳು. ಮಂಧರೆಯು ಬಹುಕೋಪದಿಂದ ಈ ಕೂ ರವಾಕ್ಯವನ್ನು ಹೇಳಲು, ಅದನ್ನು ಕೇಳಿದೊಡನೆಯೇ ಕೈಕೇಯಿಯ ಮನ ನ್ನು ಸ್ವಲ್ಪವಾಗಿ ಕಳವಳಿಸಿತು. ಪಾಪಬುದ್ದಿಯುಳ್ಳ ಮಂಥರೆಯನ್ನು ಕುರಿತು ಕೈಕೇಯಿಯು ಮೃದುವಾಕ್ಯದಿಂದ ಎಲೆ ಮಂಥರೆ ! ಇದೇನು ಹೀ ಗೆ ಹೇಳುವೆ ? ಈಗ ನನ್ನ ಕ್ಷೇಮಕ್ಕೆ ಬಂದ ವಿಫುತವೇನು ? ನಿನ್ನ ಮುಖ ವು ಕಂಡಿರುವುದನ್ನು ನೋಡಿದರೆ, ಬಹಳ ದುಃಖಿತೆಯಾದಂತೆ ಕಾಣುವೆಯ ಬ್ಲಾ! ಇದರ ಕಾರಣವೇನು!”ಎಂದಳು. ಹೀಗೆ ಮೃದುವಾಕ್ಯದಿಂದ ಪ್ರಶ್ನೆ