ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ಸರ್ಗ, ೮.] ಅಯೋಧ್ಯಾಕಾಂಡವು. ನ್ನಾಗಿ ಮಾಡಲಾರರು. ಆದುದರಿಂದ ನಿನ್ನ ಮಗನಿಗೆ ಇನ್ನು ಮೇಲೆ ರಾಜ್ಯವು ಲಭಿಸುವುದೆಂಬ ಆಶೋತ್ತರವನ್ನೇ ಬಿಡು. ಅಯ್ಯೋ!ಯಾವಾಗಲೂ ಕಷ್ಟವ ನೈ ಕಂಡರಿಯದ ನಿನಗೂ ಇಂತಹ ದುರವಸ್ಥೆಯುಂಟಾಗಬಹುದೇ? ಭರತನಿ ಗೆ ರಾಜ್ಯವಿಲ್ಲದಿದ್ದರೂ ಇದ್ದಂತೆಯೇ” ಎಂದು ಹೇಳಿದೆಯಲ್ಲವೆ?ಹೌದು! ನಿನ ಗೆ ಎಲ್ಲಾ ಮಕ್ಕಳಮೇಲೆಯೂ ಸಮವಾದ ಪ್ರೀತಿಯಿರಬಹುದು. ಆದರೆ ನಿನ್ನ ಮಗನಿಗೆ ಬರುವ ಅನ್ನವನ್ನಾದರೂ ನೀನು ಯೋಚಿಸಬೇಡವೆ?ಹೇಗೂ ಸಿ. ನ ಮಗನು ರಾಜ್ಯಸುಖಗಳನ್ನೆಲ್ಲಾ ಬಿಟ್ಟು,ರಾಜವಂಶೀಯರ ಗಣನೆಗೆ ಬಾರದೆ ಅನಾಥನಾಗಿ ಅಲೆಯುವ ಕಾಲವು ಬಂದಿದೆ. ಹಿರಿಯ ಮಗನಾದ ರಾಮನಿರು ವಾಗ ಭರತನಿಗೆ ರಾಜ್ಯವು ಹೇಗೆ ಸಿಕ್ಕುವುದು ?” ಎಂದು ಸೀನು ಶಂಕಿಸಿದೆಯ ಇವೆ.ಅದನ್ನು ಯೋಚಿಸಿಯೇ ನಾನೂ ಈಗ,ಭರತಸಿಗೆ ರಾಜ್ಯವನ್ನು ಕೊಡಿಸು ವುದಕ್ಕೆ ತಕ್ಕ ಉಪಾಯವನ್ನು ಮಾಡಬೇಕೆಂದು ಇಲ್ಲಿಗೆ ಬಂದೆನು. ಅದು ನಿನಗೆ ತಿಳಿಯದೇ ಹೋಯಿತಲ್ಲಾ! ಅಯ್ಯೋ!ನಿನ್ನ ಸವತಿಯ ಪುರೋವೃದ್ಧಿಯನ್ನು ಕೇಳಿ, ನನಗೆ ಪಾರಿತೋಷಿಕವನ್ನು ಕೊಡುವುದಕ್ಕೆ ಬಂದೆಯಲ್ಲಾ ! ನಿನ್ನ ವಿವೇಕವನ್ನೇನೆಂದು ಹೇಳಲಿ ! ಮುಖ್ಯವಾಗಿ ಒಂದು ವಿಷಯವನ್ನು ಹೇಳು ವೆನು ಕೇಳು. ರಾಮನಿಗೆ ರಾಜ್ಯಪ್ರಾಪ್ತಿಯಾದೊಡನೆಯೇ, ಅವನು ಸಮಯ ವನ್ನು ನೋಡಿಕೊಂಡಿದ್ದು, ನಿನ್ನ ಮಗನಾದ ಭರತನನ್ನು ದೇಶಾಂತರ, ಅಥವಾ ಲೋಕಾಂತರಕ್ಕೆ ಕಳುಹಿಸದೆ ಬಿಡನು!ಇದು ನಿಜವು! ರಾಮನು ಭರತನಿಗೆ ಆನರಗಳನ್ನು ತಂದಿಡುವುದರಲ್ಲಿ ಸಂದೇಹವೇ ಇಲ್ಲ. ಅಯ್ಯೋ ಪಾಪವೆ ! ಸಣ್ಣ ಮಗುವಾದ ಆ ಭರತನನ್ನು , ಈ ಬಾಲ್ಯವಯಸ್ಸಿನಲ್ಲಿಯೇ ಮಾವನ ಮನೆಗೆ ಕಳುಹಿಸಿಬಿಟ್ಟಿಯಲ್ಲಾ ? ಅದರ ಫಲವೇ ಇದು ! ಲೋಕ ದಲ್ಲಿ ಸಾಮಾನ್ಯವಾಗಿ ವೃಕ್ಷಗಳೇ ಮೊದಲಾದ ಸ್ಥಾವರವರ್ಗಗಳುಕೂಡ, ತನಗೆ ಬಹಳ ಸನ್ನಿಹಿತವಾಗಿರುವುದರೊಡನೆ ಸೇರಿಕೊಳ್ಳುವುವು. ಹೀಗಿರು ವಲ್ಲಿ ಸಚೇತನರಾದ ಮನುಷ್ಯರ ವಿಷಯವನ್ನು ಹೇಳತಕ್ಕದೇನು ? ಯಾ ರಿಗೂ ಕೂಡಾಟದಿಂದ ಪ್ರೇಮವು ಹೆಚ್ಚುವುದೇನೋ ಸ್ವಾಭಾವಿಕವು!ಭರತನು ಒಂದುವೇಳೆ ಇಲ್ಲಿಯೇ ಇದ್ದಿದ್ದರೆ, ಸ್ವಲ್ಪ ಮಟ್ಟಿಗಾದರೂ ದಶರಥನ ಪ್ರೀತಿ ಯನ್ನು ಸಂಪಾದಿಸಬಹುದಾಗಿತ್ತು ! ಅನ್ಯಾಯವಾಗಿ ಆತನನ್ನು ನೀನೇ