ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪೦ ಶ್ರೀಮದ್ರಾಮಾಯಣವು -[ಸರ್ಗ, ೯, ನೊಬ್ಬನಾಗಿಯೇ ಇರಬೇಕೇಹೊರತು, ಅವನನ್ನು ಕಣ್ಣೆತ್ತಿಯೂ ನೋಡುವ ವರಿಲ್ಲ. ಆಮೇಲೆ ರಾಜ್ಯವು ನಿಷ್ಕಂಟಕವಾಗುವುದರಿಂದ, ಭರತನು ರಾಜಾಧಿರಾ ಜನಾಗಿ ನೆಮ್ಮದಿಯಿಂದಿರಬಹುದು. ನಿನ್ನ ಮಗನೇನು ಸಾಮಾನ್ಯನೆಂದು ತಿಳಿ ಯಬೇಡ! ಬಹಳಬುದ್ದಿವಂತನು! ರಾಮನು ಕಾಡಿನಿಂದ ಹಿಂತಿರುಗಿಬರುವ ರೊಳಗಾಗಿ, ಅವನು ತನ್ನ ಮೂಲಬಲವನ್ನೂ, ಮಿತ್ರಬಲವನ್ನೂ ಹೆಚ್ಚಿಸಿ ಕೊಂಡು, ಪೂರ್ಣವಾದ ಪ್ರಜಾನುರಾಗವನ್ನೂ ಸಂಪಾದಿಸಿ, ರಾಜ್ಯದಲ್ಲಿ ಸ್ಥಿರಪಡುವನು. ನಿನ್ನ ಕೋರಿಕೆಗಳನ್ನು ತೀರಿಸಿಕೊಳ್ಳುವುದಕ್ಕೆ ಇದಕ್ಕಿಂತ ಲೂ ಬೇರೆ ಅವಕಾಶವು ಸಿಕ್ಕದು. ಈಗ ನೀನು ಭಯದಿಂದ ಹಿಂಜರಿದರೆ, ಕೆಲ ಸವೇ ಕೆಡುವುದು. ಸ್ವಲ್ಪವೂ ಭಯಪಡದೆ ರಾಮನನ್ನು ಕಾಡಿಗೆ ಕಳುಹಿಸಿ, ಭರತನಿಗೇ ಪಟ್ಟವನ್ನು ಕಟ್ಟಬೇಕೆಂದು ಭೈರವಾಗಿ ಹಠಹಿಡಿದು, ಈಗ ರಾಜನು ಮಾಡಿರುವ ಪ್ರಯತ್ನವನ್ನು ತಪ್ಪಿಸು” ಎಂದಳು. ಹೀಗೆ ಮುಂಧರೆ ಯು ಕೈಕೇಯಿಗೆ ಪ್ರತಿಕೂಲವಾದ ಕಾವ್ಯಗಳನ್ನೇ ಅನುಕೂಲಗಳಾಗಿರುವಂ ತೆ ತಿಳಿಸಿ,ದುರ್ಬೋಧನೆಯನ್ನು ಮಾಡಲು, ಅವೆಲ್ಲವನ್ನೂ ಕೈಕೇಯಿಯು ನಿಜ ವೆಂದೇ ಗ್ರಹಿಸಿದಳು. ಅವಳ ಮನಸ್ಸು ಸಂಪೂಕ್ತವಾಗಿ ಕದಲಿತು.ಕೈಕೇಯಿಗೆ ಮಂಥರೆಯ ಮಾತಿನಲ್ಲಿಯೇ ಪೂರವಾದ ನಂಬಿಕೆಯುಂಟಾಯಿತು. ಮಂಥ ರೆಯು ತೋರಿಸಿಕೊಟ್ಟ ಉಪಾಯಕ್ಕಾಗಿ ಅವಳ ಮನಸ್ಸಿನಲ್ಲಿ ಸಂತೋಷವೂ ಆಶ್ಚರೈವೂ ನೆಲೆಗೊಂಡಿತು. ಇವಳು ಹಿಂದೆ ಯಾವಾಗಲೂ ಅನುಚಿತವಾದ ಮಾರ್ಗಕ್ಕೆ ಪ್ರವರ್ತಿಸಿದವಳಲ್ಲ. ಯಾವ ವಿಷಯವನ್ನಾ ದರೂ ಯುಕ್ತಾಯು ಕವಿವೇಚನೆಯಿಂದ ಚೆನ್ನಾಗಿ ಪರೀಕ್ಷಿಸಿನೋಡದೆ ಬಿಡಳು.ಅಂತವಳು ಈಗ ಆ ರೂನಿಯ ದುರ್ಬೋಧನೆಗೊಳಪಟ್ಟು, ಬೆದರಿದ ಕುದುರೆಯಂತೆ ತಪ್ಪುದಾರಿ ಯನ್ನು ಹಿಡಿದೋಡುವುದಕ್ಕೆ ಆರಂಭಿಸಿದಳು!ಹೀಗೆ ತನಗೆ ಪ್ರತಿಕೂಲವಾದ ಕಾರವನ್ನೇ ಅನುಕೂಲವೆಂಬ ಭಾಂತಿಯಿಂದ, ಮಂಥರೆಯ ಮಾತಿಗೆ ಮರು ಳಾಗಿ, ಸಂತೋಷಗೊಂಡು, ಅವಳನ್ನು ಕುರಿತು ಎಲೆ ಮಂಥರೆ! ನಿನ್ನ ಮಹಿ ಮೆಯು ನನಗೆ ಇದುವರೆಗೆ ತಿಳಿಯದೆಹೋಯಿತು ! ನೀನು ಹೇಳಿದ ಅತ್ಯುತ್ತ ತನು ಬಹುಕಾಲದವರೆಗೆ ಕಾಡಿನಲ್ಲಿಯೇ ಇದ್ದು ಬಿಡುವುದರಿಂದ, ಈಗಿನಂತೆ ಪ್ರಜೆಗಳ ಮನೋರಂಜಕನಾಗಿರಲಾರನೆಂದೂ ಅಲ್ಲಾಂತರಗಳನ್ನು ಹೇಳುವರು,