ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೯, ಅಯೋಧ್ಯಾಕಾಂಡವು. ೬೪ ಗಳಿಗೂ ಕಳೆಯೇರಿಸುತ್ತಾ, ನೀನು ಅಲ್ಲಲ್ಲಿ ತಿರುಗುತ್ತಿರುವಾಗ, ನನ್ನ ಸವತಿ ಯರೆಲ್ಲರೂ ನಿನ್ನನ್ನು ನೋಡಿ ಮನಸ್ಸಿನಲ್ಲಿ ಮಾತ್ಸಲ್ಯವನ್ನು ಹೊಂದದಿರ ಲಾರರು. ಆಗ ಅವರನ್ನು ನೀನು ಲಕ್ಷಮಾಡದೆ, ಹೆಮ್ಮೆಯಿಂದ ಕಣ್ಣೆತ್ತಿ ಯೂ ನೋಡದೆ ಸಂಚರಿಸಬಹುದು, ನೀನು ನನಗೆ ಎಡೆಬಿಡದೆ ಪಾದಸೇವೆ ಯನ್ನು ಮಾಡುವಂತೆಯೇ, ನಿನಗೂ ಆಗ ಅನೇಕಕುಭೆಯರು ಸರಾಲಂ ಕಾರಭೂಷಿತರಾಗಿ ಬಂದು ಪಾದಸೇವೆಯನ್ನು ಮಾಡುವರು.” ಎಂದಳು. ಹೀಗೆ ಕೈಕೇಯಿಯು ತನ್ನನ್ನು ಬಹಳವಾಗಿ ಸೋತ್ರಮಾಡುತ್ತ, ವೇ ದಿಕೆಯಲ್ಲಿ ಜ್ವಲಿಸುವ ಅಗ್ನಿಶಿಖೆ ಯಂತೆ, ಹಾಸಿಗೆಯಮೇಲೆಯೇ ಮಲಗಿರಲು, ಅವಳನ್ನು ನೋಡಿ ಮಂಥರೆಯು ('ಎಲೆ ಮಂಗಳಾಂಗಿ ! ಪ್ರವಾಹವು ಇಳಿದು ಹೋದಮೇಲೆ ಸೇತುವೆಯನ್ನು ಕಟ್ಟುವಂತೆ, ಈಗ ನೀನು ತಡೆಮಾಡಿ ದರೆ ಕೆಲಸವೇ ಕೆಡುವುದು ! ಏಳು ! ಎಳು ! ಈಗಲೇ ಹೋಗಿ ಕೋಪಗೃಹ ವನ್ನು ಸೇರಿ ರಾಜನನ್ನು ಇದಿರುನೋಡುತ್ತಿರು ! ರಾಮಾಭಿಷೇಕವು ನಡೆದು ಹೋದಮೇಲೆ, ನೀನು' ವರಗಳನ್ನು ಕೇಳಿದರೂ ಪ್ರಯೋಜನವಿಲ್ಲ” ಎಂ ದಳು.ಹೀಗೆ ಮಂಧರೆಯಿಂದ ಪ್ರೋತ್ಸಾಹಿಸಲ್ಪಟ್ಟ ಕೈಕೇಯಿಯು, ಆಕೆಯೊ ಡನೆಯೇ ಕೋಪಗೃಹವನ್ನು ಪ್ರವೇಶಿಸಿದಳು. ಅಲ್ಲಿ ತನ್ನ ಸೌಭಾಗ್ಯದ ಮದ ದಿಂದ ಕೊಬ್ಬಿದವಳಾಗಿ, ಲಕ್ಷವರಹಗಳ ಬೆಲೆಬಾಳುವ ಮುಕ್ತಾಹಾರ ಳನ್ನೂ, ತಾನು ತೊಟ್ಟಿದ್ದ ಇತರದಿವ್ಯಾಭರಣಗಳನ್ನೂ ಕಳೆದುಹಾಕಿದಳು! ಆ ಗೂಸಿಯ ಮಾತಿಗೆ ಮರುಳಾಗಿ, ಆ ಗೃಹದಲ್ಲಿ ನೆಲದಮೇಲೆ ಮಲಗಿಕೊಂಡಿದ್ದಳು. ಸ್ವಾಭಾವಿಕವಾದ ಸೌಂದಠ್ಯವುಳ್ಳ ಇವಳ ದೇಹವು ಆಭರಣಗಳೆಂದೂ ಇಲ್ಲದಿದ್ದರೂ, ನೋಡತಕ್ಕವರಿಗೆ ಸುವರ್ಣಪ್ರತಿಮೆ ಯಂತೆ ಕಾಣುತಿತ್ತು. ಹೀಗೆ ಅವಳು ನೆಲದಮೇಲೆ ಮಲಗಿಕೊಂಡು, ಮಂಥರೆಯನ್ನು ಕುರಿತು. (ಎಲೆ ಮಂಧರೆ ! ಒಂದುವೇಳೆ ಈಗ ನಾನು ಈ ಳುವ ವರವನ್ನು ನನ್ನ ಪತಿಯು ಕೊಡದೆಹೋದಪಕ್ಷದಲ್ಲಿ, ನಾನು ಇಲ್ಲಿಯೇ ಪ್ರಾಣತ್ಯಾಗವನ್ನು ಮಾಡುವುದೂ ನಿಜವು ! ಹಾಗಾದರೆ ಆಗ ನೀನು ರಾಜನಿಗೆ (ದಶರಥನಿಗೆ, ಅಥವಾ ಕೇಕಯರಾಜನಿಗೆ) ನಾನು ಸತ್ತ ಸುದ್ದಿಯ ನ್ನು ತಿಳಿಸಿಬಿಡಬೇಕು! ಹಾಗಿಲ್ಲದೆ ದಶರಥನು ನನ್ನ ದಾರಿಗೆ ಬಂದಪಕ್ಷದಲ್ಲಿ,