ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೫ ಸರ್ಗ ೧೮] ಯುದ್ಧಕಾಂಡವು ರಿಗೂಕೂಡ, ಉತ್ತಮಗುಣವುಳ್ಳ ಜ್ಞಾತಿಗಳಲ್ಲಿಯ ಶಂಕಿಸಬೇಕಾಗಿ ಬ ರುವುದು ಹೀಗಿರುವಾಗ ಪಾಪಬುದ್ಧಿಯುಳ್ಳ ರಾಜನಿಗೆ, ತನ್ನ ಜಾತಿಯ ವಿ ಷಯದಲ್ಲಿ ಶಂಕೆಯುಂಟಾಗುವುದೆಂಬುದನ್ನು ಹೇಳಬೇಕಾದುದೇನು? ಆದುದ ರಿಂದ ಈಗ ಈ ವಿಭೀಷಣನೂಕೂಡ, ಪಾಪಿಯಾದ ರಾವಣನು ತನ್ನಲ್ಲಿ ಶಂ ಕಿಸುವುದನ್ನು ನೋಡಿ, ಅವನೊಡನೆ ವಿರೋಧಿಸಿಕೊಂಡೇ ಬಂದಿರಬೇಕು. ಆದರ ಈಗ ಶತ್ರು ಪಕ್ಷದವನಾದ ಈತನನ್ನು ಕೈಸೇರಿಸಿಕೊಳ್ಳುವ ವಿಷಯ ದಲ್ಲಿ ನೀನು ದೋಷವನ್ನು ಹೇಳಿದೆಯಷ್ಟೆ ? ಅದಕ್ಕೂ ತಕ್ಕ ಸಮಾ ಧಾನ ವನ್ನು ಹೇಳಬಹುದು ನೀನು ಹೇಳಿದ ಆ ದೋಷವನ್ನೇ ಕಾರಣವಾಗಿಟ್ಟು, ಕೊಂಡು ನಾವು ಅವನನ್ನು ಪರಿಗ್ರಹಿಸಬೇಕೆಂಬುದಕ್ಕೆ ನೀತಿಶಾಸ್ತಾನು ಸಾರವಾದ ಒಂದು ಕಾರಣವೂ ಉಂಟು ಆದನ್ನೂ ನಿನ್ನ ಮನಸ್ಸಿಗೊಪ್ಪ ವಂತೆ ಹೇಳುವೆನು ಕೇಳು ನಾವು ಈ ರಾಕ್ಷಸಸಿಗೆ ಸಮನ ನಕುಲದವರಾದ ಜ್ಞಾತಿಗಳೂ ಅಲ್ಲ ಇವನ ರಾಜ್ಯಕ್ಕೂ ನಾವು ಆಸೆಪಡುವವರಲ್ಲ ರಾವಣ ನಲ್ಲಿರುವಂತೆ ಈತನಲ್ಲಿ ನಮಗೆ ಶತ್ರುತ್ವಶಂಕೆಗೂ ಅವಕಾಶವಿಲ್ಲ ಇತನಾ ದರೋ ರಾಜ್ಯದಾಸೆಯಿಂದಲೇ ನಮ್ಮ ಸ್ಲಿಗೆ ಬಂದಿರುವನು ಈತನಿಗೆ ನ ಪ್ರಿಂದ ರಾವಣನನ್ನು ಕೊಲ್ಲಿಸಬೇಕೆಂಬ ಉದ್ದೇಶವೂ ಇರುವುದರಿಂದ, ತನ್ನ ಕಾರವು ಕಡುವುದೆಂಬ ಭಯದಿಂದಾದರೂ ನಮಗೆ ಕೇಡನ್ನು ಬಯಸಲಾರ ನುಮಂದಬುದ್ಧಿಯುಳ್ಳ ರಾಕ್ಷಸರಿಗೆ ಇಷ್ಟು ದೂರಾಲೋಚನೆಯೆ”ನೆಂದು ಕೇಳುವೆಯಾ ? ರಾಕ್ಷಸರಲ್ಲಿಯೂ ಎಷ್ಟೊ ಬುಟ್ಟಶಾಲಿಗಳುಂಟು . ಆದು ದರಿಂದ ನಾವು ಈತನನ್ನು ಪರಿಗ್ರಹಿಸುವುದರಿಂದ ದೋಷಪಿಲ್ಲ ಜ್ಞಾತಿ ಗಳು ಒಬ್ಬರಿಗೊಬ್ಬರು ಎಷ್ಮೆ ಸಂತೋಷಸಮಾಧಾನಗಳಿಂದಿದ್ದರೂ, ಅವ ರಲ್ಲಿ ಐಕಮತ್ಯವುಮಾತ್ರ ಎಂದಿಗೂ ಹುಟ್ಟದು ಅವಸರವು ಬಂದಾಗ ಕಣ ಮಾತ್ರದಲ್ಲಿ ಥಟ್ಟನೆ ಕದಲಿಹೋಗುವರು ಈಗ ಈ ವಿಭೀಷಣನ ದೊಡ್ಡ ಕಂಧ್ವನಿಯನ್ನೂ , ಇವನ ಮನಸ್ಸಿನಲ್ಲಿರುವ ಆತುರವನ್ನೂ ನೋಡಿದರೆ, ಇವನು ತನ್ನ ಜ್ಞಾತಿಯಾದ ರಾವಣನಿಗೆ ಹೆದರಿ ಬಂದಿರುವಂತೆಯೇ ಕಾಣು ವುದು ಆ ಭಯದಿಂದಲೇ ಆತ್ಮರಕ್ಷಣವನ್ನು ಕೋರಿ ನಮ್ಮಲ್ಲಿಗೆ ಬಂದಿರ ಬಹುದಾದುದರಿಂದ, ಇವನನ್ನು ಪರಿಗ್ರಹಿಸುವುದೇ ಯುಕ್ತವು ಎಷ್ಟೇ ದು 138