ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୨୦୫ ಶ್ರೀಮದ್ರಾಮಾಯಣವು (ಸರ್ಗ ೧೮. ಬೇಡನು ತನ್ನ ಬಳಿಗೆ ಬಂದೊಡನೆ, ಆವನನ್ನು ಪ್ರತಿಗ್ರಹಿಸಿತ್ತಲ್ಲವೆ ? ಇನ್ನು ನನ್ನಂತವನು, ಮರೆಹೊಕ್ಕು ಬಂದವರಲ್ಲಿ ಹೇಗೆ ನಡೆದುಕೊಳ್ಳಬೇಕೆಂಬು ದನ್ನು ಹೇಳಬೇಕಾದುದೇನು ? * ಕಮಹರ್ಷಿಗೆ ಪತ್ರನಾಗಿಯೂ, ಸ ತ್ಯವಾದಿಯಾಗಿಯೂ ಇದ್ದ ಕಂಮಹಾಮುನಿಯು, ಪೂತ್ವದಲ್ಲಿ ಶರಣಾ ಗತಿಧರ ಬೋಧಕವಾದ ಒಂದುಗಾಥೆಯನ್ನು ಹೇಳಿರುವನು , ಆದನ್ನೂ ತಿಳಿ ವಾದ ಬೇಡನೊಬ್ಬನು ಚಳಿಯಿಂದ ಪೀಡಿತನಾಗಿ ತಾನಿದ್ದ ಮರದ ಕೆಳಗೆ ಬಂದು ನಿಂತ ಮಾತ್ರದಲ್ಲಿಯೇ, ಅವಮುಂದೆ ಒಣಗಿದ ಹುಲ್ಲುಕಡ್ಡಿಗಳನ್ನು ತಂದು ಸೇರಿಸಿ, ಬೆಂಕಿ ಯನ್ನು ರಿಸಿ, ಆತನಿಗೆ ಶೀತ ಬಾಧೆಯನ್ನು ನಿವರ್ತಿಸಿದುದಲ್ಲದೆ, ಅವನ ಹಸಿವಾರಿಸುವು ದಕ್ಕಾಗಿ ತನ್ನ ದೇಹದ ಮಾಂಸವನ್ನೇ ಚೆನ್ನಾಗಿ ಪಚನಮಾಡಿ ಅವನಿಗೊಪ್ಪಿಸಬೇಕೆಂ ದು, ತಾನೂ ಚಿತೆಯಲ್ಲಿ ಬಿದ್ದಿತು ಹೀಗೆ ಅಜ್ಞಾನಜಂತುವಾದ ಕೇವಲಪಕ್ಷಿಯೊಂದು, ತನಗೆ ಪ್ರತ್ಯಕ್ಷ ಶತ್ರುವಾಗಿದ್ದರೂ ತನ್ನ ಮರೆಗೆ ಬಂದವನನ್ನು ಸತ್ಕರಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಒಪ್ಪಿಸಿರುವುದು ? ಹೀಗಿರುವಾಗ ಜ್ಞಾನಿಗಳಾಗಿಯೂ, ಶರಣಾ ಗತರಕ್ಷಣೆಯಿಂದ ಪ್ರಸಿದ್ಧಿ ಹೊಂದಿದ ಇಕ್ಷಾಕಂಕುಲದಲ್ಲಿ ಜನಿಸಿದವರಾಗಿಯೂ, ಎಷ್ಟೇ ವಿರೋಧಗಳು ಬಂದರೂ ಸವರಿಸತಕ್ಕೆ ಶಕ್ತಿಯುಳ್ಳವರಾಗಿಯೂ ಇರುವ ನನ್ನಂತವರು, ಶರಣಾಗತರ ವಿಷಯದಲ್ಲಿ ಹೇಗೆ ನಡೆಯಬೇಕೆಂಬುದನ್ನು ಕೇಳಬೇಕೆ | ಇದರಮೇಲೆ ಈಗ ನಮ್ಮಲ್ಲಿಗೆ ಬಂದಿರುವವನೂ ಶತಸುಬಂಧವಳ್ಳವನುಮಾತ್ರವೇ ಹೊರತು ಬೇಡನಂತ ಸಾಕ್ಷಾತ್ಕೃತುವಲ್ಲ ! ಭಾರೈಯನ್ನ ಪಹರಸಿದವನು ಮಾತ್ರವೇ ಹೊರತು ಬೇಡವಂತೆ ಭಾರೆಯನ್ನು ಕೊಂದವನಲ್ಲ ! ಇವನು ತನಾಗಿ ನಾವಿದ ಕಡಗೆ ಬಂದು ನಮ್ಮನ್ನು ಬಾಯಿ ಬಿಟ್ಟು ಪ್ರಾರ್ಥಿಸುತ್ತಿರುವನೇಹೊರತು ಆ ಬೇಡನಂತೆ ಸುಮ್ಮನೆ ಬಂದು ನಿಂತವನಲ್ಲ ! ಕೇವಲತ್ತಿಠ್ಯಕ್ಕಾದ ವಾರಿರಾಳವು, ಹಾಗೆ ದೋಷಭ ಮಿಷ್ಟನಾದ ಆ ಬೇಡನನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಒಪ್ಪಿಸಿರುವಾಗ, ಜ್ಞಾನಿಗಳಾದ ನಾವು ಗುನಾ ಭೂಯಿಷ್ಠನಾದ ಇವನನ್ನು ರಕ್ಷಿಸುವುದಕ್ಕಾಗಿ ನಡಸಬೇ ಕಾದ ಅತ್ಯಲ್ಪ ಕಾವ್ಯಕ್ಕೆ ಹಿಂದೆಗೆಯುವುದೆಂದರೇನು?” ಎಂದು ಭಾವವು,

  • ಇದರ ಮೇಲೆ 'ಶಾಸ್ಕಾಧಿಕಾರವಿಲ್ಲದ ಈ ತಿರಗಂತುಗಳ ಅನುಷ್ಠಾನವೇ ನಮಗೆ ಉವಾಡೇಯಲ್ಲ, ಆ ತಿರ,ಕುಗಳು ತಮ್ಮ ಪ್ರಭಾವಾನುಗುಣವಾಗಿ ಮಾಡಿ ದುದು ಧರವೆನಿಸುವುದೆ ? ಶಾಸ್ತ್ರ ವಿಧಿಯನ್ನನುಸರಿಸಿ ನಡೆಸುವುದೇ ಧರ ವೆನಿಸುವು ದು, ಹಾಗೆ ಇದಕ್ಕೆ ಶಾಸ್ತ್ರಚೋದನವೆಲ್ಲಿ?” ಎಂದು ಸುಗ್ರೀವನು ಆಕ್ಷೇಪಿಸಬಹುದೆಂಬು ದಕ್ಕಾಗಿ, ರಾಮನು ಈ ವಿಷಯದಲ್ಲಿ ಆಪ್ತವಾಕ್ಯ ಪ್ರಮಾಣವೂ ಉಂಟೆಂದು ತೋರಿ