ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೯೮ ಶ್ರೀಮದ್ರಾಮಾಯಣವು [ಸರ್ಗ ೧೮. ಎಂದು ಹೇಳಿ ಯಾಚಿಸಿದಪಕ್ಷದಲ್ಲಿ, ಅಂತವನಿಗೆ ನಾನು ಸಮಸ್ತಭೂತಗ ಪವಾದಿಸುವುದರಿಂದ, ಅದು ತನ್ನ ಮನಸ್ಸಿಗೆ ಪ್ರಿಯವೆಂಬುದನ್ನೂ ತೋರಿಸಿರುವನು ಹೀಗೆ ನಾಲ್ಕು ಪ್ರಮಾಣಗಳನ್ನೂ ತೋರಿಸಿ, ಈ ಶ್ಲೋಕದಿಂದ 'ಸತ್ಯಕ್ಸಂಕಲ್ಪ ಜ ಕಾಮ” ಎಂಬ ಐದನೆಯಪ್ರಮಾಣವನ್ನು ತೋರಿಸುವನು (ಸಕೃದೇವ) ಒಂದಾ ವೃತ್ತಿಯೇ ಎಂದರೆ, ಭಕ್ತಿ ಮೊದಲಾದ ಉಪಾಯಗಳಲ್ಲಿ ಎರಡುಮೂರೆಂಬ ಆವೃತ್ತಿಯು ಶಾಸ್ತಾರವಾಗುವುದೇ ಹೊರತು, ಪ್ರಪತ್ತಿಯ ವಿಷಯದಲ್ಲಿ ಮಾತ್ರ, ತಿರುಗಿ ಆವೃತ್ತಿ ಯಿಲ್ಲವೆಂಬುದೇ ಶಾಸ್ತಾವು 'ಸಕೃದೇವಹಿ ಶಾಸ್ತಾರಃ ಕೃತೋಯಂ ತಾರಯೇ ೩ರಂ” ಎಂಬುದು ಪ್ರಪತ್ತಿಶಾಸ್ತ್ರವು (ಪ್ರಪನ್ನಾಯ) ಬಂದು ಸೇರಿದವನಿಗೆ, ಎಂದರೆ ಪ್ರಪತ್ತಿ ಮಾಡಿದವನಿಗೆಂದರ್ಥವು ಗತ್ಯಣ್ಣಕಗಳೆಲ್ಲವೂ ಜ್ಞಾನಾರ್ಥಕಗಳಾಗುವುವೆಂಬ ನ್ಯಾಯದಿಂದ, ಪ್ರಸನ್ನ ಶಬ್ದವು ಜ್ಞಾನರೂಪವಾದ ಮಾನಸಿಕಪ್ರಪತ್ತಿಯನ್ನು ತೋರಿ ಸುವುದು (ತವಾಸೀತಿಳ) ಎಂಬುದರಿಂದ, ವಾಚಿಕಪ್ರಪಸ್ತಿಯು ಹೇಳಲ್ಪಡುವುದು ಇಲ್ಲಿ ಇವೆರಡನ್ನೂ ಹೇಳಿರುವುದರಿಂದ, ಇವೆರಡರಲ್ಲಿ ಯಾವುದೊಂದಿದ್ದರೂ ತನಗೆ ಪರಿಗ್ರಾಹ್ಯವೆಂದು ಭಾವವು ಅಥವಾ (ಪ್ರಪನ್ನಾ ಯ) ಎಂಬುದರಿಂದ ಉವಾಯವೂ, (ತವಾಶಿತ ಯಾಚತೇ) ಎಂಬುದರಿಂದ ತಚ್ಛೇಷವೃತ್ತಿಯೆಂಬ ಛಲವಿಶೇಷವಾಕ್ಷ ನೆಯ ಸೂಚಿಸಲ್ಪಡುವುದು ಇಂತಹ ಅಧಿಕಾರಿಗಾಗಿ (ಸರಭತಭ೪) ಸಮಸ ಭೂತಗಳದೆಸೆಯಿಂದಲೂ, (ಅಭಯಂ) ಭಯವಿಲ್ಲದಿರುವಿಕೆಯನ್ನು , ದದಾಮಿ) ಕೋ ಡುವೆನು” ಎಂದರ್ಥವು ಇಲ್ಲಿ ಅಭಯವೆಂದರೆ ಮೋಕ್ಷವು 'ಅಥಸೊ೮ಭಯಂ ಗತೋ। ಭವತಿ ಆನಂದೋ ಬ್ರಹ್ಮಣೋ ವಿದ್ವಾನ್ನ ಬಿಭೇತಿ ಕುತಶ್ನ”ಇತ್ಯಾದಿ ಶ್ರುತಿಗಳು ಅಭಯವನ್ನು ಬ್ರಹ್ಮ ವಿದ್ಯೆಗೆ ಫಲವಾಗಿ ಹೇಳಿರುವುದರಿಂದ, ಇಲ್ಲಿಯೂ ಅಭಯವೆಂ ಬುದು ಮೋಕ್ಷಪರಾಯವು (ತವಾಸ್ಮಿ) ಎಂಬದಕ್ಕೆ ಫಲವಿಶೇಷಪ್ರಾರನೆಯೆಂಬ ಪಕ್ಷ ದಲ್ಲಿ ಮಾತ್ರವೇ ಈ ಅರವು ಅನುಕೂಲಿಸುವುದು ಪಕ್ಷಾಂತರದಲ್ಲಿಯೋ ಭಗವಂತನೇ ಸಕಲಫಲಪ್ರದನಾದುದರಿಂದ, ಈ ಅಭಯಶಬ ವು ಮೋಕಕ್ಕೆ ಮಾತ್ರವೇ ಅಲ್ಲದೆ, ಧ ಬ್ಯಾರಕಾಮಫಲಗಳಿಗೆ ಉಪಲಕ್ಷಣವಾಗಬಹುದು (ಏತದೃತಂ ಮಮ) ಇದು ನನ್ನ ವ್ರತವು, ವ್ರತಾನುಷ್ಟಾನದಂತೆ ಎಂತಹ ಕಷ್ಟದಶೆಯಲ್ಲಿಯೂ ಇದನ್ನು ಬಿಡದೆ ತಾನು ನಡೆಸಿಯೇ ತೀರಬೇಕೆಂದು ಭಾವವು, ಅಥವಾ ಮೇಲಿನ (ಸರಭೂತೇಭ3) ಎಂಬುತ ಕ್ಕೆ ಪಂಚಯ್ಯರವನ್ನು ಬಿಟ್ಟು, ಸಮಸ್ತ ಪ್ರಾಣಿಗಳಿಗೂ ಅಭಯವನ್ನು ಕೊಡುವುದಾ ಗಿ ಚತುರರವನ್ನೂ ಹೇಳಬಹುದು ಇದರಿಂದ ತನ್ನಲ್ಲಿ ಯಾರೇ ಶರಣಾಗತನಾದ ರಡಿ, ಅವರ ಜಾತಿಗುಣಾದಿಭೇದಗಳೊಂದನ್ನೂ ಎಣಿಸದೆ, ಅಂತವರೆಲ್ಲರಿಗೂ ತಾನು