ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೬ ಶ್ರೀಮದ್ರಾಮಾಯಣವು [ಸರ್ಗ, ೨೧. ಕ್ಕಿದಿರಾಗಿ ಮಲಗಿದನು ಹೀಗೆ ರಾಮನು ನಿಯಮವನ್ನು ಹಿಡಿದು ಎಚ್ಚರಿಕೆ ಯಿಂದ ದರ್ಭಶಯನದಮೇಲೆ ಮಲಗಿರಲು, ಹಾಗೆಯೇ ಮರುರಾತ್ರಿಗ ಳು ಕಳೆದುಹೋದುವು *ನೀತಿಜ್ಞನಾಗಿಯೂ, ಧರ್ಮವತ್ಸಲನಾಗಿಯೂ, ಇದ ರಾಮನು, ಹೀಗೆ ಮೂರುರಾತ್ರಿಗಳವರೆಗೂ ಎಡೆಬಿಡದೆ ಹಾಗೆಯೇ ಮಲಗಿ, ನದೀನಾಥನಾದ ಸಮುದ್ರವನ್ನು ಉಪಾಸನೆ ಮಾಡಿದನು ಮ ದಾಂಧನಾದ ಸಮುದ್ರನಾದರೋ ಇಷ್ಟಾದರೂ ರಾಮನಿಗೆ ತನ್ನ ರೂ ಪವನ್ನು ತೋರಿಸಲಿಲ್ಲ. ಹೀಗೆ ರಾಮನು ಎಷ್ಟೋ ನಿಯಮದಿಂದ ವಿಧಿಯನ್ನ ನುಸರಿಸಿ ಆರಾಧಿಸುತಿದ್ದರೂ,ಸಮುದ ನು ಪ್ರತ್ಯಕ್ಷನಾಗದಿರಲು, ಆಗ ರಾಮ ನಿಗೆ ಸಮುದ್ರದಮೇಲೆ ಸ್ವಲ್ಪ ಸ್ವಲ್ಪವಾಗಿ ಕೋಪವು ಅಂಕುರಿಸಿತು ಅವನ ಕಡೆಗಣ್ಣುಗಳು ಕೆಂಪೇರಿದುವು. ಹೀಗೆ ಕೋಪಗೊಂಡ ರಾಮನು ಸಮೀಪ ದಲ್ಲಿದ್ದ ಲಕ್ಷ್ಮಣನನ್ನು ಕುರಿತು ವತ್ಸಲಕ್ಷಣಾ ' ಇಷ್ಟಾದರೂ ನಮ ಗೆ ಪ್ರತ್ಯಕ್ಷನಾಗದಿರುವ ಈ ಸಮುದ್ರದ ಗರ್ವವನ್ನು ನೋಡಿದೆಯಾ ? ಲೋಕದಲ್ಲಿ ಕೋಪವನ್ನು ನಿಗ್ರಹಿಸುವುದೂ, ತಪ್ಪನ್ನು ಮನ್ನಿ ಸುವುದೂ ಋಜುಸ್ವಭಾವವೂ, ಯಾವಾಗಲೂ ಪ್ರಿಯವಾಕ್ಯವನ್ನು ನುಡಿಯುವುದೂ, - * ಇಲ್ಲಿ ಸ ತ್ರಿರಾತೊಷಿತಸ್ಸತ್ರ ನಯಜ್ಯೋ ಧರ ವತ್ಸಲಃ” 1 ಉಪಾಸತ ತದಾ ರಾಮಸ್ವಾಗರಂ ಸರಿತಾಂ ಸತಿಂ || ನಟ ದರ್ಶಯತೇ ದನ ಸದಾ ರಾಮಸ್ಯ ಸಾಗರ ” ಎಂದು ಮೂಲವು, ರಾಮನು ಸರಶಕನಾಗಿರುವಾಗ ಸಮುದ್ರದಲ್ಲಿ ಶರ ಣಾಗತಿಯನ್ನು ಮಾಡಿದುದೇಕೆ? ಎಂದರೆ, 'ಧರ ವತ್ಸಲಃ” ಶರಣಾಗತಿಧರ ದಲ್ಲಿ ಪ್ರೀತಿ ಯುಳ್ಳವನಾದುದರಿಂದಲೇ ಹಾಗೆ ನಟಿಸಿದುದಾಗಿ ಸಾಭಿಪ್ರಾಯವಿಶೇಷಣವ, ಹಾಗೆಯೇ (ಸರಿತಾ೦ಪತಿ೦) ಎಂಬ ವಿಶೇಷಣದಿಂದ, ವಿಷ್ಣು ರೂಪಿಯಾದ ತನ್ನನ್ನಾಶ್ರಯಿಸುವು ಹಕ್ಕೆ ಲಕ್ಷ್ಮೀದೇವಿಯ ಪರುಷಕಾರವಿರುವಂತೆ, ಸಮುದ್ರ ತನ್ನನ್ನಾಶ್ರಯಿಸುವು ದಕ್ಕೆ ಪುರುಷಕಾರಭೂತರಾದ ಸರಿತ್ತುಗಳೊಡನೆ ಕೂಡಿ ಬಂದಿರುವುದಾಗಿ ಭಾವವು. ಆದರೆ ರಾಮನು ಹೀಗೆ ಕ್ರಮವಾಗಿ ಮಾಡಿದ ಶರಣಾಗತಿಯೂ ಫಲಿಸದೆ ಹೋದುದೇಕೆ? ಎಂದರೆ, ರಾಮನು ಎಂದಿಗೂ ಇಂತಹ ಶರಣಾಗತಿಗೆ ಅಧಿಕಾರಿಯಲ್ಲಿ ಅಕಿಂಚನನೇ ಅದಕ್ಕಧಿಕಾರಿಯು, ಬ್ರಾಹ್ಮಣನು ಕ್ಷತ್ರಿಯರಿಗೆ ವಿಹಿತವಾದ ರಾಜಸೂಯವನ್ನು ಎಷ್ಟಕ್ರಮವಾಗಿ ನಡೆಸಿದರೂ, ಹೇಗೆ ಫಲಿಸದೆ, ಹಾಗೆಯೇ ಅನಧಿಕಾರಿಯಾದ ರಾಮನು ನಡೆಸಿದ ತರಣಾಗತಿಯು ಅವನಿಗೆ ಫಲಿಸಲಿಲ್ಲವೆಂದು ಗ್ರಾಹ್ಯವು.