ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩.೪. ೨೨೩.೪ ಶ್ರೀಮದ್ರಾಮಾಯಣವು (ಸರ್ಗ, ೨೨ ಚದಲ್ಲಿ ಸೃಥಿವಿ, ಅಪ್ಪ, ತೇಜಸ್ಸು ವಾಯು, ಆಕಾಶಗಳೆಂಬ ಪಂಚಭೂತ ಗಳೂ ತಮತಮಗೆ ಸ್ಥಿರವಾದ ಒಂದೊಂದು * ಮತ್ಯಾದೆಯನ್ನು ಹಿಡಿದು, ತಮ್ಮ ತಮ್ಮ ಸ್ವಭಾವದಿಂದಿರುವುವು ಇದು ನಿನಗೆ ತಿಳಿಯದ ವಿಷಯವಲ್ಲ. ಅದರಂತೆ ನಾನೂ ಇತರರಿಗೆ ಬಾವಲಸಾಧ್ಯನಾಗಿ ಅಗಾಧನಾಗಿರುವುದು ನನಗೆ ಸ್ವಭಾವವೇಹೊರತು ಬೇರೆಯಲ್ಲ. ನಾನು ಈ ಸ್ವಭಾವವನ್ನು ಬಿ ಟ್ಟು ಹೋಗಬಹುದೆ ? ಆಳವಿಲ್ಲದೆ ಇತರರಿಂದ ಸುಲಭವಾಗಿ ದಾಟಿಹೋಗು ವುದಕ್ಕೆ ತಕ್ಕಂತೆ ನಾನು ನನ್ನ ಸ್ವಭಾವವನ್ನು ವ್ಯತ್ಯಾಸಪಡಿಸಿಕೊಂಡರೆ, ವಿರುದ್ಧ ಸ್ವಭಾವವನ್ನು ಹೊಂದಿದಂತಾಗುವುದಲ್ಲವೆ ? ಇದ್ದ ಸ್ಥಿತಿಯನ್ನು ನಿನಗೆ ತಿಳಿಸಿರುವೆನು ಇದಕ್ಕಾಗಿಯೇ ನಾನು ನಿನಗೆ ಕಾಣಿಸಿಕೊಳ್ಳದಿದ್ದೆನು ರಾಮಾ ' ಒಂದುವೇಳೆ ನೀನು ಜಲವನ್ನಾದರೂ ಸ್ತಂಭಿಸಿಟ್ಟುಕೊಂಡುನ ನಗೆಮಾತ್ರ ದಾರಿಯನ್ನು ಕೊಡಬಾರದೆ?” ಎಂದು ಕೇಳಬಹುದು. ನೀನು ರಾ ಜಕುಮಾರನಾದುದರಿಂದ ಲೋಕದಲ್ಲಿ ಅವರವರ ಮಾದೆಯನ್ನು ನೀನೇ ನಿರ್ಣಯಿಸತಕ್ಕವನು ಇತರರಿಗೆ ಬಾಧೆಯಿಲ್ಲದಂತೆ ರಕ್ಷಿಸತಕ್ಕವನೂ ನೀ ನೇ ಅಲ್ಲವೆ ? ಹೀಗಿರುವಾಗ ನಾನು ಕಾಮದಿಂದಲಾಗಲಿ, ಲೋಭದಿಂದ ಲಾಗಲಿ, ನಿನ್ನ ಭಯಕ್ಕಾಗಲಿ, ಅನೇಕಜಲಜಂತುಗಳಿಗಾಶ್ರಯವಾದ ನನ್ನ ಜಲವನ್ನು ಸ್ವಂಭಿಸಿಟ್ಯ ಪಕ್ಷದಲ್ಲಿ, ಆ ಪ್ರಾಣಿಗಳಿಗೆಲ್ಲಕ್ಕೂ ಬಾಧೆಯುಂಟಾಗು ವುದಲ್ಲವೆ ! ಆದುದರಿಂದ ನನ್ನ ನೀರನ್ನು ನಾನು ಎಷ್ಟು ಮಾತ್ರವೂ ಸ್ತಂಭಿ ಸಲಾರೆನು, ಆದರೆ ಇದರಿಂದ ನಿನ್ನ ಕಾಠ್ಯವು ಕೆಡುವುದೆಂದೆಣಿಸಬೇಡ ನ ನ್ನಿಂದ ಸಾಧ್ಯವಾದಮಟ್ಟಿಗೆ ನಿನಗೆ ಸಹಾಯಮಾಡುವೆನು, ನಿನ್ನ ಸೇನೆಯು ಈ ನನ್ನ ಜಲಪ್ರವಾಹವನ್ನು ದಾಟಿ ಹೋಗುವವರೆಗೂ,ನನ್ನಲ್ಲಿರುವ ಮೀನು, ಮೊಸಳೆಮುಂತಾದ ಜಲಜಂತುಗಳಾವುವೂ ಬಾಧಿಸದಂತೆ ತಡೆದಿಡಬಲ್ಲೆನು. ಇಷ್ಟು ಸಹಾಯವನ್ನು ಮಾತ್ರ ನಾನು ಮಾಡಬಹುದು, ಮತ್ತು ಈ ವಾನ ರರು ಸಮುದ್ರವನ್ನು ದಾಟುವವಿಷಯದಲ್ಲಿ ನಾನು ಬೇರೊಂದು ವಿಧವಾ

  • ಇಲ್ಲಿ ಭೂಮಿಗೆ ಕಾರಿನ್ಯವೂ,ವಾಯುವಿಗೆ ಸದಾಗಮನ ತಿರಗಮನಗಳೂ, ಆಕಾಶಕ್ಕೆ ಅವಕಾಶಪ್ರದಾನವೂ, ನೀರಿಗೆ ಅಗಾಧತ್ವವೂ, ಅಗ್ನಿಗೆ ಊರ್ಧ್ವಜ್ವಲನವೂ ಸಹಜ ಭಾವವೆಂದು ತಿಳಿಯಬೇಕು