ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೫ ಸರ್ಗ ೨೨] ಯುದ್ಧಕಾಂಡವು. ದ ಸಹಾಯವನ್ನೂ ಮಾಡಬಹುದು, ಅವರು ಸೇತುವನ್ನು ಕಟುವುದಕ್ಕಾ ಗಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ನನ್ನ ಮೇಲೆ ಸಂಗ್ರಹಿಸಿಟ್ಟರೂ, ಆ ದನ್ನು ಚದರಿಸದೆ ಸ್ಥಿರವಾಗಿ ನಿಲ್ಲಿಸಿಕೊಳ್ಳುವೆನು ನೀನು ಸೇತುವನ್ನು ಕಟ್ಟೆ ಸಬಹುದು.” ಎಂದನು ಆಗ ರಾಮನು ಸಮುದ್ರನನ್ನು ನೋಡಿ ಎಲೆ, ಸ ಮುದ್ರರಾಜನೆ?ಒಳ್ಳೆಯದು ! ಹಾಗಿದ್ದ ಪಕ್ಷದಲ್ಲಿ, ಈಗ ನಾನು ನಿನ್ನ ಮೇಲೆ ಪ್ರಯೋಗಿಸುವುದಕ್ಕಾಗಿ ಈ ಬ್ರಹ್ಮಾಸ್ತ್ರವನ್ನು ಬಿಲ್ಲಿನಲ್ಲಿ ಸಂಧಾನಮಾಡಿರು ವೆನು ಈ ಬಾಣವು ಅಮೋಘವಾದುದು'ಇದು ವ್ಯರ್ಥವಾಗತಕ್ಕುದಲ್ಲ ಇದ ನ್ನು ಎಲ್ಲಿಗೆ ಬಿಡಲಿ? ಹೇಳು” ಎಂದನು ಆಗ ಸಮುದ್ರನು ರಾಮನ ಮಾತನ್ನು ಕೇಳಿ, ಆ ರಾಮನು ಬಿಲ್ಲಿನಲ್ಲಿ ಸಂಧಾನಮಾಡಿದ್ದ ಬಾಣವನ್ನೂ ನೋಡಿ, ತನ್ನ ಲ್ಲಿ ರಾಮನು ಪ್ರಸನ್ನ ನಾದುದಕ್ಕಾಗಿ ಉಲ್ಲಾಸಹೊಂದಿದ ಮುಖವುಳ್ಳವ ನಾಗಿ,ರಾಮನನ್ನು ಕುರಿತು 'ಎಲೈ ರಾಜಪುತ್ರನೆ' ಇಲ್ಲಿಗೆ ಸಮೀಪವಾಗಿ ಉತ್ತ ರಭಾಗದಲ್ಲಿ ಬಹಳರಮಣೀಯವಾದ ದ್ರುಮಕುಲ್ಯವೆಂಬ ಒಂದು ಪ್ರದೇಶ ವುಂಟು, ಅದು ಅತ್ಯಂತ ಪರಿಶುದ್ಧವಾದುದು. ನಿನ್ನಂತೆಯೇ ಲೋಕದಲ್ಲಿ ಮ ಹಾಪ್ರಸಿದ್ದಿಯನ್ನು ಹೊಂದಿರುವುದು ಆದರೆ ಆ ಸ್ಥಳದಲ್ಲಿ ಘೋರರೂಪಿಗ ಳಾಗಿಯೂ, ಕೂರಕರಿಗಳಾಗಿಯೂ ಇರುವ ಕೆಲವು ಶೂದ್ರರು ವಾಸಮಾ ಡುತ್ತಿರುವರು ಅವರು ನನಗೆ ಕೇವಲಶತ್ರುಗಳ' ಬಹಳ ಪಾರಾತ್ಮರು ಅವರು ನನ್ನನ್ನು ಮುಟ್ಟಿ ನನ್ನ ನೀರನ್ನು ಕುಡಿಯುತ್ತಿರುವರು ಪಾಪಕರಿ ಗಳಾದ ಆ ದುಷ್ಟರ ಸ್ಪರ್ಶವನ್ನು ನಾನು ಸಹಿಸಲಾರೆನು. ಆದುದರಿಂದ ಅಮೋಘವಾದ ಈ ನಿನ್ನ ಬಾಣವನ್ನು ಅಲ್ಲಿ ಅವರಮೇಲೆ ಪ್ರಯೋಗಿಸಿ ಸಾರ್ಥಕಪಡಿಸು.”ಎಂದನು. ಈ ಮಾತನ್ನು ಕೇಳಿ ರಾಮನು, ಸಮುದ್ರರಾ ಜನ ಇಷ್ಟದಂತೆ ಅವನು ಕೈತೋರಿಸಿದಕಡೆಗೆ ತನ್ನ ಬಾಣವನ್ನು ಪ್ರಯೋಗಿಸಿಬಿಟ್ಟನು. ಸಿಡಿಲಿಗೆ ಸಮಾನವಾಗಿ ಜ್ವಲಿಸುತಿದ್ದ ಆ ಬಾಣ ವನ್ನು ಪ್ರಯೋಗಿಸಿದೊಡನೆ, ಆ ಸ್ಥಳವೆಲ್ಲವೂ ಅದರಿಂದ ದಗ್ಧವಾಗಿ ಮರುಕಾಂತಾರವೆಂದು ಲೋಕದಲ್ಲಿ ಪ್ರಸಿದ್ಧವಾಯಿತು ಆ ಬಾಣದಲಗು ಭೂಮಿಗೆ ನಾಟಿಕೊಂಡು ಹೋಗುವಾಗ, ಆ ರಂಧ್ರದ ಮೂಲಕವಾಗಿ ಪಾತಾಳದಿಂದ ನೀರು ಮೇಲಕ್ಕೆ ಹಾರಿತು ಅದರಿಂದ ಮಹಾಧ್ವನಿಯೊಂ