ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೪ ಶ್ರೀಮದ್ರಾಮಾಯಣವು [ಸರ್ಗ, ೨೩° ಗುಂಡಿ ತನ್ನ ಕಿರಣದಿಂದ ಸಂತಾಪಗೊಳಿಸುತ್ತಿರುವನು ಅದೋ ಅಲ್ಲಿ ಸೂರೆನಸುತ್ತಲೂ * ಕೆಂಪು, ಕಪ್ಪ, ಮತ್ತು ಎಳಗೆಂಪುಬಣ್ಣಗಳ ಮಿಶ್ರ ರೇಖೆಯುಳ್ಳ ಪರಿವೇಷವು ಕುರುಚಾಗಿ, ಭಯಂಕರವಾಗಿ, ಹಿಂದೆ ಯಾ ವಾಗಲೂ ನೋಡದ ಅದ್ಭುತಾಕಾರದಿಂದ ಕಾಣುವುದು ನೋಡು ಇದನ್ನು ನೋಡಿದರೆ ಪ್ರಳಯಕಾಲದಲ್ಲಿ ಲೋಕಕ್ಷಯಸೂಚಕವಾಗಿ ಹುಟ್ಟುವ ಪ ರಿವೇಷದಂತೆಯ ತೋರುತ್ತಿರುವುದು ವತ್ಸ ಲಕ್ಷಣಾ' ಅದೊ' ಆತ್ರಲಾ ಗಿ ನಿರ್ಮಲವಾದ ಸೂರಮಂಡಲದ ನಡುವೆ,ರಂಧಾಕಾರವಾಗಿ ಕಪ್ಪಾ ದ ಕಳಂಕವು ಕಾಣುವುದು ನೋಡು ಆಕಾಶದ ನಕ್ಷತ್ರಗಳೆಲ್ಲವೂ ವಿಶೇಷ ವಾಗಿ ಧೂಳಿಯಿಂದ ಮುಚ್ಚಿ, ಕಾಂತಿಗುಂದಿ, ಮಲಿನವಾಗಿ ಲೋಕಕ್ಕೆ ಪ್ರಳ ಯವನ್ನು ಸೂಚಿಸುವಂತಿರುವುವು ಕಾಗೆ,ಹಮ್ಮು, ಮೊದಲಾದ ಬಹಳ ಬಲ ವುಳ್ಳ ಮಾಂಸಾಹಾರಿಪಕ್ಷಿಗಳಕೂಡ,ಕೇವಲದುರ್ಬಲಗಳಾದ ಸಣ್ಣ ಸಣ್ಣ ಹಕ್ಕಿಗಳಿಂದ ಪ್ರತಿಹತಗಳಾಗಿ ಕೆಳಗೆ ಬಿಳುವು ದನ್ನು ನೋಡು ಅಲ್ಲಲ್ಲಿ ನರಿ ಗಳು ಭಯಂಕರವಾದ ಆಮಂಗಳಧ್ವನಿಯಿಂದ ಊಳಿಡುತ್ತಿರುವುವು ವತ್ತು ಲಕ್ಷಣಾ' ಈ ಮಹೋತ್ಪಾತಗಳನ್ನು ನೋಡಿದರೆ, ಇನ್ನು ಮುಂದೆ ನಮ ಗೂ, ರಾಕ್ಷಸರಿಗೂ ದೊಡ್ಡ ಯುದ್ಧವು ಪ್ರಾಪ್ತವಾಗಿ, ಅದರಲ್ಲಿ ಶೂರ ರಾದ ವಾನರರೋ, ರಾಕ್ಷಸರೂ ಒಬ್ಬರಮೇಲೊಬ್ಬರು ಪ್ರಯೋಗಿಸುವ ಬೆಟ್ಟಗುಡ್ಡಗಳಿಂದಲೂ, ಖಡ್ತಾ ಧ್ಯಾಯುಧಗಳಿಂದಲೂ, ಭೂಮಿಯೆಲ್ಲ

  • ಇಲ್ಲಿ ಮೂರುಬಣ್ಣಗಳಿಂದ ಮೂರುಮಂಡಲವನ್ನು ಹೇಳುವುದರಿಂದಲೂ, ಸಾಯಂಕಾಲದ ವೇಳೆಯಾದುದರಿಂದಲೂ, ಇಲ್ಲಿ ಹೇಳಲ್ಪಟ್ಟ, ಪರಿವೇಷವು ರಾಜನಿಗೆ ನಾಶಸೂಚಕವೆಂದು ಗ್ರಹಿಸಬೇಕು ಈ ವಿಷಯದಲ್ಲಿ” ದ್ವಿಮಂಡಲಕ್ಷ್ಮಮಪಫೆ ನೃಪಘ ಯಸ್ಸಿಮಂಡಲ...” ಎಂದು ಕಾಶ್ಯಪವಚನವು ಇದಲ್ಲದೆ 11 ದಿನಕರ ಪರಿವೇ ಷಃ ಪೂರೈಯಾಮೇತು ಪೀಡಾ|ದಿನಕರಪರಿವೇಷ ವೃಷ್ಟಿಯುದ್ಧಂ ದ್ವಿತೀಯೇ | ದಿನಕರಪರಿವೇಷಂ ಕ್ಷೇಮಮಾಹು ಸೃತಿಯೇ | ದಿನಕರಪರಿವೇಷ ಸ್ಪರನಾಶಶ್ಯತು ಈ 11 ” ಎಂದು ಈ ಪರಿವೇಷವೇ ಚತುರ್ದಯಾನದಲ್ಲಿ ಎಂದರೆ ಸಾಯಂಕಾಲದಲ್ಲಿ ಈಣಿಸಿದಾಗ ಸರನಾಶಸೂಚಕವೆಂದು ವಚನವು

+ “ಚಂದ್ರಾಹ್ಮಮಂಡಲಚ್ಚಿದ್ರಂ ದೃಷ್ಟಾ ಜನಪದಕ್ಷಯ ” ಎಂಬಂತೆ ಸೂರ ಬಿಂಬದಲ್ಲಿ ರಂಧ್ರವು ಕಾಣುವುದು ರಾಜನಾಶಸೂಚಕವೆಂದು ಶಕುನಶಾಸ್ತವು.