ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೪.] ಯುದ್ಧಕಾಂಡವು ೨೨೪೫ ವೂ ವ್ಯಾಪ್ತವಾಗಿ, ರಕ್ತಮಾಂಸಗಳ ಕೆಸರಿನಿಂದಲೇ ತುಂಬಿಹೋಗಬಹು ದೆಂದೂ ತೋರುವುದು, ಎಲೆ ವತ್ಪನೆ ! ಇನ್ನು ನಾವು ತಡಮಾಡಬಾರದು. ನಮ್ಮ ವಾನರರೊಡಗೂಡಿ ಈಗಲೇ ಲಂಕೆಯನ್ನು ಮುತ್ತುವೆವು.” ಎಂದನು ಥರಾನಾಗಿಯೂ, ಯುದ್ರೋತ್ಸಾಹವುಳ್ಳವನಾಗಿಯೂ, ಉತ್ತಮ ಧನುಸ್ಸನ್ನು ಕೈಯಲ್ಲಿ ಹಿಡಿದವನಾಗಿಯೂ ಇದ್ದ ರಾಮನು ಈ ಮಾತನ್ನು ಹೇಳಿ, ಆಗಲೇ ಲಂಕಾಭಿಮುಖವಾಗಿ ಆ ವಾನರಸೈನ್ಯದ ಮುಂದೆ ಹೊರ ಟನು. ಅಲ್ಲಿದ್ದ ಸಮಸ್ತವಾನರವೀರರೂ, ವಿಭೀಷಣಸುಗ್ರಿವರನ್ನು ಮುಂ ದಿಟ್ಟುಕೊಂಡು ಶತ್ರುಗಳನ್ನು ಕೊಲ್ಲುವ ವಿಷಯದಲ್ಲಿ ದೃಢನಿಶ್ಚಯವುಳ್ಳವ ರಾಗಿ, ಸಂತೋಷದಿಂದ ಸಿಂಹನಾದವನ್ನು ಮಾಡುತ್ತ ಬಂದರು, ಶ್ರೀರಾ ಮನಪ್ರೀತಿಗಾಗಿ, ವೀರರಾದ ಆ ವಾನರರೆಲ್ಲರೂ, ಬಾಲಗಳನ್ನಾಡಿಸುವುದೇ ಮೊದಲಾದ, ಯುದ್ದೋತ್ಸಾಹಸೂಚಕಗಳಾದ ಚೇಷ್ಟೆಗಳನ್ನು ಮಾಡು ತಿರಲು, ರಾಮನು, * ಅವರ ಮಹೋತ್ಸಾಹವನ್ನು ನೋಡಿ ಸಂತೋಷಿಸುತ್ತ ಮುಂದೆ ನಡೆದನು ಇಲ್ಲಿಗೆ ಇಪ್ಪತ್ತು ಮೂರನೆಯ ಸರ್ಗವು ರಾಮನು ಸೇನೆಯನ್ನು ಗರುಡವ್ಯೂಹವಾಗಿ, ನಿಲ್ಲಿಸಿದುದು ಅತ್ತಲಾಗಿ ಶುಕನು ರಾವಣನಬ ಳಿಗೆ ಹೋದಮೇಲ, ರಾಮನನ್ನು ಗೆಲ್ಲುವುದಸಾ ಧ್ಯವೆಂದು ಅವನಿಗೆ ತಿಳಿಸಿ, ಸೀತೆಯನ್ನು ರಾಮ - ನಿಗೊಪ್ಪಿಸುವಂತೆ ಹಿತವನ್ನು ಹೇಳಿದುದು. ಹೀಗೆ ರಾಮನು ತನ್ನ ಸೈನ್ಯವನ್ನು ತಂದಿಳಿಸಿದಾಗ, ಆ ವಾನರವೀ ರರ ಸೇನೆಯು, ಚಂದ್ರನನ್ನನುಸರಿಸಿ ನಿಂತ ಶುಭನಕ್ಷತ್ರಗಳಿಂದ ತುಂ ಬಿದ ಶರತ್ಕಾಲದ ಪೂರ್ಣಿಮಾರಾತ್ರಿಯಂತೆ ಶೋಭಿಸುತ್ತಿತ್ತು, ಮಹಾ ಸಮುದ್ರದಂತೆ ಕೊನೆಮೊದಲಿಲ್ಲದ ಆ ದೊಡ್ಡ ವಾನರಸೇನೆಯು ಬಂದಿ


- -

  • ರಾಮನಿಗೆ ವಾನರರು ಈ ದುರವನ್ನು ನೋಡಿ ಉತ್ಸಾಹಭಂಗವನ್ನು ಹೊಂ ದಿರಬಹುದೆಂಬ ಶಂಕೆಯುಂಟಾಗಿದ್ದು, ಈಗ ಅವರ ಉತ್ಸಾಹಚೇಷ್ಟೆಯನ್ನು ನೋಡು ವುದರಿಂದ ಆ ಶಂಕೆಯು ನಿವರಿಸಿ ಸಂತೋಷವುಂಟಾಯಿತೆಂದು ತಿಳಿಯಬೇಕು.