ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೭೨ ಶ್ರೀಮದ್ರಾಮಾಯಣವು [ಸರ್ಗ ೧. ಕಾರವನ್ನು ಸಾಧಿಸುವುದು ಹಾಗಿರಲಿ! ಇದನ್ನು ಮನಸ್ಸಿನಿಂದ ಯೋಚಿಸುವು ದಕ್ಕಾದರೂ ಬೇರೆಯವರಿಗೆ ಸಾಧ್ಯವಲ್ಲ ! ಮಹಾಸಮುದ್ರವನ್ನು ದಾ ಟುವುದೆಂದರೇನು ? ಲಂಕೆಯನ್ನು ಪ್ರವೇಶಿಸುವುದೆಂದರೇನು? ಒಂದುವೇಳೆ ಪ್ರವೇಶಿಸಿದರೂ ಅಲ್ಲಿನ ರಾಕ್ಷಸರನ್ನಿಡಿರಿಸುವುದೆಂದರೇನು ? ಇಷ್ಟಾಗಿಯೂ ಹಿಂತಿರುಗಿ ಬದುಕಿಬರುವುದೆಂದರೇನು ? ಗರುಡನೊಬ್ಬನು' ವಾಯುವೊಬ್ಬ ನು' ಈ ಹನುಮಂತನೊಬ್ಬನು' ಈ ಮೂವರು ಹೊರತು ಬೇರೊಬ್ಬನು ಆ ಮಹಾಸಮುದ್ರವನ್ನು ದಾಟುವನೆಂದೇ ನನಗೆ ತೋರಲಿಲ್ಲ ! ಆ ಗರುಡ ನಾದರೂ ವಾಯುವಿನ ಸಹಾಯವಿದ್ಯಹೊರತು ದಾಟಲಾರನು | ಅಂತಹ ಮಹಾಸಾಗರವನ್ನೂ ಈ ಹನುಮಂತನು ತಾನೊಬ್ಬನೇ ದಾಟಿಬಂದಿರುವನ ಲ್ಲಾ ' ಸಮುದ್ರವನ್ನು ದಾಟಿದುದೂ ಹಾಗಿರಲಿ ' ಆ ಲಂಕೆಯಾದರೂ ಸಾಮಾನ್ಯವೆ? ದೇವ ದಾನವ ಯಕ್ಷ ರಾಕ್ಷಸ ನಾಗ ಗಂಧತ್ವರಲ್ಲಿ ಯಾರೇ ಆಗಲಿ ಆದ ದರಿಸಲಾರರು'ರಾವಣನು ಎಷ್ಟೇ ಎಚ್ಚರಿಕೆಯಿಂದ ಅದನ್ನು ರಕ್ಷಿಸುತ್ತಿರುವನು. ಎಷ್ಮೆ ಬಲಪರಾಕ್ರಮಸಂಪನ್ನ ನಾದವನೂ ಶತ್ರುಗ ಳ ಕೈಗೆ ಸಿಕ್ಕದೆ ಆ ಲಂಕೆಗೆ ಪ್ರವೇಶಿಸಲಾರನು. ಒಂದುವೇಳೆ ತನ್ನ ಶಕ್ತಿ ಯಿಂದ ಪ್ರವೇಶಿಸಿದರೂ ಪ್ರಾಣದೊಡನೆ ಹಿಂತಿರುಗಿ ಬರಲಾರನು 1 ಆನೇ ಕರಾಕ್ಷಸರಿಂದ ರಕ್ಷಿತವಾಗಿ, ಎಂತವರಿಗೂ ಇದಿರಿಸಲಸಾಧ್ಯವಾದ ಆ ಲಂ ಕಯನ್ನು ಪ್ರವೇಶಿಸುವುದಕ್ಕೆ ಯಾರಿಗೆ ಶಕ್ಯವು ? ಎಷ್ಮೆ ಬಲಪರಾಕ್ರಮ ವುಳ್ಳವನಾದರೂ ಈ ಹನುಮಂತನಿಗೆ ಸಾಟಿಯಾಗಲಾರನು' ಮಖ್ಯವಾಗಿ ಹನುಮಂತನು ಸುಗ್ರೀವನಿಗಾಗಿ ನಡೆಸಿದ ಈ ಕೃತ್ಯಕಾರವು ಬಹಳ ಅತಿ ಶಯವಾದುದು ' ತನ್ನ ಸ್ವಾಮಿಯ ಆಜ್ಞೆಯಂತೆ ನಡೆಸಬೇಕಾದುದ ಕ್ಕಿಂತಲೂ ಹೆಚ್ಚಾಗಿಯೇ ನಡೆಸಿರುವನು ' ತನಗೆ ಪ್ರಭುವಿನಿಂದ ನಿಯಮಿಸ ಲ್ಪಟ್ಟ ಸೀತಾನ್ವೇಷಣವನ್ನು ಮಾತ್ರವೇ ಅಲ್ಲದೆ, ತನ್ನ ಬಲಪರಾಕ್ರಮಗಳಿಗೆ ತಕ್ಕೆ ಬೇರೆ ಕಾಕ್ಯಗಳನ್ನೂ ನಡೆಸಿಬಂದಿರುವನು. ಲೋಕದಲ್ಲಿ ಯಾವಬೃತ್ಯನು ರಾಜಾಜ್ಞೆಯಂತೆ ತಾನು ನಡೆಸಬೇಕಾದ ಅಸಾಧ್ಯ ಕಾಠ್ಯವನ್ನು ನಡೆಸಿದ ಮೇ ಲೆಯೂ, ತನಗಿರುವ ಸ್ವಾಮಿಭಕ್ತಿಯಿಂದ ಆ ಕಾರಕ್ಕೆ ಬೇಕಾದ ಇತರಕಾ ಲ್ಯಗಳನ್ನೂ ತಾನಾಗಿಯೇ ನಡೆಸಿಬರುವನೋ ಅವನೇ ಉತ್ತಮಭತ್ಯನೆನಿ