ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೪.] ಯುದ್ದ ಕಾಂಡವು. ೨೨೪೯ ದಹೊರಟೆನಷ್ಟೆ? ಆಕ್ಷಣವೇ ಸಮುದ್ರದ ಉತ್ತರತೀರಕ್ಕೆ ಹೋಗಿ, ಅಲ್ಲಿ ಸುಗ್ರೀವನನ್ನು ನೋಡಿ, ಮೃದುವಾಗಿಯೂ, ಕಿವಿಗಿಂಪಾಗಿಯೂ ಇರುವ ಮಾತಿನಿಂದಲೇ ಆತನಿಗೆ ನೀನು ಹೇಳಿದ ಮಾತುಗಳನ್ನೆಲ್ಲಾ ಕ್ರಮವಾಗಿ ಒಂದನ್ನೂ ತಪ್ಪದೆ ವಿವರವಾಗಿ ಹೇಳಿದೆನು. ಆ ವಾನರರು ನನ್ನನ್ನು ನೋ ಡಿದಮಾತ್ರದಲ್ಲಿಯೇ ಬಹಳ ಕೋಪಗೊಂಡವರಾಗಿ,ಆಕಾಶಕ್ಕೆ ಹಾರಿ ನನ್ನ ನ್ನು ಹಿಡಿದುಕೊಂಡರು. ಹಿಡಿದುದುಮಾತ್ರವೇ ಅಲ್ಲ ! ಮುಷ್ಠಿಗಳಿಂದ ಹೊಡೆದು ನನ್ನ ಸುಳಿವೇ ಇಲ್ಲದಂತೆ ಕೊಲ್ಲುವುದಕ್ಕೂ ಪ್ರಯತ್ನಿಸಿದರು. ಎಲೆ ರಾಕ್ಷಸೇಂದ್ರನೆ' ನನಗೆ ಅವರೊಡನೆ ಬಾಯೆ, ಮಾತಾಡುವುದಕ್ಕೂ ಅವಕಾಶವಿಲ್ಲದೆ ಹೋಯಿತು ಇನ್ನು ಅವರಿಂದ ಪ್ರತ್ಯುತ್ತರವನ್ನು ಕೇಳಿ ತಿ ಆಯುವುದೆಲ್ಲಿ?ಉಸಿರೆತ್ತುವುದಕ್ಕೂ ಸಾಧ್ಯವಿಲ್ಲದೆ ಹೋಯಿತು ಆ ವಾನರರು ಸಹಜವಾಗಿಯೇ ಬಹಳ ಕೋಪಸ್ವಭಾವವುಳ್ಳವರು' ಮಹಾಕೂರರು' ಮ ಹಾಪ್ರಭೂ' ಇನ್ನು ಹೆಚ್ಚಾಗಿ ಹೇಳಿದುದರಿಂದೇನು ? ವಿರಾಧವನ್ನೂ , ಕಬಂ ಧನನ್ನೂ ,ಖರನನ್ನೂ ಕೊಂದ ಪ್ರಸಿದ್ಧವೀರನಾದ ಆ ರಾಮನು,ಇತ್ತಲಾಗಿ ಸೀತೆಯಿರುವ ಸ್ಥಲವನ್ನೇ ಕುರಿತು ಹೊರಟುಬಂದಿರುವನು ಇದಕ್ಕಾಗಿ ಮ ಹಾಧನುರ್ಧಾರಿಯಾದ ಆತನು, ಈ ಸಮುದ್ರದಲ್ಲಿ ಸೇತುವನ್ನು ಕಟ್ಟಿ, ಅದ ನ್ನು ದಾಟಿಯೂ ಬಂದುಬಿಟ್ಟನು. ನಮ್ಮ ಕಡೆಯ ರಾಕ್ಷಸರನ್ನು ಹುಲ್ಲಿಗಿಂತ ಲೂ ಕಡೆಯಾಗಿ ಎಣಿಸಿರುವನು ಅದೋ ಆಗಲೇ'ನಮ್ಮ ಲಂಕಾದ್ವಾರಕ್ಕೂ ಬಂದು ಸೇರಿಬಿಟ್ಟನು ಪಕ್ವತಗಳಂತೆಯೂ, ಮೇಫುಗಳಂತೆಯೂ, ಮಹಾ ಕಾಯವುಳ್ಳ ಅನೇಕ ಋಕ್ಷವಾನರರಸೈನ್ಯವು, ಸಹಸ್ರ ಸಂಖ್ಯೆಯಿಂದ ಸೇರಿ, ಈಭೂತಲವೆಲ್ಲವನ್ನೂ ವ್ಯಾಪಿಸುವಂತೆ ನಿಂತಿರುವುದು ಎಲೆ ಮಹಾರಾಜನೆ! ಅಲ್ಪವಾದ ನಮ್ಮ ರಾಕ್ಷಸಸೈನ್ಯವೆಲ್ಲಿ ? ಆತಿಮಹತ್ತಾದ ಆ ವಾನರಸೇನೆ ಯೆಲ್ಲಿ ? ದೈತ್ಯರಿಗೂ, ದೇವತೆಗಳಿಗೂ ಹೇಗೋ ಹಾಗೆ ಎಷ್ಟು ಮಾ ತ್ರವೂ ಸಂಬಂಧವಿಲ್ಲ. ಅದೋ ಆ ಸೇನೆಯು ಆಗಲೇ ಕೋಟೆಯನ್ನು ಹತ್ತಿ ಬರುತ್ತಿರುವುದು ನೀನು ಶೀಘ್ರದಲ್ಲಿಯೇ ಮುಂದಿನ ಕಾಠ್ಯವನ್ನು ನೋಡು. ನೀನು ಈಗಲೇ ರಾಮನಿಗೆ ಸೀತೆಯನ್ನಾದರೂ ಒಪ್ಪಿಸಿಬಿಡು / ಇಲ್ಲವೇ ಚೆ ಸ್ನಾಗಿ ಯುದ್ಧವನ್ನು ನಡೆಸುವುದಕ್ಕೆ ತಕ್ಕ ಪ್ರಯತ್ನ ವನ್ನಾ ದರೂ ಮಾಡು 142