ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೪ ಶ್ರೀಮದ್ರಾಮಾಯಣವು (ಸರ್ಗ ೨೫ ಳಿದಿದ್ದರೆ, ಮತ್ತೊಮ್ಮೆ ನೀವು ಚೆನ್ನಾಗಿ ನೋಡಿಯೂ ಬರಬಹುದು. ನಿಮಗೆ ಸಮ್ಮತವಾದರೆ ಈ ವಿಭೀಷಣನೇ ನಿಮ್ಮನ್ನು ಕರೆದುಕೊಂಡು ಹೋ ಗಿ ತೋರಿಸುವನು. ನೀವು ನನ್ನ ಕೈಗೆ ಸಿಕ್ಕಿದಮಾತ್ರಕ್ಕೆ ನಿಮ್ಮ ಪ್ರಾಣವುಳಿ ಯದೆಂದು ಭಯಪಡಬೇಕಾದುದಿಲ್ಲ, ಆಯುಧವಿಲ್ಲದವರನ್ನಾಗಲಿ, ದೂತ ರಾಗಿ ಬಂದವರನ್ನಾಗಲಿ ಯಾವಾಗಲೂ ಕೊಲ್ಲಬಾರದು, ಈ ಎರಡು ವಿಧ ಥಿಂದಲೂ ನೀವು ಅವಥ್ಯರಾಗಿರುವಿರಿ ಹೆದರಬೇಡಿರಿ!” ಎಂದು ಹೇಳಿ, ಆ ಮೇಲೆ ವಿಭೀಷಣನನ್ನು ಕುರಿತು (ವಿಭೀಷಣಾ ' ಇವರನ್ನು ಬಿಟ್ಟುಬಿಡು | ಇವರು ಸಾಮಾದ್ಯುಪಾಯಗಳಿಂದ ಶತ್ರು ಪಕ್ಷವನ್ನು ಭೇದಿಸುವುದರಲ್ಲಿ ಸಮರ್ಥರೆಂಬುದೇನೋ ನಿಜವು ಈಗ ಆ ಕಾರೈಕ್ಕಾಗಿಯೇ ನಮ್ಮಲ್ಲಿ ಬಂ ದವರಾಗಿದ್ದರೂ, ಅಭಯವನ್ನು ಕೇಳುತ್ತಿರುವರು ಆದುದರಿಂದ ಇವರನ್ನು ಬಿಟ್ಟುಬಿಡು” ಎಂದು ಹೇಳಿ, ತಿರುಗಿ ಆ ಚಾರರನ್ನು ಕುರಿತು (ಎಲೆ ರಾಕ್ಷ ಸರೆ " ನೀವು ಇಲ್ಲಿಂದ ಲಂಕೆಗೆ ಹೋಗಿ, ನಿಮ್ಮ ಪ್ರಭುವಾದ ರಾವಣನೊ ಡನೆ ಈಗ ನಾನು ಹೇಳುವ ಈ ಮಾತುಗಳನ್ನು ಹೀಗೆಯೇ ಹೇಳಬೇಕು (ರಾವಣಾ' ನೀನು ಯಾವ ಭುಜಬಲವನ್ನು ನಂಬಿ ನನ್ನ ಪಕ್ಕೆಯಾದ ಸೀತೆ ಯನ್ನು ಕದ್ದು ತಂದೆಯೋ, ಆ ನಿನ್ನ ಬಲವನ್ನು ಈಗ ನೀನು ನಿನ್ನ ಸೈನ್ಯಗಳೂಡ ನೆಯೂ, ನಿನ್ನ ಬಂಧುಗರ್ಗಗಳೊಡನೆಯೂ ಯಥೇಷ್ಟವಾಗಿ ತೋರಿಸಬಹು ದು' ನಾಳೆ ಪ್ರಾತಃಕಾಲದಲ್ಲಿ ನಿನ್ನ ಲಂಕಾಪುರವು, ಅದರ ಕೋಟಿ ಕೋ ತಲಗಳೊಡನೆಯೂ, ಪುರದ್ವಾರಗಳೊಡನೆಯೂ, ಅಲ್ಲಿನ ರಾಕ್ಷಸಸೈನ್ಯಗ ಛೋಡನೆಯೂ, ನನ್ನ ಬಾಣಗಳಿಂದ ಧೂಳೆದ್ದು ಹೋಗುವುದನ್ನು ನೋಡು. ರಾವಣಾ' ನಾಳೆ ಬೆಳಗಾಗುವಷ್ಟರಲ್ಲಿ, ವಜಧಾರಿಯಾದ ಇಂದ್ರನು ದಾ ನವರಮೇಲೆ ತನ್ನ ವಜ್ರವನ್ನು ಪ್ರಯೋಗಿಸುವಂತೆ, ನಾನು ಸೇನಾಸಮೇತ ನಾದ ನಿನ್ನ ಮೇಲೆ ಭಯಂಕರವಾದ ನನ್ನ ಕೋಪವನ್ನು ಪ್ರಯೋಗಿಸುವ ರೀತಿಯನ್ನಾ ದರೂ ನೋಡು ” ಇನ್ನು ನೀನು ನಿನ್ನ ಸೈನ್ಯಗಳಡನೆ ಸಿದ್ಧ ನಾಗಿರು ” ಎಂದು ನಾನು ಹೇಳಿದುದಾಗಿ ತಿಳಿಸಿರಿ” ಎಂದನ, ಹೀಗೆ ರಾಮನು ರಾವಣನಿಗೆ ತನ್ನ ಸಂದೇಶವನ್ನು ಹೇಳಲು, ಶುಕಸಾರಣರಿಬ್ಬ ರೂ, ರಾ ಮನ ದಯಾಸ್ವಭಾವಕ್ಕೂ, ಅವನ ಧರ ವತ್ಸಲತೆಗೂ ಸಂ