ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೬.] ಯುದ್ಧಕಾಂಡವು. ೨೨೬೧ ದ್ಯದಲ್ಲಿ ಇವನೊಡನೆ ನಿಲ್ಲುವುದು ಬಹಳಕಷ್ಟವು. ಇವನು ಪಾರಿಯಾತ್ರ ವೆಂಬ ಪಕ್ವತದಲ್ಲಿ ವಾಸಮಾಡುತ್ತಿರುವನು. ಐವತ್ತುಲಕ್ಷಯೂರಪತಿಗಳು ಇವನ ಕೈಕೆಳಗಿರುವರು. ಆ ಯೂಥಪತಿಗಳಲ್ಲಿಯೂ, ಒಬ್ಬೊಬ್ಬನಿಗೂ ಬೇರೆಬೇರೆ ಯೂಧಗಳುಂಟು. ಆ ಯೂಥಗಳೆಲ್ಲವೂ ತಮ್ಮ ಶಕ್ತಿಯನ್ನು ಮೀರಿ ಇವನನ್ನು ಸೇವಿಸುತ್ತಿರುವುವು. ಆದೋ ! ಅಲ್ಲಿ ಸಮುದ್ರತೀರದಲ್ಲಿರು ವ ಬೇರೊಂದು ಮಹಾಸಮುದ್ರದಂತೆ ಅತಿಭಯಂಕರವಾಗಿ, ಉತಾಹ ಬಂದುಬ್ಬುತ್ತಿರುವ ಆ ದೊಡ್ಡ ವಾನರಸೈನ್ಯದನಡುವೆ ಇರುವವನು ವಿನತನೆಂ ಬ ಯೋಧಪತಿಯು ಇವನು (ಗಂಗಾತೀರದಲ್ಲಿ ಪ್ರಸಿದ್ಧವಾದ) ದರ್ದರ ಪರೈತದಂತೆ ಕಾಣುತ್ತ, ನದಿಗಳಲ್ಲಿ ಮೇಲೆನಿಸಿಕೊಂಡ ಪರ್ಣಾಗಾನದಿಯ ನೀರನ್ನು ಕುಡಿದು ಕೊಬ್ಬಿ ಅದರ ತೀರದಲ್ಲಿರುವನು ಅರುವತ್ತುಲಕ್ಷ ವನರಸೈನ್ಯವು ಇವನ ವಶದಲ್ಲಿರುವುದು ಇದೋ! ಇತ್ತಲಾಗಿ ಕ್ರೋಧನ ನೆಂಬ ಬೇರೊಬ್ಬ ಯೋಧಪತಿಯು ಆಗಲೇ ನಿನ್ನ ನ್ನು ಯುದ್ಧಕ್ಕೆ ಕರೆಯು ತಿರುವನು ನೋಡು ಮಹಾಬಲಪರಾಕ್ರಮವುಳ್ಳ ಅನೇಕವಾನರರು ಬೇರೆ ಬೇರೆ ಯೂಧಗಳಾಗಿ ಇವನಲ್ಲಿರುವರು ಅದೊ ! ಅಲ್ಲಿ ಗೈರಿಕದಂತೆ ಕೆಂಪಾದ ತನ್ನ ದೇಹವನ್ನು ಯುದ್ರೋತ್ಸಾಹದಿಂದುಬ್ಬಿಸುತ್ತ ಬಲದಿಂದ ಕೊಬ್ಬಿದ ಇತರವಾನರರೆಲ್ಲರನ್ನೂ ಯಾವಾಗಲೂ ತೃಣೀಕರಿಸುತ್ತಿರುವ ಈತನೇ ಗವಯನೆಂಬ ಯೋಧಪತಿಯು ಇವನು ಮಹಾತೇಜಸ್ವಿಯ ಕೋಪದಿಂದ ನಿನ್ನ ಮೇಲೆ ದಂಡೆತ್ತಿ ಬರುತ್ತಿರುವನು ಎಪ್ಪತ್ತು ಲಕ್ಷ ಮಂದಿವಾನರರು ಇವನ ಕೈಕೆಳಗಿರುವರು ಇವನೊಬ್ಬನೇ ತನ್ನ ಸೈನ್ಯದಿಂದ ನಮ್ಮ ಲಂಕೆಯನ್ನು ಕೊಳ್ಳೆಹೊಡೆಯಬೇಕೆಂದು ಕಾದಿರುವನು ಎಲೆ ಮಹಾರಾಜನೆ' ಮುಖ್ಯವಾಗಿ ಈಗ ನನಗೊಂದು ತೋರಿರುವುದು 'ಇವಾನರ ಸೇನೆಯಲ್ಲಿ ಯೂಥಪತಿಗಳಾದ ಅಂಗದಾದಿಗಳನ್ನಾಗಲಿ, ಆ ಯಥಪತಿ ಗಳಿಗೂ ಪ್ರಧಾನರಾದ ಸುಗ್ರೀವಾದಿಗಳನ್ನಾಗಲಿ ಇದಿರಿಸಿ ನಿಲ್ಲಬೇಕೆಂದರೆ, ಎಂತವರಿಗೂ ಸಾಧ್ಯವಲ್ಲ' ಇವರಲ್ಲಿ ಒಬ್ಬೊಬ್ಬರೂ ಬಹಳಭಯಂಕರರು, ಬ ಹಳಬಲವಂತರು' ಕಾಮರೂಪಿಗಳು ' ಇವರಲ್ಲಿ ಒಬ್ಬೊಬ್ಬರ ವಶದಲ್ಲಿಯೂ, ಬೇರೆಬೇರೆ ಯೂಧಗಳುಂಟು ! ಆದುದರಿಂದ ಇವರೊಡನೆ ಈಗ ನಮಗೆ ಯುದ್ಧವೇ ಉಚಿತವಲ್ಲ” ಎಂದನು ಇಲ್ಲಿಗೆ ಇಪ್ಪತ್ತಾರನೆಯ ಸರ್ಗವು |