ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೨ ಶ್ರೀಮದ್ರಾಮಾಯಣವು [ಸರ್ಗ, ೨೭ (ಸಾರಣನು ಮತ್ತೆ ಕೆಲವು ಪ್ರಧಾನವಾನರಯಧಪತಿ | 1 ಗಳನ್ನು ರಾವಣನಿಗೆ ತೋರಿಸಿದುದು ('ಎಲೆ ಮಹಾರಾಜನೆ' ಆ ರಾಮನಿಗಾಗಿ ತಮ್ಮ ಪ್ರಾಣವನ್ನೂ ೮ ಕಿಸದೆ ಹೋರಾಡತಕ್ಕೆ ಇನ್ನೂ ಕೆಲವು ಪ್ರಧಾನಯೂರಪತಿಗಳನ್ನು ತೋ ರಿಸುವೆನು ನೋಡು ! ಇದೋ ಇವನು ಹರನೆಂಬ ಯೋಧಪತಿಯು ' ಭಯಂ ಕರಕಾರವುಳ್ಳ ಈತನ ಬಾಲದಲ್ಲಿರುವ ಕೂದಲುಗಳೇ ಎಷ್ಟೋ ಮಾರುದ್ಯ ವಿರುವುವು ' ಮತ್ತು ಅವು, ಕೆಂಪು, ಹಳದಿ, ಬಿಳುಪ, ಮಂತಾದ ವಿಚಿತ್ರ ವರ್ಣಗಳಿಂದ ಕೂಡಿ, ಮೇಘಗಳಲ್ಲಿ ಇನ್ನಧನುಸ್ಸೇ ಮೊದಲಾದ ರೂಪ ಗಳಿಂದ ಪ್ರಸರಿಸುವ ಸೂರಕಿರಣಗಳಂತೆ ವಿರಳವಾಗಿ ಮೇಲಕ್ಕೆ ನಿಗು ರಿರುವುವು ನೋಡು ಈತನ ಹಿಂದೆ ಸುಗ್ರೀವನಿಗೆ ಕಿಂಕರರಾದ ಅನೇಕ ವಾವರಶ್ರೇಷ್ಠರು, ನೂರುನೂರಾಗಿಯೂ, ಸಾವಿರಸಾವಿರವಾಗಿಯೂ ಗುಂಪಸೇರಿ, ದೊಡ್ಡ ದೊಡ್ಡ ಗಿಡಗಳನ್ನೇ ಕೈಯಿಂದೆತ್ತಿಕೊಂಡು, ಈ ಲಂಕೆ ಯನ್ನು ಮುತ್ತುವುದಕ್ಕಾಗಿ ಆತುರದಿಂದ ಬರುವರು ನೋಡು ಈ ಹರ ನೆಂಬವನು ಮಹಾತೇಜಸ್ವಿಗಳಾದ ಸಹಸ್ರಕೋಟೆವಾನರರೊಡಗೂಡಿ, ಯುದ್ಧದಲ್ಲಿ ನಿನ್ನನ್ನು ತಾನೇ ಜಯಿಸಿಬಿಡಬೇಕೆಂಬ ಆತುರದಿಂದಿರುವನು. ಎಲೈ ರಾಜನೆ, ಅದೊ ! ಅಲ್ಲಿ ಕಾಳಮೇಫುಗಳಂತೆಯೂ, ಕಾಡಿಗೆಯಂತೆ ಯೂ, ಕಪ್ಪುಬಣ್ಣವುಳ್ಳ ಆ ಕರಡಿಗಳ ಗುಂಪನ್ನು ನೋಡಿದೆಯಾ? ಅವುಗ. ಳನ್ನು ಲೆಕ್ಕಮಾಡುವುದಕ್ಕೇ ಸಾಧ್ಯವಲ್ಲ' ಇವುಗಳನ್ನು ನಿನಗೆ ಪ್ರತ್ಯೇಕವಾಗಿ ನಿರ್ದೆಶಿಸಿ ತೋರಿಸಬೇಕೆಂದರೂ ನನಗೆ ಶಕ್ಯವಲ್ಲ ಈ ಸೈನ್ಯವು ಸಮುದ್ರ ವೇಲೆಯಂತೆ ಅಪಾರವಾಗಿ ನಿಂತಿರುವುದು, ಇವರಲ್ಲಿ ಒಬ್ಬೊಬ್ಬರೂ ಸತ್ಯಪ ರಾಕ್ರಮವುಳ್ಳವರು ಇವರಲ್ಲಿ ಕೆಲವರು ಪರ್ವತಗಳಲ್ಲಿಯೂ, ಕೆಲವರು ವಿಷಮಪ್ರದೇಶಗಳಲ್ಲಿಯೂ, ಕೆಲವರು ನದೀತೀರಗಳಲ್ಲಿಯೂ ವಾಸವಾಗಿರ ತಕ್ಕವರು ಈ ಭಯಂಕರವಾದ ಭಲ್ಲೂ ಕಸೈನ್ಯವೆಲ್ಲವೂ ನಿನ್ನ ಮೇಲೆ ಯು ದಕ್ಕಾಗಿಯೇ ಬರುತ್ತಿರುವುವು ಆದೋ ! ಅಲ್ಲಿ ಭಯಂಕರಗಳಾದ ಕಣ್ಣು ಗಳಿಂದಲೂ, ಭಯಂಕರಾಕಾರದಿಂದಲೂ ಕೂಡಿ, ಮೇಘಗಳ ನಡುವೆ ಕಾಣುವ ಪರ್ಜನ್ಯನಂತೆ, ಆ ಭಲ್ಲೂಕಸೇನೆಯ ಮಧ್ಯದಲ್ಲಿರುವ ಈತನು