ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೩ ಶ್ರೀಮದ್ರಾಮಾಯಣವು (ಸರ್ಗ, ೨೭ ಡಬೇಕೆಂದು ಬರುತ್ತಿರುವುವು ನೋಡು, ಎಲೆ ಮಹಾರಾಜನೆ ' ಯಾವ ಪಕ್ವತದಲ್ಲಿ, ಯಾವಾಗಲೂ ಪಷ್ಟ ಫಲಸಮೃದ್ಧಗಳಾಗಿಯೂ, ಕೇಳಿದ ವರಿಗೆ ಕೇಳಿದುದನ್ನು ಕೊಡತಕ್ಕವುಗಳಾಗಿಯೂ, ಭ್ರಮರಗಳಿಗೆ ನಿತ್ಯ ನಿವಾಸವಾಗಿಯೂ ಇರುವ ವೃಕ್ಷಗಳು ತುಂಬಿರುವುವೋ, ಯಾವುದರ ಸಮೀಪದಲ್ಲಿ ಸೂರನು ಅದರಂತೆಯೇ ಬಂಗಾರದ ಬಣ್ಣವನ್ನು ಹೊಂದ ಸಂಚರಿಸುವನೋ, ಯಾವುದರ ಕಾಂತಿಯಿಂದ ಅಲ್ಲಿನ ಮೃಗಪಕ್ಷಿಗಳೆಲ್ಲವೂ ಅದೇ ಬಣ್ಣದಿಂದ ಶೋಭಿಸುವುವೋ, ಯಾವುದರ ತಪ್ಪಲಲ್ಲಿ ಮಹಾತ್ಮರಾ ದ ಎಷ್ಟೋ ಮಂಖ ಮಹರ್ಷಿಗಳು ಎಡೆಬಿಡದೆ ವಾಸವಾಡುತ್ತಿರುವರೋ, ಎಲ್ಲಿ ಯಾವಾಗಲೂ ಫಲಸಮ್ಪದಗಳಾಗಿಯೂ, ರುಚಿರುಚಿಯಾದ ಹಣ ಗಳನ್ನು ಬಿಡತಕ್ಕವುಗಳಾಗಿಯೂ ಇರುವ ಗಿಡಗಳೂ, ಮೇಲಾದ ದೇಸಿನ ರ. ಸಗಳೂ ಹೇರಳವಾಗಿರುವುವೋ, ಅಂತಹ ಮನೋಹರವಾದ ಮೇರುಪರೈತ ದಲ್ಲಿ ಈಕೇಸರಿಯಲಬ ಯೂಥಪತಿಯು ಕ್ರಿಡಿಸುತ್ತಿರುವನು ಎಲೆ ರಾಜನೆ ! ಅತ್ತಲಾಗಿ ಅರವತ್ತು ಸಾವಿರ ಬೆಟ್ಟಗಳುಂಟು' -ವೆಲ್ಲವೂ' ಸುವರ್ಣ ಮಯಗ ಭಾಗಿ ಅತಿರಮಣೀಯಗಳಾಗಿರುವುವು ರಾಕ್ಷಸರಲ್ಲಿ ನೀನು ಹೇಗೋಹಾಗೆ ಆ ಪರತಗಳಿಗೆ ಮರುಪರೈತವೇ ಮುಖ್ಯವೆನಿಸಿಕೊಂಡಿರುವುವು ಅಲ್ಲಿ ಹೀಗೆ ಕಪಿಲವರ್ಣವುಳ್ಳವರೂ, ಶ್ವೇತವರ್ಣವುಳ್ಳವರೂ, ಕೆಂಪುಮುಖವುಳ್ಳವರೂ, ಜೇನಿನಂತೆ ಪಿಂಗಳವರ್ಣವುಳ್ಳವರೂ ವಾಸಮಾಡುತ್ತಿರುವರು ಅವರೊ ಬ್ಲೊಬ್ಬರಿಗೂ, ಅತಿತೀಕ್ಷಗಳಾದ ಉಗುರುಗಳೂ, ಕೋರಹಲ್ಲುಗಳೂ ಇರುವುವು, ಅವುಗಳನ್ನೆ ಅವರು ಆಯುಧಗಳನ್ನಾಗಿ ಉಪಯೋಗಿಸುವರು ಅವರೆಲ್ಲರೂ ನಾಲ್ಕು ಕೋರೆಗಳುಳ್ಳ ಸಿಂಹಗಳಂತೆಯೂ, ಇದಿರಿಸುವುದ ಕಾಗದ ಹೆಬ್ಬುಲಿಗಳಂತೆಯೂ ಇರುವರು ' ಒಬ್ಬೊಬ್ಬರೂ ಆಗ್ರಿ ಯಂತೆ ಉಗ್ರಸ್ವರೂಪವುಳ್ಳವರು | ವಿಷಸರ್ಪಗಳಂತೆ ಕೊಪಸ್ವಭಾವವುಳ್ಳವರು | ಉದ್ದವಾದ ದೊಡ್ಡ ಬಾಲವುಳ್ಳವರು ! ಒಬ್ಬೊಬ್ಬರೂ ಮದದಾನೆಗಳನ್ನು ಮಗುಚುವ ದೇಹಬಲವುಳ್ಳವರು : ದೊಡ್ಡಬೆಟ್ಟಗಳಂತೆ ಆಕಾರವುಳ್ಳವರು. ಮಹಾಮೇಫದಂತೆ ಧ್ವನಿಯುಳ್ಳವರು ' ದುಂಡಗೆ ಪಿಂಗಳವರ್ಣವಾಗಿ ಕೊನೆಯಲ್ಲಿ ಕೆಂಪುವರ್ಣವುಳ್ಳ ಕಣ್ಣುಳ್ಳವರು " ಅವರ ನಡೆಯೂ, ಅವರ