ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಶ್ರೀಮದ್ರಾಮಾಯಣವು [ಸರ್ಗ.ಇ೨೮, ಗಳನ್ನು ತನ್ನ ಕೈಕೆಳಗಿನ ರಾಜರನ್ನಾಗಿರಿಸಿ, ತಾನು ರಾಜರಾಜನೆನಿಸಿಕೊಳ್ಳ ಬೇಕೆಂದು, ಆ ವಿಭೀಷಣನಿಗೆ ಲಂಕಾರಾಜ್ಯದಲ್ಲಿ ಅಭಿಷೇಕವನ್ನೂ ನಡೆಸಿ ಬಿಟ್ಟನು ' ನಿನ್ನ ತಮ್ಮನಾದ ಈ ವಿಭೀಷಣನೂ, ರಾಮನ ಸಹಾಯಾರ್ಥ ವಾಗಿ ನಿನ್ನ ಮೇಲೆ ಯುದ್ಯೋದ್ಯುಕ್ತನಾಗಿ ಆತುರದಿಂದ ಬರುತ್ತಿರುವನು. ಅದೊ' ಆ ರಾಮನಿಗೂ, ವಿಭೀಷಣನಿಗೂ ನಡುವೆ ಬೆಟ್ಟದಂತೆ ನಿಶ್ಚಲವಾ ಗಿ ನಿಂತಿರುವ ವಾನರನೊಬ್ಬನನ್ನು ನೋಡುವೆಯಲ್ಲವೆ ? ಅವನೇ ವಾನರ ರಾಜನಾದ ಸುಗ್ರೀವನು ' ಯಾವ ಯುದ್ಧದಲ್ಲಿಯೂ, ಪರಾಜಯವಿಲ್ಲದವ ನು ಪಕ್ವತಗಳಲ್ಲಿ ಹಿಮವಂತವು ಹೇಗೋ ಹಾಗೆ ಸಮಸ್ಯವಾನರರಿಗೂ ಮೇಲೆನಿಸಿಕೊಂಡು, ತೇಜಸ್ಸಿನಿಂದಲೂ, ಯಶಸ್ಸಿನಿಂದಲ, ಬುದ್ಧಿ ಯಿಂದಲೂ, ಜ್ಞಾನದಿಂದಲೂ, ವಂಶೋನ್ನತಿಯಿಂದಲೂ, ಎಲ್ಲರನ್ನೂ ಮೀರಿರುವನು ಕಾಡುಗಳಿಂದಳೂ, ವೃಕಗಳಿಂದಲೂ ದುರ್ಗಮವಾದ ಕಿಷಿಂಧೆಯೆಂಬ ಗುಹೆಯೇ ಇವನ ವಾಸಸ್ಥಳವು ಪ್ರಾಕಾರಾದಿಪಕ್ವತ ದುರ್ಗಗಳಿಂದ, ಪ್ರವೇಶಿಸಲಸಾಧ್ಯವಾದ ಆ ಕಿಕ್ಕಿಂಧೆಯಲ್ಲಿ ಈತನು ತನ್ನ ಪ್ರಧಾನಯೂಥಪತಿಗಳೊಡಗೂಡಿ, ವಾನರರಾಜ್ಯವನ್ನು ನಡೆಸುತ್ತಿರು ವನು ಇವನ ಎದೆಯಲ್ಲಿ ನೂರುಕಮಲಗಳುಳ್ಳ ಕಾಂಚನಮಾಲಿಕೆಯೊಂದು ಶೋಭಿಸುತ್ತಿರುವುದು ನೋಡು ಇದು ದೇವಜಾತಿಗೂ, ಮನುಷ್ಯಜಾತಿ ಗೂ ಕೂಡ ಆಸೆಯನ್ನು ಹುಟ್ಟಿಸುವಷ್ಟು ಮಹಾಮಹಿಮೆಯುಳ್ಳುದು | ಇದರಲ್ಲಿ ವೀರಲಕ್ಷ ಯು ನೆಲೆಗೊಂಡಿರುವುದರಿಂದ, ಈ ಮಾಲಿಕೆಯನ್ನು ಧರಿಸಿ ನಿಂತವನಿಗೆ ಎಂದಿಗೂ ಅಪಜಯವಿಲ್ಲ. ರಾಮನು ವಾಲಿಸುಗ್ರಿವರ ಯುದ್ಧದಲ್ಲಿ ವಾಲಿಯನ್ನು ಕೊಂದು, ಅವನಲ್ಲಿದ್ದ ಈ ಕಾಂಚನಮಾಲಿಕೆ ಯನ್ನೂ , ತಾರೆಯನ್ನೂ , ಶಾಶ್ವತವಾದ ವಾನರರಾಜ್ಯವನ್ನೂ ಈ ಸುಗ್ರಿ ವನಿಗೆ ಸೇರಿಸಿಬಿಟ್ಟನು. ಎಲೆ ಮಹಾರಾಜನೆ' ಇನ್ನು ಇಲ್ಲಿ ಕಾಣುವ ವಾನರ ಸೈನ್ಯದ ಒಟ್ಟು ಸಂಖ್ಯೆಯನ್ನು ತಿಳಿಸುವೆನು ಕೇಳು ನೂರುಸಹಸ್ರಗಳನ್ನು ಒಂದುಲಕ್ಷವೆಂದೂ, ಮೂರು ಲಕ್ಷಗಳನ್ನು ಒಂದುಕೊಟೆಯೆಂದೂ ಪಂಡಿ ತರು ನಿರ್ಣಯಿಸಿರುವರನ್ನೈ ? ನೂರು ಸಹಸ್ರಕೋಟೆಗಳು ಬಂದು ಶಂಖ ವೆನಿಸುವುದು, ನೂರುಸಾವಿರಶಂಖಗಳಿಗೆ ಮಹಾಶಂಖವೆಂದು ವ್ಯವಹಾ