ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೩ ಶ್ರೀಮದ್ರಾಮಾಯಣವು [ಸರ್ಗ, ೨೯. ತವೇನೆಂದು ಪರೀಕ್ಷಿಸಿ ಚೆನ್ನಾಗಿ ತಿಳಿದುಬರಬೇಕು ಅವನ ಪ್ರಯತ್ನವು ಶಿ ಥಿಲವಾಗಿದ್ದ ಪಕ್ಷದಲ್ಲಿ, ನಾವು ಈಗಲೇ ಅವನನ್ನು ಹೆದರಿಸಿಬಿಡಬಹುದು ಮಂತ್ರಿಗಳಲ್ಲಿ ಆತಸಿಗೆ ಅಂತರಂಗಭೂತರಾರೆಂಬುದನ್ನೂ, ಅವನೊಡನೆ ನಿಜ ವಾದ ಸ್ನೇಹದಿಂದ ಕಲೆತಿರುವ ಸ್ನೇಹಿತರಾರೆಂಬುದನ್ನೂ ತಿಳಿದು, ಅವರ ನ್ನೂ ಚೆನ್ನಾಗಿ ಪರೀಕ್ಷಿಸಿಬರಬೇಕು ಅವರಲ್ಲಿ ಪರಸ್ಪರಸ್ನೇಹವಾದರೂ ಶಿಥಿ ಲವಾಗಿದ್ದಂತೆ ತೋರಿದಪಕ್ಷದಲ್ಲಿ, ನಾವು ಈಗಲೇ ಭೇದೋಪಾಯವನ್ನ ವ ಲಂಬಿಸಿ ಅವರಿಗಿರುವ ಸ್ನೇಹದ ಕಟ್ಟನ್ನು ಕದಲಿಸಿಬಿಡಬಹುದು ಇದಲ್ಲದೆನೀ ವು ಅಲ್ಲಿಗೆ ಹೋದಮೇಲೆ, ಆ ರಾಮನು ಹೇಗೆ ನಿದ್ರಿಸುವನೋ,ಹೇಗೆ ಎಚ್ಚ ರಗೊಂಡಿರುವನೋ, ಯಾವ ಯಾವ ಕೆಲಸಗಳನ್ನು ಮಾಡುತ್ತಿರುವನೋ, ಅವೆಲ್ಲವನ್ನೂ ಚೆನ್ನಾಗಿ ತಿಳಿದುಬರಬೇಕು ಅವನು ಒಂಟಿಯಾಗಿ ನಿದ್ರಿಸುವ ವನಾಗಿದ್ದರೂ, ಎಚ್ಚರಗೊಂಡಾಗ ಚಿಂತಾಪರನಾಗಿದ್ದರೂ, ಮುಂದಿನ ಪ್ರಯತ್ನಗಳಲ್ಲಿ ಅಷ್ಟಾಗಿ ಆತುರವನ್ನು ತೋರಿಸದವನಾಗಿದ್ದರೂ, ನಾವು ಬೇರೆಬೇರೆ ಉಪಾಯಗಳಿಂದ ಅವನನ್ನು ನಿಗ್ರಹಿಸುವುದಕ್ಕೆ ಪ್ರಯತ್ನಿ ಸ ಬಹುದು, ನೀವು ಪ್ರಚ್ಛನ್ನರಾಗಿಯೇ ಇದ್ದು, ನಾನು ಹೇಳಿದುದೆಲ್ಲವನ್ನೂ ತಿಳಿದುಬರಬೇಕು ಬುದ್ಧಿವಂತರಾದ ರಾಜರು ಚಾರರಮೂಲಕವಾಗಿಯೇ ಶತ್ರುವಿನ ರಹಸ್ಯವನ್ನು ಪೂರ್ಣವಾಗಿ ತಿಳಿದು, ಯುದ್ಧದಲ್ಲಿ ಸ್ವಲ್ಪ ಪ್ರಯ ತ್ರದಿಂದಲೇ ಅವರನ್ನು ನಿಗ್ರಹಿಸಬಹುದು”ಎಂದನು ಇದನ್ನು ಕೇಳಿ ಆಚಾ ರರೆಲ್ಲರೂ ಹಾಗೆಯೇ ಆಗಲೆಂದು ಹೇಳಿ, ಅತ್ಯಂತಸಂತುಷ್ಟರಾಗಿ,ಶಾರ್ದೂ ಲನನ್ನು ಮುಂದಿಟ್ಟುಕೊಂಡು ಪ್ರಭುವಾದ ರಾವಣನಿಗೆ ಪ್ರದಕ್ಷಿಣವಮ ಸ್ಕಾರಗಳನ್ನು ಮಾಡಿ, ಆಗಲೇ ರಾಮಲಕ್ಷ್ಮಣರಿದ್ದಕಡೆಗೆ ಹೊರಟರು. ಈಚಾ ರರೆಲ್ಲರೂ, ತಮ್ಮ ವೇಷವನ್ನು ಮರೆಸಿಕೊಂಡು ಸುವೇಲಪರೂತದ ಸಮೀಪ ಕ್ಕೆ ಬಂದು, ಅಲ್ಲಿ ವಿಭೀಷಣಸುಗ್ರಿವರೊಡನೆ ಸೇರಿದ್ದ ರಾಮಲಕ್ಷ್ಮಣರನ್ನು ಕಂಡರು.ವಾನರಸೇನೆಯನ್ನು ನೋಡಿದಾಗಲೇ ಅವರ ಮನಸ್ಸಿನಲ್ಲಿ ಭಯವು ಹುಟ್ಟಿತು ಇಷ್ಟರಲ್ಲಿ ಧರಾತ್ಮನಾದ ವಿಭೀಷಣನು ಆ ರಾಕ್ಷಸರು ವೇಷ ಧಾರಿಗಳಾಗಿ ಬಂದಿರುವುದನ್ನು ತಿಳಿದುಕೊಂಡನು. ಈ ಸಂಗತಿಯು ವಿಭೀಷ ಣನಿಗೆ ತಿಳಿದೊಡನೆಯೇ ಆತನು, ಅವರನ್ನು ನೋಡಿ ಹೆದರಿಸಿ, ಅವರಲ್ಲಿ ಪ್ರ ಮುಖನಾಗಿದ್ದ ಶಾರ್ದೂಲನೆಂಬವನನ್ನು ಮಾತ್ರ ಹಿಡಿದು, ಅವನು ಬಹಳ