ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೧] ಯುದ್ದಕಾಂಡವು. ඒ ಬಳಲಿದ್ದುದರಿಂದ, ಆರಾತ್ರಿಯಲ್ಲಿ ಅಲ್ಲಿಯೇ ಮಲಗಿ ನಿದ್ರೆಹೋಗುತಿತ್ತು. ಆ ರ್ಧರಾತ್ರಿಯಲ್ಲಿ ಆ ಸಮಸ್ತ ಸೈನ್ಯಗಳೂ ಸುಖನಿದ್ರೆಯಿಂದ ನಿದ್ರಿಸುತಿದ್ದಾ ಗ, ಮೊದಲು ನಾನು ಚಾರರನ್ನು ಕಳುಹಿಸಿ ಅಲ್ಲಿನ ಸಂಗತಿಗಳನ್ನೆಲ್ಲಾ ತಿಳಿ ದುಕೊಂಡೆನು. ಆಮೇಲೆ ನಮ್ಮಕಡೆಯ ಪ್ರಹಸನು ದೊಡ್ಡ ಸೈನ್ಯದೊ ಡನೆ ಹೋಗಿ, ಆ ರಾಮಲಕ್ಷ್ಮಣರ ಆಶ್ರಯದಲ್ಲಿದ್ದ ಸಮಸ್ಯಸೈನ್ಯಗಳ ನ್ಯೂ, ಆ ರಾತ್ರಿಯಲ್ಲಿಯೇ ನಿಶೇಷವಾಗಿ ಹತಮಾಡಿ ಬಂದನು ಅಲ್ಲಿ ನಮ್ಮ ಕಡೆಯ ರಾಕ್ಷಸರು, ಅಡ್ಡಗತಿಗಳನ್ನೂ, ಪರಿಫುಗಳನ್ನೂ, ಚಕ್ರಗಳನ್ನೂ, ಕಬ್ಬಿಣದಗುದಿಗಳನ್ನೂ, ಕತ್ತಿಗಳನ್ನೂ, ಬಾಣಗಳನ್ನೂ, ಶೂಲಗಳನ್ನೂ, ಕೂಟಮುದ್ಧರಾದ್ಯಾಯುಧಗಳನ್ನೂ, ದಂಡಗಳನ್ನೂ, ಕೊಣತಗಳನ್ನೂ, ಈಟಿಗಳನ್ನೂ, ದೊಡ್ಡ ಚಕ್ರಾಯುಧಗಳನ್ನೂ, ಕಬ್ಬಿಣದೊನಕೆಗಳನ್ನೂ ಬೀಸಿಬೀಸಿ ಬಡಿದು, ಸಮಸ್ತ ವಾನರರನ್ನೂ ಕೊಂದು ಕೆಡಹಿದರು ಆಮೇ ಲೆ ಶತ್ರುಸಂಹಾರದಲ್ಲಿ ನಿಪುಣನಾಗಿಯೂ, ಆಯುಧಗಳನ್ನು ಪ್ರಯೋಗಿಸು ವುದರಲ್ಲಿ ಹಸ್ತಚಾತುರವುಳ್ಳವನಾಗಿಯೂ ಇದ್ದ ನಮ್ಮ ಪ್ರಹಸನು, ಸ ಮಯವನ್ನು ನೋಡಿ ಆ ಸೈನ್ಯದನಡುವೆ ನುಗ್ಗಿ, ಅಲ್ಲಿ ನಿದ್ರಿಸುತಿದ್ದ ರಾಮ ನ ತಲೆಯನ್ನೂ ಕತ್ತರಿಸಿಬಿಟ್ಟನು ಇಷ್ಟರಲ್ಲಿ ನನ್ನ ತಮ್ಮನಾದ ವಿಭೀಷಣನು ಛಯದಿಂದ ಆಕಾಶಕ್ಕೆ ಹಾರಿ ಓಡಿಹೋಗುತ್ತಿರಲು,ದೈವಿಕವಾಗಿ ಅವನೂ ನ ಮ್ಮರಾಕ್ಷಸರ ಕೈಗೆ ಸಿಕ್ಕಿಬಿಟ್ಟನು ಲಕ್ಷಣನೂ ಇತರವಾನರರೂ ಚದರಿ ದಿ ಕುದಿಕ್ಕಿಗೆ ಪಲಾಯನಮಾಡಿಬಿಟ್ಟರು ಎಲೆ ಸೀತೆ! ಈಗಲೂ ಅಲ್ಲಿ ವಾನರ ರಾಜನಾದ ಸುಗ್ರೀವನು ಕತ್ತು ಮುರಿದು ಬಿದ್ದಿರುವನು ಹನುಮಂತನೂ ರಾಕ್ಷಸರಿಂದ ಹತನಾಗಿ ಮುಸುಡಿಯೇ ಇಲ್ಲದೆ ಬಿದ್ದಿರುವನು ಜಾಂಬವಂತ ನು ಭಯದಿಂದ ಮೇಲೆ ಹಾರುವಾಗ, ನಮ್ಮ ರಾಕ್ಷಸರು ಅವನನ್ನು ಹಿಡಿದು ಅವನ ಮೊಳ ಕಾಲುಗಳನ್ನು ಮುರಿದು,ಕೊಂದು ಕೆಡಹಿದರು.ಅವನನ್ನು ನಮ್ಮ ರಾಕ್ಷಸಸೈನಿಕರು ನಾನಾವಿಧಗಳಾದ ಪಟ್ಟಸಗಳಿಂದ ಕತ್ತರಿಸಿರುವರು. ಕೂ ಡಲಿಯಿಂದ ಕಡಿದ ಮರದಂತೆ ಅವನು ರಣರಂಗದಲ್ಲಿ ಬಿದ್ದಿರುವನು ದೊಡ್ಡ ದೇಹವುಳ್ಳವರಾಗಿಯೂ, ಶತ್ರುಗಳನ್ನಡಗಿಸುವುದರಲ್ಲಿ ಸಮರ್ಥರಾಗಿಯೂ ಇದ್ದ ಮೈಂದದ್ವಿವಿದರೆಂಬ ವಾನರರಿಬ್ಬರನ್ನೂ, ನಮ್ಮ ರಾಕ್ಷಸರು ಹಿಡಿ ದು, ಅವರ ನಡುವನ್ನು ಕತ್ತಿಗಳಿಂದ ಕತ್ತರಿಸಿ, ಚಿತ್ರವಧಮಾಡಿ ಕೊಲ್ಲು