ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೨ ಶ್ರೀಮದ್ರಾಮಾಯಣವು (ಸರ್ಗ ೩೪ ಈಗಲೇ ನಾನು ಹೋಗಿ ನಿನ್ನ ಶತ್ರುವಾದ ಆ'ರಾವಣನ ಅಭಿಪ್ರಾಯವ ನ್ನು ತಿಳಿದು ಬರುವೆನು' ಸಂದೇಹಪಡಬೇಡ' ಕ್ಷಣಮಾತ್ರದಲ್ಲಿ ಬರುವೆನು ನೋಡು?” ಎಂದಳು, ಸರಮೆಯು ಹೀಗೆಂದು ಹೇಳಿ,ಆಗಲೇ ರಾವಣನ ಆರ ಮನೆಗೆ ಬಂದು, ಅಲ್ಲಿ ಅವನು ತನ್ನ ಮಂತ್ರಿಗಳೊಡನೆ ಮಾತಾಡುತಿದ್ದ ವಿಷ ಯಗಳೆಲ್ಲವನ್ನೂ ರಹಸ್ಯವಾಗಿ ನಿಂತು ಕೇಳಿದಳು ಇತರರ ಮನೋನಿಶ್ಚಯ ವನ್ನು ತಿಳಿಯುವುದರಲ್ಲಿ ಸಿಪಣೆಯಾದ ಆ ಸರಮಯ, ದುರಾತ್ಮನಾದ ಆ ರಾವಣನ ನಿಶ್ಚಯವೆಲ್ಲವನ್ನೂ ಕಿವಿಯಾರೆ ಕೇಳಿ ತಿಳಿದುಕೊಂಡು, ಅಲ್ಲಿಂದ ಹಿಂತಿರುಗಿ ಅಶೋಕವನಕ್ಕೆ ಬಂದಳು ಅಲ್ಲಿ ಪದ್ಮ ಪೀರವನ್ನು ಬಿಟ್ಟುಬಂದಿ ರುವ ಮಹಾಲಕ್ಷ್ಮಿಯಂತೆ ದೈನ್ಯದಿಂದ ನೆಲದಲ್ಲಿ ಕುಳಿತು ತನ್ನ ಪ್ರತ್ಯಾಗ ಮನವಸ್ತೆ ನಿರೀಕ್ಷಿಸುತ್ತಿರುವ ಸೀತಾದೇವಿಯನ್ನು ಕಂಡಳು ಸರಮಯ ಹಿಂತಿರುಗಿ ಬಂದುದನ್ನು ನೋಡಿದೊಡನೆ ಸೀತೆಯು ಪರಮಾನಂದಭರಿತ ಳಾಗಿ, ಸಂಭ ಮದಿಂದ ಮುಂದೆ ಬಂದು, ಆಕೆಯನ್ನ ಪ್ಪಿಕೊಂಡು, ತನ್ನ ಕೈ ಯಿಂದಲೆ” ಆಕೆಗೆ ಆಸನವನ್ನು ಕೊಟ್ಟು 'ಸಪಿ ಸರಮ? ಇದೊ' ಈ ಆಸ ನದಲ್ಲಿ ಸುಖವಾಗಿ ಕುಳಿತು ನೀನು ತಿಳಿದು ಬಂದ ವಿಷಯವೆಲ್ಲವನ್ನೂ ಯ ಥಾಸ್ಥಿತವಾಗಿ ತಿಳಸು' ಕರನಾಗಿಯೂ ದುಗಾತ್ಯ ನಾಗಿಯ, ಇರುವ ಆ ರಾವಣನ ಸಿಕ್ಖ ಯವೇನೆಂಬುದನ್ನು ಹೇಳು?"ಎಂದಳು ಸೀತೆಯು ಭಯಾ ತ.ರದಿಂದ ನಡುಗುತ್ತ ಹೀಗೆ ಪ್ರಶ್ನೆ ಮಾಡಿದೊಡನೆ ಸರಮೆಯು ಆಕೆಗೆ ರಾವಣನ ಉದ್ದೇಶಗಳನ್ನು ತಿಳಿಸುವುದಕ್ಕೆ ತೊಡಗಿ, ಎಲೆ ಸೀತೆ | ನಡೆದ ಸಂಗತಿಗಳನ್ನು ತಿಳಿಸುವೆನು ಕೇಳು ? ಅಲ್ಲಿ ರಾವಣನ ತಾಯಿಯಾದ ಕೈಕಸಿಯೂ, ಅವನ ವೃದ್ಯಮಂತ್ರಿಯಾದ ಅವಿದ್ದನೆಂಬವನೂ, ನಿನ್ನನ್ನು ಬಿಟ್ಟು ಬಿಡುವುದಕ್ಕಾಗಿ ರಾವಣನಿಗೆ ಎಷ್ಟೊವಿಧದಿಂದ ನೀತಿಯನ್ನು ಹೇಳಿ ಬೋಧಿಸಿದರು ಅವರಿಬ್ಬರೂ ಆ ರಾವಣನನ್ನು ಕುರಿತು “ವತ್ಸ ರಾವಣಾ' ಈಗಲೇ ನೀನು ಹೋಗಿ ಬಹು ಮಾನಪೂರಕವಾಗಿ ರಾಮನಿಗೆ ಸೀತೆಯ ನ್ಯೂ ಪ್ಪಿಸಿಬಿಡು' ಹಾಗೆ ಮಾಡದಪಕ್ಷದಲ್ಲಿ ರಾಮನ ಕೈಯಿಂದ ನಿನಗೆ ಮ ಹಾನರ್ಥವು ಸಂಭವಿಸುವುದು. ಆತನು ಜನಸ್ನಾನದಲ್ಲಿ ನಡೆಸಿದ ಮಹಾದ್ಭು ತವಾದ ಸಾಹಸವೊಂದೇ ಇದಕ್ಕೆ ಸಾಕಾದ ನಿದರ್ಶನವಲ್ಲವೆ ? ಆ ರಾಮನು ಹಾಗಿರಲಿ' ಅವನ ಭತ್ಯನಾದ ಹನುಮಂತನೆಂಬ ಸಾಮಾನ್ಯಕಪಿಯೊಂದು