ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦೮ ಶ್ರೀಮದ್ರಾಮಾಯಣವು (ಸರ್ಗ, ೩೫. ಚ್ಚಿಸುತ್ತಿರುವುದು, ವತ್ಥ ರಾವಣಾ ' ದೇವತೆಗಳು, ದಾನವರು, ಯಕ್ಷರು ಮುಂತಾಗಿ ಯಾವ ದೇವಜಾತಿಯವರಿಂದಲೂ ಮರಣವಿಲ್ಲದ ಹಾಗೆ ನೀನು ವರವನ್ನು ಪಡೆದು ಬಂದಿರುವುದೇನೋ ನಿಜವು ಆದರೇನು ಈಗ ಬಂದಿ ರುವವರೊಬ್ಬರೂ ಆ ಜಾತಿಗೆ ಸೇರಿದವರಲ್ಲ' ಬಲಾಡ್ಯರಾದ ಮತ್ತು ಪರಾ ಕ್ರಮಶಾಲಿಗಲಾದ ಮನುಷ್ಯರೂ, ಕಪಿಗಳೂ, ಕರಡಿಗಳೂ, ಸಿಂಗಳೀಕಗ ಭೂ ಸೇರಿ ದೊಡ್ಡ ಸೈನ್ಯಗಳೊಡನೆ ನಮ್ಮ ಲಂಕಾದ್ವಾರದಲ್ಲಿ ನಿಂತು ಗ ರ್ಜಿಸುತ್ತಿರುವುವು ನೀನು ಇವರಿಂದ ಸಾವಿಲ್ಲದಂತೆ ವರವನ್ನು ಕೇಳಿದವನಲ್ಲ ವಷ್ಟೆ? ಆದುದರಿಂದ ಇವರೇ ನಿನಗೆ ಮೃತ್ಯುಗಳಾಗಬಹುದಲ್ಲವೆ? ಈ ಶತ್ರು ಗಳಸಂಗತಿ ಯೂ ಹಾಗಿರಲಿ' ಆರೋ! ಅಲ್ಲಲ್ಲಿ ಕಾಣುವ ಮಹೋತ್ಪಾತಗಳನ್ನು ನೋಡಿದೆಯಾ? ಅವು ದಿವ್ಯಾ೦ತರಿಕ್ಷ ಭಮಗಳೆಂಬ ನಾನಾಭೇದವುಳ್ಳವುಗ ಳಾಗಿ, ಅವುಗಳಲ್ಲಿಯೂ ಇನ್ನೂ ಅನೇಕವಾದ ಆಂತರಾಳಿಕಪ್ರಭೇದಗಳನ್ನು ಹೊಂದಿ, ಮಹಾಭಯಂಕರವಾಗಿ ಕಾಣುತ್ತಿರುವುವ ನೋಡು' ಇದು ನನ್ನ ಕಡೆಯ ಸಮಸ್ವರಾಕ್ಷಸರಿಗೂ ನಾಶಸೂಚಕವೆಂದೇ ನನಗೆ ತೋರಿರುವು ಡು ಭಯಂಕರಸ್ವರೂಪವುಳ್ಳ ಮೇಫುಗಳು ಆಕಾಶದಲ್ಲಿ ಸೇರಿ ಪರುಷಧ್ವನಿ ಯಿಂದ ಗರ್ಜಿಸುತ್ಯ, ನಮ್ಮ ಲಂಕೆಯ ನಾನಾಭಾಗಗಳಲ್ಲಿಯ ಬಿಸಿಬಿಸಿ ಯಾದ ರಕ್ತದ ಮಳೆಯನ್ನು ಕರೆಯುತ್ತಿರುವುವು ನೋಡು'ನಮ್ಮಲ್ಲಿರುವ ಆ ನೆಕುದುರೆ, ಮೊದಲಾದ ವಾಹನಗಳೆಲ್ಲವೂ ಕಣ್ಣೀರುಬಿಟ್ಟು, ಗೋಳಿಡುತ್ತಿ ರುವವು ಧ್ವಜಗಳೆಲ್ಲವೂ ಮೊದಲಿನಂತೆ ಪ್ರಕಾಶತಿವಿಷ್ಯಗಳಾಗಿಲ್ಲದೆ, ಕೊಳೆ ಮುಚ್ಚಿ ಬಣ್ಣಗೆಟ್ಟಿರುವುವು ನರಿಗಳು, ಹದ್ದು, ಮೊದಲಾದ ಅನೇಕಕ್ಕೂರ ಮೃಗಗಳು ಲಂಕೆಯ ಸುತ್ತಲೂ ಸೇರಿ ಭಯಂಕರವಾಗಿ ಅರಳುತ್ತಿರುವು ವಲ್ಲದೆ, ಆಗಾಗ ಗುಂಪುಗುಂಪಾಗಿ ನಮ್ಮ ಲಂಕೆಯೊಳಗೂ ಪ್ರವೇಶಿಸುತ್ತಿ ರುವುವು ಆಗಾಗ ನಮಗೆ ಸ್ವಪ್ನದಲ್ಲಿ ಕರಿಮೋರೆಯ ಕೆಲವು ಹೆಂಗಸ ರು ಮುಂದೆ ನಿಂತು, ಬಿಳುಪಾದ ಹಲ್ಲುಗಳನ್ನು ತೆರೆದು, ಪಕಪಕನೆ ನಗುವಂ ತೆಯೂ, ದುರ್ಭಾಷೆಗಳಿಂದ ನಮ್ಮನ್ನು ಹೀಗಳೆಯುವಂತೆಯೂ, ನಮ್ಮ ಮನೆಯ ಧನಧಾನ್ಯಾದಿಗಳನ್ನೆಲ್ಲಾ ಕದ್ರೋಡಿಹೋಗುವಂತೆಯೂ ಕಾ ಣಿಸಿಕೊಳ್ಳುವರು ಇಲ್ಲಿನ ಮನೆಮನೆಗಳಲ್ಲಿ ಬಲಿಕರಕ್ಕಾಗಿ ಸಿದ್ಧಪಡಿಸಲ್ಪ ಟ್ಯ ಹವಿಸ್ಸುಗಳನ್ನು ನಾಯಿಗಳು ತಿಂದು ಹೋಗುತ್ತಿರುವುವು, ಹಸುಗಳ