ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧೨ ಶ್ರೀಮದ್ರಾಮಾಯಣವು - [ಸರ್ಗ ೩.೬. ವಸಿದ್ಧವಾದ ದೋಷವು ಆ ಸ್ವಭಾವವನ್ನು ಮೀರಿಹೋಗುವುದಕ್ಕೆ ನನ್ನಿಂ ದಲೂ ಸಾಧ್ಯವಲ್ಲ. ತಾತಾ' ಅದುಹಾಗಿರಲಿ' ರಾಮನು ಸಮುದ್ರದಲ್ಲಿ ಸೇ ತುವನ್ನು ಕಟ್ಟಿದನೆಂಬುದಕ್ಕಾಗಿಯೇ ಅಲ್ಲವೇ ನೀವೆಲ್ಲರೂ ಹೀಗೆ ಭಯಪಡು ತಿರುವಿರಿ!ಅತ್ಯಲ್ಪವಾದ ಆ ಸಮುದ್ರದಲ್ಲಿ ಅಷ್ಟು ಮಂದಿಯೂ ಸೇರಿ ಮ ಹಾಪ್ರಯತ್ನ ದಿಂದ ಒಂದು ಸೇತುವನ್ನು ಕಟ್ಟಿ ದಮಾತ್ರಕ್ಕೆ ಅದೊಂದಾ ಶರವೆ? ಇದಕ್ಕಾಗಿ ಭಯಪಡಬಾರದು' ತಾತಾ' ಮುಖ್ಯವಾಗಿ ಒಂದೇ ಮಾತನ್ನು ಹೇಳುವೆನು ಕಳು ಆ ರಾಮನು ವಾನರಸೈನ್ಯಗಳೊಡನೆ ಸ ಮುದ್ರವನ್ನು ದಾಟಿ ಈ ಕಡೆಗೆ ಬಂದಿರುವನಲ್ಲವೆ ? ಇನ್ನು ಮೇಲೆ ಅವನು ಪ್ರಾಣದೊಡನೆ ಹಿಂತಿರುಗಿ ಬದುಕಿ ಹೋಗಲಾರನು ! ಇದು ಸತ್ಯವು ಬೇ ಕಾದರೆ ಈ ವಿಷಯದಲ್ಲಿ ಶಪಥ ಮಾಡಿಕೊಡುವೆನು” ಎಂದನು ಹೀಗೆ ಪ ರುಷವಾಕ್ಯವನ್ನಾಡತಿದ್ಯ ರಾವಣನನ್ನು ನೋಡಿ, ಮಾಲ್ಯವಂತನು ಆ ರಾ ವಣನಿಗೆ ಕೋಪವು ಮಿತಿಮೀರಿಹೋಯಿತೆಂದು ತಿಳಿದು, ತನ್ನ ಹಿತವಾಕ್ಯ ವೆಲ್ಲವೂ ವಿಫಲವಾದುದ Fಾಗಿ ನಾಚಿಕೆಗೊಂಡು, ಪ್ರತಿವಾಕ್ಯವನ್ನಾಡದೆ, ಆ ರಾವಣನಿಗೆ ಯಥೋಚಿತವಾಗಿ ತಾನು ಹೇಳಬೇಕಾದ ಜಯಶಬ್ದವನ್ನು ಹೇಳಿ, ಆಶೀದ್ವಾದವನ್ನೂ ಮಾಡಿ ರಾಜಾಜ್ಞೆಯನ್ನು ಪಡೆದು ತನ್ನ ಮನೆಗೆ ಹಿಂತಿರುಗಿಬಿಟ್ಟನು ಆಮೇಲೆ ರಾವಣನು ಇತ್ತಲಾಗಿ ಇತರ ಮಂತ್ರಿಗೆ ಳೊಡನೆ ಕಲೆತು, ಮುಂದಿನ ಕಾಕ್ಯಗಳನ್ನಾಲೋಚಿಸಿ ನಿಶ್ಚಯಿಸಿಕೊಂಡು, ತನ್ನ ಲಂಕಾನಗರಿಗೆ ಪ್ರಬಲವಾದ ರಕ್ಷಣಕಾರಗಳನ್ನು ನಡೆಸಿದನು ಅಲಂ ಕೆಯ ಸೂತ್ವದ್ವಾರದಲ್ಲಿ ಕಾವಲಿರುವುದಕ್ಕಾಗಿ ಪ್ರಹಸನನ್ನು ನಿಯಮಿ ಸಿದನು, ವೀರಶಾಲಿಗಳಾದ ಮಹೋದರ, ಮಹಾಪಾರ್ಶ್ವರೆಂಬ ರಾಕ್ಷಸ ರಿಬ್ಬರನ್ನೂ ದಕ್ಷಿಣTಾರದಲ್ಲಿ ಕಾವಲಿರಿಸಿದನು ಬಾಗಿಲಲ್ಲಿ ಕಾವಲಿರುವುದ ಕ್ಲಾಗಿ, ಬಹಳ ಮಾಯಾಪಿಯಾದ ತನ್ನ ಮಗನಾದ ಇಂದ್ರಜಿತ್ತನ್ನೇ ಕರೆ ದು ಅನೇಕ ರಾಕ್ಷಸಸೈನಿಕರೊಡನೆ ಅಲ್ಲಿರುವಂತೆ ಅವನಿಗೆ ನಿಯಮಿಸಿದನು ಉತ್ತರದ್ವಾರದಲ್ಲಿ ಕಾವಲಿರುವುದಕ್ಕಾಗಿ, ಶುಕಸಾರಣರಿಬ್ಬರನ್ನೂ ನಿಯ ಮಿಸಿ, ತಾನೂ ಆಗ್ಲಿಯೇ ಇರುವುದಾಗಿ ಮಂತ್ರಿಗಳಿಗೆ ತಿಳಿಸಿದನ ಪಟ್ಟಣದ ನಡುವೆ ಗುಲ್ಮ ಸ್ಥಾನದಲ್ಲಿ ಮಹಾಪರಾಕ್ರಮಶಾಲಿಯಾದ ವಿರೂಪಾಕ್ಷನೆಂಬ ರಾಕ್ಷಸನನ್ನು ಅನೇಕರಾಕ್ಷಸರೊಡನೆ ಕಾವಲಿರಿಸಿದನು. ಹೀಗೆ ರಾವಣನು