ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೬.] ಯುದ್ಧಕಾಂಡವು. ೨೩೩ ಲ್ಲರೂ ಗುಂಪಾಗಿ ನಿಂತು ಕಣ್ಣೀರುಬಿಟ್ಟು ದುಃಖಿಸುತಿದ್ದರು. ಬಾಣಸ ಮೂಹಗಳಿಂದ ಮುಚ್ಚಿದ ಮೈಯುಳ್ಳವರಾಗಿ ಮಲಗಿದ್ದ ಆ ರಘುಪುಂಗವ ರಿಬ್ಬರನ್ನೂ ನೋಡಿ,* ವಿಭೀಷಣಸಹಿತವಾಗಿ ಸಮಸ್ತ ವಾನರಸೈನ್ಯವೂ ಸಂಕಟದಿಂದ ತತ್ತಳಿಸುತಿತ್ತು ಅಲ್ಲಿದ್ದ ವಾನರರು ಒಮ್ಮೆ ಮುಖವನ್ನೆತ್ತಿ ಅಂತರಿಕ್ಷವನ್ನು ನೋಡುವರು ಒಮ್ಮೊಮ್ಮೆ ನಾಲ್ಕು ದಿಕ್ಕುಗಳಿಗೂ ತಿರುಗಿ ನೋಡುವರು ಎಷ್ಟು ನೋಡಿದರೇನು ! ಆ ಯುದ್ಧರಂಗದಲ್ಲಿ ಮಾಯೆ ಯಿಂದ ಕಣ್ಮರೆಯಾಗಿದ್ದ ರಾವಣಪತ್ರನಾದ ಇಂದ್ರಜಿತನ್ನು ಮಾತ್ರ ಕಾಣಲಿಲ್ಲ. ವಿಭೀಷಣನೊಬ್ಬ ನಮಾತ್ರ ಇಂದ್ರಜಿತ್ತಿನಂತೆಯೇ ಮಾಯೆ ಯಲ್ಲಿ ನಿಪುಣನಾದುದರಿಂದ, ತಾನೂ ಮಾಯೆಯನ್ನ ವಲಂಬಿಸಿ ನಾಲ್ಕು ಕಡೆಗಳನ್ನೂ ನೋಡುತ್ತ ಕೊನೆಗೆ ಮಾಯೆಯಿಂದ ಬೇರೆಯವರ ಕಣ್ಣಿಗೆ ಕಾಣದೆ ನಿಂತಿದ್ದ ತನ್ನಣ್ಣನ ಮಗನಾದ ಇಂದ್ರಜಿತ್ತನ್ನು ಕಂಡನು ವೀರ ಕರ್ಮಗಳಲ್ಲಿ ಎಣೆಯಿಲ್ಲದವನಾಗಿಯೂ, ಯುದ್ಧದಲ್ಲಿ ಇದಿರಿಲ್ಲದವನಾಗಿ ಯೂ, ವರದಾನಬಲದಿಂದ ಬೇರೆಯವರಿಗೆ ಅದೃಶ್ಯನಾಗಿಯೂ, ತೇಜಸ್ಸಿ ನಿಂದಲೂ, ಯಶಸ್ಸಿನಿಂದಲೂ, ಪರಾಕ್ರಮದಿಂದಲೂ ಕೊಬ್ಬಿದವನಾಗಿ ಯೂ ಇದ್ದ ಆ ಇಂದ್ರಜಿತ್ತು, ವಾನರರ ಕಣ್ಣಿಗೆ ಗೋಚರಿಸದಿದ್ದರೂ ವಿಭೀಷಣನಿಗೆ ಸ್ಪಷ್ಟವಾಗಿ ಕಾಣಿಸಿದನು ಇಷ್ಟರಲ್ಲಿ ಇಂದ್ರಜಿತ್ತು ತನ್ನ ನಾಗಾಸದ ಮಹಿಮೆಯನ್ನೂ , ಅತ್ತಲಾಗಿ ತನ್ನ ವೈರಿಗಳಾದ ರಾಮಲಕ್ಷ ಣರು ಬಾಣಪ್ರಹಾರದಿಂದ ನೊಂದು ಮಲಗಿರುವುದನ್ನೂ ನೋಡಿ, ಮಿತಿ ಮೀರಿದ ಸಂತೋಷದಿಂದುಟ್ಟು, ತನ್ನ ಕಡೆಯ'ರಾಕ್ಷಸರೆಲ್ಲರನ್ನೂ ಪ್ರೊ ತ್ಸಾಹಪಡಿಸುವುದಕ್ಕಾಗಿ ಅವರನ್ನು ಕುರಿತು (ಎಲೆ ರಾಕ್ಷಸಭಟರೆ ! ಅದೋ ನೋಡಿರಿ ! ಯಾರು ಖರದೂಷಣಾದಿಗಳನ್ನು ಕೊಂದ ಮಹಾಬಲಾಡ್ಯ ರೆಂದು ಪ್ರಸಿದ್ಧಿ ಹೊಂದಿದ್ದರೋ, ರಾಮಲಕ್ಷ್ಮಣರೆಂಬ ಆ ಸಹೋದರ ರಿಬ್ಬರೂ ನನ್ನ ಬಾಣಗಳಿಂದ ನೊಂದು ನಿಶ್ಚಿರಾಗಿ ಮಲಗಿರುವುದನ್ನು ನೋಡಿರಿ ' ದೇವತೆಗಳಾಗಲಿ, ಅಸುರರಾಗಲಿ, ಋಷಿಸಮೂಹಗಳಾಗಲಿ ಎ ಲ್ಲರೂ ಒಂದಾಗಿಸೇರಿ ಬಂದರೂ, ಇವರನ್ನು ಈ ನನ್ನ ನಾಗಪಾಶಗಳ ಕಟ್ಟೆ ನಿಂದ ಬಿಡಿಸುವುದು ಸಾಧ್ಯವಲ್ಲ' ಯಾರ ಪರುಷ ಕ್ಕಾಗಿ ಭಯಪಟ್ಟು ನನ ತಂದೆಯಾದ ರಾವಣನು ಹಗಲುರಾತ್ರಿಯೂ ಚಿಂತೆಯಿಂದ ಕೊರಗ°