ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩A ೫ ಸರ್ಗ, ೪೬.] ಯುದ್ಧಕಂಡವು. -- | ಸುತ್ತ, ಅಟ್ಟಹಾಸದಿಂದ ಪಕಪಕನೆ ನಕ್ಕು, ತಿರುಗಿ ತನ್ನ ಕಡೆಯ ರಾಕ್ಷಸರನ್ನು ನೋಡಿ (ಎಲೆ ರಾಕ್ಷಸರೆ : ಇಲ್ಲಿನ ಸೇನಾಮುಖದಲ್ಲಿ ಸಮಸ್ತ ವಾನರ ಸೈನ್ಯವೂ ನೋಡುತ್ತಿರುವಾಗಲೇ, ಆ ಅಣ್ಣತಮ್ಮಂದಿರಾದ ರಾಮಲಕ್ಷಣ ರಿಬ್ಬರನ್ನೂ ಭಯಂಕರಗಳಾದ ನನ್ನ ಬಾಣಪಾಶಗಳಿಂದ ಕಟ್ಟಿಹಾಕಿ ರುವೆನು, ನನ್ನ ಸರ್ಪಾಸಗಳಿಂದ ಬದ್ಧರಾದ ಆ ಸಹೋದರರಿಬ್ಬರೂ ಒಂದಾಗಿ ಮಲಗಿರುವುದನ್ನು ಚೆನ್ನಾಗಿ ನೋಡಿರಿ ” ಎಂದನು ಈ ಮಾತನ್ನು ಕೇಳಿದೊಡನೆ ಕಪಟಿಯುದ್ಧದಲ್ಲಿ ನಿಪುಣರಾದ ಆ ರಾಕ್ಷಸರೆಲ್ಲ ರೂ, ಇಂದ್ರಜಿತ್ತು ನಡೆಸಿದ ವೀರಕಾರಕ್ಕಾಗಿ ಬಹಳ ಸಂತೋಷಗೊಂಡು, ಆಶ್ಚ ರದಿಂದ ಸಬರಾದರು. ಮೇಫುದಂತ ಮಹಾಕಾಯವುಳ್ಳ ಆ ರಾಕ್ಷಸ ರೆಲ್ಲರಿಗೂ ರಾಮನು ಹತನಾದನೆಂದೇ ನಿಶ್ಚಯವು ಹುಟ್ಟಿತು ಮಹಾ ಧ್ವನಿಯುಂಟಾಗುವಂತೆ ಎಲ್ಲರೂ ಸಿಂಹನಾದವನ್ನು ಮಾಡುತ್ತಿದ್ದರು. ಒಬ್ಬೊಬ್ಬರೂ ಇಂದ್ರಜಿತ್ತನ್ನು ಕೊಂಡಾಡುತಿದ್ದರು, ಆಗ ಇಂದ್ರಜಿತ್ತೂ ಕೂಡ ರಾಮಲಕ್ಷ್ಮಣರಿಬ್ಬರೂ ಉಸಿರಾಡದೆ ನಿಶೇಷ್ಯರಾಗಿ ನೆಲದಮೇಲೆ ಬಿದ್ದಿರುವುದನ್ನು ನೋಡಿ, ಅವರಿಬ್ಬರೂ ಸತ್ತರೆಂದೇ ನಿಶ್ಚಯಿಸಿಕೊಂ ಡನು, ಅವನ ಮನಸ್ಸಿಗೆ ಮಿತಿಮೀರಿದ ಸಂತೋಷವೂ ಹುಟ್ಟಿತು ತನ್ನ ಕಡೆ ಯ ರಾಕ್ಷಸರನ್ನು ಮೇಲೆಮೇಲೆ ಪ್ರೋತ್ಸಾಹಿಸುತ್ತಾ, ಆ ಯುದ್ಧಭೂಮಿ ಯನ್ನು ಬಿಟ್ಟು, ಆಗಲೇ ಹಿಂತಿರುಗಿ ಲಂಕಾಪುರಿಯನ್ನು ಪ್ರವೇಶಿಸಿದನು. ಇತ್ತಲಾಗಿ ರಾಮಲಕ್ಷಣರ ಸಾವಯವಗಳೂ ಬಾಣಮಯಗಳಾಗಿ, ಕೈ ಕಾಲು ಮೊದಲಾದ ಅಂಗಗಳಾಗಲಿ, ಬೆರಳು ಮೊದಲಾದ ಉಪಾಂಗಗಳಾ ಲಿ ಯಾವುದೊಂದೂ ಹೊರಗೆ ಕಾಣದೆ ಶಸ್ತ್ರಸಮೂಹಗಳಿಂದ ಮುಚ್ಚಿ ಹೋದುದನ್ನು ನೋಡಿ, ಸುಗ್ರಿವನ ಮನಸ್ಸಿನಲ್ಲಿ ಮಹತ್ತಾದ ಭಯವು ಹುಟ್ಟಿತು ದುಃಖದಿಂದ ಆತನ ಕಣ್ಣುಗಳಲ್ಲಿ ನೀರು ತುಳುಕುತ್ತಿತ್ತು. ಅವ ನ ಮುಖವು ಕಂಡಿತು ಹೀಗೆ ಅತಿದೈನ್ಯದಿಂದ ನಿಂತಿರುವ ಸುಗ್ರೀವನನ್ನು ನೋಡಿ ವಿಭೀಷಣನು ಮುಂದೆ ಬಂದು ಅವನನ್ನು ಸಮಾಧಾನಪಡಿಸುತ್ತ” (ಸುಗ್ರೀವಾ' ಭಯಪಡಬೇಡ' ನಿನ್ನ ದುಃಖವನ್ನು ಬಿಡು' ಧೈಯ್ಯದಿಂದಿರು! ಕಣ್ಣೀರನ್ನು ತಡೆಹಿಡು' ಯುದ್ಧದ ಕ್ರಮಗಳೇ ಹೀಗಲ್ಲವೆ ? ಯುದ್ಧದಲ್ಲಿ ಯಾವಾಗಲೂ ಜಯವೇ ಉಂಟಾಗುವುದೆಂಬ ನಿಶ್ಚಯವಿಲ್ಲವಷ್ಟೆ, ಎಲೈ