ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೮.] ಯುದ್ಧಕಾಂಡು, ೨೩೭೧ ಕಣ್ಣುಗಳಲ್ಲಿ ಪಳಪಳನೆ ನೀರು ಸುರಿಯುತಿತ್ತು, ದೇವತೆಗಳಂತೆ ಮಹಾಪ್ರ ಭಾವಸಂಪನ್ನರಾದ ಆ ರಾಮಲಕ್ಷ್ಮಣರನ್ನು ನೋಡಿ ಸೀತೆಯು ಅವರಿಬ್ಬ ರೂ ಹತರಾದರೆಂದೇ ಊಹಿಸಿಕೊಂಡು, ಪರಮದುಃಖಿತೆಯಾಗಿ ವಿಲಪಿಸು ವುದಕ್ಕೆ ತೊಡಗಿದಳು. ಇಲ್ಲಿಗೆ ನಾಲ್ವತ್ತೇಳನೆಯ ಸರ್ಗವು (ಸೀತೆಯು ರಾಮಲಕ್ಷ್ಮಣರ ದುರವಸ್ಥೆಯನ್ನು ನೋಡಿ | ನಾನಾವಿಧವಾಗಿ ವಿಲಪಿಸಿದುದು ತನ್ನ ಪತಿಯಾದ ರಾಮನೂ, ಬಲಾಢನಾದ ಲಕ್ಷ್ಮಣನೂ ಶಸ್ತಹತ ರಾಗಿ ಬಿದ್ದಿರುವುದನ್ನು ನೋಡಿ, ಸೀತೆಯು ದುಃಖದಿಂದ ಮೈಮರೆತು, ಕೇಳು ವವರಿಗೆ ಕರುಣೆಹುಟ್ಟುವಂತೆ ವಿಲಪಿಸುವಳು «ಹಾ ' ನನ್ನ ದೌರ್ಭಾಗ್ಯ ವೆ' ಸೂತ್ವದಲ್ಲಿ ಸಾಮುದ್ರಿಕಲಕ್ಷಣವನ್ನು ತಿಳಿದ ಯಾವ ಶಾಸ್ತ್ರಜ್ಞರು ನ ಇನ್ನು ನೋಡಿ 11 ಈಕೆಯು ಪತ್ರವತಿಯಾಗುವಳೆಂದೂ, ಇವಳಿಗೆ ವೈಧವ್ಯ ವಿಲ್ಲ” ವೆಂದೂ ಹೇಳಿದ್ದರೋ, ಆ ಜ್ಞಾನಿಗಳೆಲ್ಲರೂ ಈಗ ರಾಮನು ಹತನಾ ದುದರಿಂದ ಸುಳ್ಳಾಡಿದಂತಾಯಿತು ಮೊದಲು ಯಾರು ನನ್ನ ಪತಿಯಾದ ರಾಮನು ಅಶ್ವಮೇಧಾದಿಯಾಗಗಳನ್ನು ನಡೆಸತಕ್ಕವನೆಂದೂ, ಸತ್ರಗಳನ್ನು ನಡೆಸತಕ್ಕವನೆಂದೂ ನಿರ್ಧರಿಸಿ ಹೇಳಿದ್ದರೋ, ಆ ಜ್ಞಾನಿಗಳೆಲ್ಲರೂ ಈಗ ನನ್ನ ಪತಿಯು ಹತನಾದುದರಿಂದ ಅಸತ್ಯವಾದಿಗಳೆನಿಸಿಕೊಂಡರು. ಮೊದಲು ಜ್ಯೋತಿಶ್ಯಾಸ್ತ ವಿಶಾರದರಾದ ಯಾವ ಬ್ರಾಹ್ಮಣರು, ನಾನು ಕಿವಿಯಾರೆ ಕೇಳುವಂತೆ, ನನ್ನಿ ದಿರಿಗೆ ನೀನು ಮಾಂಗಲ್ಯವತಿ”ಯೆಂದು ಹೇಳಿದ್ದರೆ, ಅಂತಹ ಜ್ಞಾನಿಗಳ ಮಾತೆಲ್ಲವೂ ಈಗ ರಾಮನು ಹತನಾದುದರಿಂದ ಸುಳ್ಳೆನಿಸಿಕೊಂಡುವು. ಮೊದಲು ಯಾವ ಮಹಾತ್ಮರು ನನ್ನನ್ನು ನೋಡಿ (ನೀನು ಮಹಾವೀರನಾದ ರಾಜನಿಗೆ ಪತ್ನಿ "ಯೆಂದೂ ನೀನು ಪರಮಭಾ ಗ್ಯವತಿ"ಯೆಂದೂ ಹೇಳಿದ್ದರೆ, ಆ ಜ್ಞಾನಿಗಳ ಮಾತೆಲ್ಲವೂ ಈಗ ರಾಮನು ಹತನಾದುದರಿಂದ ಅಸತ್ಯವೆನಿಸಿಕೊಂಡಿತು ಇದೋ! ಈಗಲೂ ಈತನ ಕಾಲುಗಳಲ್ಲಿ ಪದ್ಮರೇಖೆಯು ಸ್ಪಷ್ಟವಾಗಿ ಕಾಣುತ್ತಿರುವುದು ಇಂತಹ ಶು ಭಲಕ್ಷಣಗಳುಳ್ಳ ಸ್ತ್ರೀಯರೆಲ್ಲರೂ ಚಕ್ರವರ್ತಿ ಮಹಿಷಿಯರಾಗಿ ಪತಿಗಳೊಡನೆ