ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬8 ಸರ್ಗ ೪೮.) ಯುದ್ದ ಕಾಂಡವು ನಗಳೆರಡೂ! ಒತ್ತಾಗಿ ಉಬ್ಬಿ ಬೆಳೆದು ತೊಟ್ಟುಗಳ ಕಡೆಯಲ್ಲಿ ಹಳ್ಳವಾಗಿರು ವುವು ನನ್ನ ನಾಭಿಯು ಸುತ್ತಲೂ ಉಬ್ಬಿ ನಡುವೆ ಹಳ್ಳವಾಗಿರುವುದು, ನ. ಪಕ್ಕೆಗಳೂ, ನನ್ನ ಎದೆಯೂ ಮಾ೦ಸತುಂಬಿ ಉಬ್ಬಿರುವುವು. ನನ ಮೈಬಣ್ಣವು ಚಿನ್ನ ದಂತೆ ಹೊಳೆಯುವುದು ನನ್ನ ಮೈ ಕೂದಲುಗಳೆಲ್ಲವೂ ಬಹಳ ಮೃದುವಾಗಿರುವುವು ನನ್ನ ಪಾದತಲಗಳೂ, ನನ್ನ ಕಾಲ್ಗೆರಳುಗಳೂ, ನೆಲದಲ್ಲಿ ಸಂದುಬಿಡದಂತೆ ಚೆನ್ನಾಗಿ ಊರಿನಿಲ್ಲುವುದರಿಂದ ಸಾಮುದ್ರಿಕಶಾಸ ಜ್ಞರೆಲ್ಲರೂ ನನ್ನ ನ್ನು “ಶುಭಲಕ್ಷಣವುಳ್ಳವಳೆಂದೇ ಹೇಳುವರು ನನ್ನ ಕೈಗಳೂ ಕಾಲುಗಳೂ ಪೂರ್ಣವಾದ ಯವರೇಖೆಯಿಂದ ಕೂಡಿ, ನಡುವೆ ಸಂದುಬಿಡ ದೆ ದಟ್ಟವಾಗಿ ಸೇರಿದ ಬೆರಳುಗಳಿಂದ ಶೋಭಿಸುತ್ತಿರುವುವು ಕನ್ಯಾಲಕ್ಷ ಣವನ್ನು ತಿಳಿದ ಬ್ರಾಹ್ಮಣರು ನನ್ನನ್ನು ಯಾವಾಗಲೂ, ಕಿರುನಗೆಯುಳ್ಳ ವಳಂದ ಹೇಳಿರುವರು ಜ್ಯೋತಿಷಸಿದ್ಧಾಂತದಲ್ಲಿ ನಿವುಣರಾದವಿಪ್ರರೆಲ್ಲರೂ ನನಗೆ ನನ್ನ ಪತಿಯೊಡನೆ ಸಾಮಾಜ್ಯಪಟಾಭಿಷೇಕವಾಗುವುದೆಂದೂ ಸ ಚಿಸಿರುವರು. ಇವೆಲ್ಲವೂ ಈಗ ನನ್ನ ಭಾಗಕ್ಕೆ ಮಾತ್ರ ವ್ಯರ್ಥವಾಗಬೇಕೆ ? ಸಹೋದರರಾದ ರಾಮಲಕ್ಷ್ಮಣರಿಬ್ಬರೂ, ಆ ಜನಸ್ಥಾನದಲ್ಲೆಲ್ಲಾ ನನ್ನನ್ನು ಹುಡುಕಿ, ಕೊನೆಗೆ ನನ್ನ ವೃತ್ತಾಂತವನ್ನೂ ತಿಳಿದುಕೊಂಡು, ನನ್ನನ್ನು ಬಿಡಿಸುವುದಕ್ಕಾಗಿ ಆಕ್ಷೇಭ್ಯವಾದ ಮಹಾಸಮುದ್ರವನ್ನೂ ದಾಟಿಬಂದು, ಗೋಷ್ಟದಮಾತ್ರದಂತಿರುವ ಇಂದ್ರಜಿತಿನ ಮಾಯೆಯಿಂದ ಹತರಾದರ ಲ್ಲಾ ' ಆ ರಾಮಲಕ್ಷ್ಮಣರಿಬ್ಬರೂ, ವಾರುಣಾಸ್ತ್ರವನ್ನೂ, ಆಸ್ಟ್ರೇಯಾಸ್ತ್ರ ವನ್ನೂ, ಐಂದ್ರಾಸ್ತ್ರವನ್ನೂ , ವಾಯವ್ಯಾಸವನ್ನೂ, ಬ್ರಹ್ಮ ತೆರೋ ನಾಮಕಾಸ್ತ್ರವನ್ನೂ ಪಡೆದವರಲ್ಲವೆ ? ಆ ಅಸ್ತ್ರಗಳೆಲ್ಲವೂ ಈಗ ಏನಾ ದುವು ? ಇಂದ್ರಜಿತ್ತು ಯುದ್ಧದಲ್ಲಿ ಮಾಯಯಿಂದ ಅದೃಶ್ಯನಾಗಿ ದೇವೇಂದ್ರಸಮಾನರಾಗಿಯೂ, ನನಗೆ ದಿಕ್ಕಾಗಿಯೂ ಇದ್ದ ರಾಮ ಲಕ್ಷಣರಿಬ್ಬರನ್ನೂ ಕಸಟಯುದ್ಧದಿಂದ ಕೊಂದನಲ್ಲವೆ ? ಇನ್ನು ನನಗೆ ದಿ ಕ್ಯಾರು? ಯುದ್ಧದಲ್ಲಿ ರಾಮನ ಕಣ್ಣಿಗೆ ಬಿದ್ದ ವೈರಿಯು ಎಷ್ಟೆ ಮನೋ ವೇಗವುಳ್ಳವನಾಗಿದ್ದರೂ ಪ್ರಾಣದಿಂದ ಹಿಂತಿರುಗಿ ಹೋಗಲಾರನು. ಅಂ

  • ಇಲ್ಲಿ “ಚಕ್ರವರ್ತಿಯ: ಪಾಣೆ" ನಂದ್ಯಾವರ್ತ ಪ್ರದಕ್ಷಿಣಃ” ಇತ್ಯಾದಿ ಸಾಮುದ್ರಿಕೂಕ್ತವಾದ ನಂದ್ಯಾರ್ವಲಕ್ಷಣಗಳಿಂದ ಕೂಡಿದವಳೆಂದು ತಿಳಿಯಬೇಕು,