ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ಂ ಶ್ರೀಮದ್ರಾಮಾಯಣದ [ಸರ್ಗ, ೪೧. ದನು, ಅವನ ಕಣ್ಣುಗಳು ಕೆಂಡದಂತೆ ಕೆಂಪಾದುವು. ಹೀಗೆ ಕೋಪವಶನಾ ದ ರಾವಣನು, ತನ್ನ ಮಂತ್ರಿಗಳನ್ನು ನೋಡಿ, “ಎಲೈ ಅಮಾತ್ಯರೆ! ಈ ದು ರಾತ್ಮನನ್ನು ಹಿಡಿದು ಕೊಲ್ಲಿರಿ ' ಬಿಡಬೇಡಿರಿ 1 ಚಿತ್ರವಧಮಾಡಿ ಕೊಲ್ಲಿಸಿ ರಿ?” ಎಂದು ಕೂಗಿದನು? ಈ ರಾಜಾಜ್ಞೆಯನ್ನು ಕೇಳಿದೊಡನೆ, ಉರಿಯು ವ ಬೆಂಕಿಯಂತಿ ಮಹಾತೇಜಸ್ವಿಗಳಾದ ನಾಲ್ಕು ಮಂದಿ ಹೊರರಾಕ್ಷಸರು ಬಂದು ಆ ಅಂಗದನನ್ನು ಹಿಡಿದರು ಅಂಗದನು ಬಹಳ ಧೈತ್ಯಶಾಲಿಯಾದು ದರಿಂದ, ಆ ರಾಕ್ಷಸರಿಗೆ ತನ್ನ ಶಕ್ತಿಯನ್ನು ಚೆನ್ನಾಗಿ ತೋರಿಸಬೇಕೆಂಬುದ ಕ್ಯಾಗಿ, ಆಗಲೇ ಅವರನ್ನು ತಡೆಯದೆ, ಅವರ ಕೈಗೆ ಸುಲಭವಾಗಿ ಸಿಕ್ಕಿದಂತೆ ನಟಿಸಿ, ಆ ನಾಲ್ವರೂ ತನ್ನ ತೋಳುಗಳನ್ನು ಬಿಗಿಯಾಗಿ ಅಪ್ಪಿ ಹಿಡಿದು ನಿಂತಮೇಲೆ, ಆ ರಾಕಸರೆಲರನೂ ಹಕ್ಕಿಯಂತೆ ತನ್ನ ಎರಡು ಕೈಗಳಿಂದಲೂ ಬಿಗಿಯಾಗಿ ಹಿಡಿದುಕೊಂಡು ಪರೂತದಂತೆ ಮಹೋನ್ನತವಾದ ಒಂದು ಪ್ರಾಸಾದಕ್ಕೆ ಹಾರಿಬಿಟ್ಟನು ಅಂಗದನು ಆ ಪ್ರಾಸಾದದಮೇಲೆ ಕುಳಿತು ಅಲ್ಲಿಂದ ತಾನು ಹಿಡಿದಿದ್ದ ಆ ರಾಕ್ಷಸರ ದೂರಕೆಗೆದುಬಿಟ್ಟನು ರಾವಣನು ನೋಡುತ್ತಿರುವಾಗಲೇ ಆ ನಾಲ್ಕು ಮಂದಿ ರಾಕ್ಷಸರೂ, ಅಂಗದನ ಬಾಹು ವೇಗದಿಂದೊದರಲ್ಪಟ್ಟು ದೊಪ್ಪನೆ ನೆಲಕ್ಕೆ ಬಿದ್ದರು ಆ ಮೇಲೆ ಮಹಾ ವೀರವಂತನಾದ ಅಂಗದನು, ತನ್ನ ಮುಂದೆ ಪ್ರತಶಿಖರದಂತೆ ಮ ಹೋನ್ನತವಾಗಿ ಕಾಣುತ್ತಿದ್ದ ರಾವಣನ ಪ್ರಾಸಾದತಿಖರವನ್ನು ನೋಡಿದನು ಆ ಶಿಖರವನ್ನು ಕಂಡೊಡನೆ ಥಟ್ಟನೆ ಅದರಮೇಲೆ ಹಾರಿ, ಅದನ್ನು ತನ್ನ ಕಾಲಿನಿಂದ ಮೆಟ್ಟಲು, ಮೊದಲು ಇಂದ್ರನಿಂದ ಭೇದಿಸಲ್ಪಟ್ಟ ಹಿಮವ ತೃತ್ವತದ ಶಿಖರದಂತೆ ರಾವಣನು ನೋಡುತ್ತಿರುವಾಗಲೇ ಆತನ ಪದ ಫಾತಕ್ಕೆ ಆ ಪ್ರಾಸಾದವು ಪುಡಿಪುಡಿಯಾಗಿ ಒಡೆದುಬಿಟ್ಟಿತು. ಹೀಗೆ ಅಂ ಗದನು ರಾವಣನ ಉಪ್ಪರಿಗೆಯ ಶಿಖರವನ್ನು ಮುರಿದಮೇಲೆ, ರಾಕ್ಷಸರೆಲ್ಲ ರೂ ಕೇಳುವಂತೆ ತನ್ನ ಹೆಸರನ್ನು ಮತ್ತೊಂದಾವರ್ತಿ ಕೂಗಿ ಹೇಳಿ, ಮಹಾ ಧ್ವನಿಯಿಂದ ಸಿಂಹನಾದವನ್ನು ಮಾಡುತ್ತ ಆಕಾಶಕ್ಕೆ ಹಾರಿದನು ಹೀಗೆ ಸಮಸ್ತರಾಕ್ಷಸರಿಗೂ ದುಃಖವನ್ನುಂಟುಮಾಡಿ, ವಾನರರೆಲ್ಲರನ್ನೂ ಸಂ ತೋಷಪಡಿಸುತ್ತ ಮಹಾವೇಗದಿಂದ ಅಂತರಿಕ್ಷ ಮಾರ್ಗವಾಗಿ ಬಂದು, ವಾ ನರಸೇನೆಯ ಮಧ್ಯದಲ್ಲಿಳಿದು, ರಾಮನ ಪಕ್ಕವನ್ನು ಸೇರಿದನು. ಅತ್ತಲಾಗಿ