ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೨ ಶ್ರೀಮದ್ರಾಮಾಯಣವು (ಸರ್ಗ, ೪೨. ಸಿದರು. ಹೀಗೆ ವಾನರರು ಲಂಕಾನಗರವನ್ನು ಮುತ್ತಿನಿಂತಿರುವರೆಂಬುದನ್ನು ಕೇಳಿ ರಾವಣನು, ಬಹಳ ಕ್ರೋಧಾವಿಷ್ಟನಾಗಿ, ನಗರರಕ್ಷಣಕಾರವನ್ನು ಮೊದಲಿಗಿಂತಲೂ ಇಮ್ಮಡಿಯಾಗಿ ಹೆಚ್ಚಿಸಿ, ತನ್ನ ಅರಮನೆಯ ಉಪ್ಪರಿಗೆ ಯನ್ನೇರಿದನು ಅದರಮೇಲೆ ನಿಂತು,ಇತ್ತಲಾಗಿ ತನ್ನ ಪಟ್ಟಣದಸುತ್ತಲೂ, ಅಲ್ಲಲ್ಲಿನ ಪರತಪ್ರದೇಶಗಳನ್ನೂ, ಕಾಡುಗಳನ್ನೂ, ತೋಟಗಳನ್ನೂ ಎಡೆ ಬಿಡದೆ ತುಂಬಿ ನಿಂತಿರುವ ಅಸಂಖ್ಯಾತವಾದ ಕಪಿಸೇನೆಯನ್ನು ಕಂಡನು. ಸಮಸ್ತ ಭೂಮಿಯನ್ನೂ ಒಂದೇ ತುತ್ತಾಗಿ ಕಬಳಿಸುವಂತೆ ದಟ್ಟವಾಗಿ ನಿಂತಿದ್ದ ಆ ವಾನರಸೇನೆಯನ್ನು ಕಂಡು ರಾವಣನು, ತನ್ನಲ್ಲಿ ತಾನು ( ಆ ಹಾ! ಇಷ್ಟು ದೊಡ್ಡ ಸೈನ್ಯವನ್ನು ನಾಶಮಾಡುವ ಬಗೆಯೇನು?” ಎಂದು ಚಿಂತಿಸುತಿದ್ಯನು ಹೀಗೆ ಬಹಳಹೊತ್ತಿನವರೆಗೆ ಚಿಂತಾಕ್ರಾಂತನಾಗಿದ್ದು, ಕೊನೆಗೆ ಧೈಲ್ಯವನ್ನವಲಂಬಿಸಿ, ಕೋಪದಿಂದ ವಿಸ್ತಾರವಾಗಿ ಕಣ್ಣುಗಳನ್ನು ಬಿಚ್ಚಿ, ಪಟ್ಟಣದ ಸುತ್ತಲೂ ನಿಂತಿದ್ದ ವಾನರಸೈನ್ಯವನ್ನೂ, ತನಗೆ ಮೃ ತ್ಯುರೂಪನಾಗಿ ನಿಂತಿದ್ದ ರಾಮನನ್ನೂ ನೋಡಿದನು. ಇತ್ತಲಾಗಿ ಶ್ರೀರಾ ಮನೂಕೂಡ, ರಣೋತ್ಸಾಹದಿಂದ ಸಂತುಷ್ಟನಾಗಿ, ಆ ವಾನರಸೈನ್ಯದೊ ಡನೆ ಸ್ವಲ್ಪ ಸ್ವಲ್ಪವಾಗಿ ಮುಂದುವರಿದು, ಪ್ರಾಕಾರದ ಸಮೀಪಕ್ಕೆ ಬಂದು ನಿಂತು, ಆ ಲಂಕಾನಗರಿಯೆಲ್ಲವೂ ಅನೇಕಘರರಾಕ್ಷಸರಿಂದ ಪರಿ ವೃತವಾಗಿ ಸುರಕ್ಷಿತವಾಗಿರುವುದನ್ನು ಕಂಡನು ಅಲ್ಲಲ್ಲಿ ಚಿತ್ರವಿಚಿತ್ರಗಳಾ ದ ಧ್ವಜಪತಾಕೆಗಳಿಂದ ಆ ಪಟ್ಟಣವು ಸುತ್ತಲೂ ಅಲಂಕೃಕವಾಗಿರುವುದ ನ್ನೂ ನೋಡಿದನು ಹೀಗೆ ಮಹಾವೈಭವದಿಂದ ಅತಿಮನೋಹರವಾಗಿ ಶೋ ಭಿಸುತಿದ್ದ ಆ ಲಂಕೆಯ ಸೊಬಗನ್ನು ನೋಡಿದೊಡನೆ, ಅವನ ಮನಸ್ಸಿಗೆ ಸೀ ತೆಯ ಸ್ಮರಣವುಂಟಾಯಿತು ಅವನಿಗೆ ಅಪಾರವಾದ ದುಃಖವೂ ಹುಟ್ಟಿತು. ಹೀಗೆ ಸೀತೆಯನ್ನು ಸ್ಮರಿಸಿ ದುಃಖಿಸುತ್ತ ರಾಮನು (ಆಹಾ'ಜನಕರಾಜನಿಗೆ ಪ್ರತಿಯಾಗಿ, ಜಿಂಕೆಯ ಮರಿಯ ಕಣ್ಣುಗಳಂತೆ ವಿಶಾಲವಾದ ಕಣ್ಣುಳ್ಳವ ಳಾಗಿರುವ ಆ ನನ್ನ ಪ್ರಿಯಪತ್ನಿ ಯಾದ ಸೀತೆಯು, ನನ್ನ ನಿಮಿತ್ತವಾಗಿ, ಇದೋ ! ಇಲ್ಲಿ ಹೊರರಾಕ್ಷಸರಿಂದ ಪೀಡಿತಳಾಗಿ ದುಃಖದಿಂದ ತಪಿ ಸುವಳಲ್ಲವೆ?ಅನ್ನ ಪಾನಗಳೂ ಇಲ್ಲದೆ ಕೃಶಳಾಗಿ ಬರೀನೆಲದಮೇಲೆ ಮಲಗಿ ಕಷ್ಟಪಡುತ್ತಿರುವಳಲ್ಲಾ!” ಎಂದು ಕೊರಗುತಿದ್ದನು ಆದರೆ ರಾಮನು ಕ್ಷತಿ