ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೨, ಯುದ್ದ ಕಾಂಡವು. ೨೩೪೩ ಯಧರವನ್ನು ಚೆನ್ನಾಗಿ ಬಲ್ಲವನಾದುದರಿಂದ, ಸೀತೆಯನ್ನು ಕುರಿತು ಹೀಗೆ ದುಃಖಿಸುತಿದ್ದರೂ, ತನ್ನ ರಣೋತ್ಸಾಹವನ್ನು ಬಿಡದೆ, ಮಿತಿಮೀರಿದ ಕೋ ಪಾವೇಶವನ್ನು ತೋರಿಸುತ್ತ ತನ್ನ ಕಡೆಯ ವಾನರರನ್ನು ಕುರಿತು, (ಎಲೆ ವೀ ರರ' ಇನ್ನು ತಡಮಾಡಬಾರದು : ಶೀಘ್ರದಲ್ಲಿಯೇ ಶತ್ರುವದಕ್ಕೆ ಪ್ರಯ ಮೈಸಿರಿ ' ” ಎಂದು ನಿಯಮಿಸಿದನು. ಯಾವಕಾರವನ್ನಾ ದರೂ ಅತಿಸುಲಭ ವಾಗಿ ಲೀಲಾಮಾತ್ರದಿಂಗಲೇ ನಿರ್ವಹಿಸಬಲ್ಲ ಮಹಾವೀರವುಳ್ಳ ಆ ರಾ ಮನು, ಹೀಗೆ ಆಜ್ಞಾಪಿಸಿದೊಡನೆಯೇ, ಅಲ್ಲಿ ಸಮಸ್ತ ವಾನರಸೈನಿಕರೂ ಒಬ್ಬರಿಗೊಬ್ಬರು ಹಟಹಿಂದ, ನಾನು ತಾನೆಂದು ಮುಂದೆ ನುಗ್ಗುತ್ತ, ಯು ದ್ಯಾರಂಭಸೂಚಕವಾದ ಸಿಂಹನಾದಗಳನ್ನು ಮಾಡಿದರು, ಆ ಸಮಸ್ಯ ವಾನರರೂ ಒಬ್ಬರಿಗೊಬ್ಬರು ಈ ಕ್ಷಣದಲ್ಲಿಯೇ ನಾವು ಈ ಲಂಕೆಯೆಲ್ಲವ ನ್ಯೂ ಪತಶಿಖರದಳಿಂದ ಬೀಸಿಬಡಿದಾಗಲಿ, ಮುಷ್ಟಿಗಳಿಂದ ಹೊಡೆದಾ ಗಲಿ, ಪುಡಿಪುಡಿಯಾಗಿ ಮಾಡಿ ಥಳಚ್ಚಿಸಿಬಿಡಬೇಕು.”ಎಂದು ಹೇಳಿ ಮನಸ್ಸಿ ನಲ್ಲಿ ನಿರ್ಧರಿಸಿಕೊಂಡರು ಆದರಂತೆಯೇ ಆ ಕಪಿವೀರರೆಲ್ಲರೂ, ಅಲ್ಲಲ್ಲಿ ಸಿಕ್ಕಿದ ದೊಡ್ಡ ದೊಡ್ಡ ಪರತಶಿಖರಗಳನ್ನೂ, ಪ್ರತಖಂಡಗಳನ್ನೂ, ಬಗೆಬಗೆ ಯ ವೃಕ್ಷಸಮೂಹಗಳನ್ನೂ ಕೈಗೆತ್ತಿಕೊಂಡು, ಯುದ್ಧಸನ್ನದ್ಧರಾಗಿ ನಿಂತಿದ್ದರು ರಾಕ್ಷಸೇಶ್ವರನಾದ ರಾವಣನು ಉಪ್ಪರಿಗೆಯಮೇಲೆ ನಿಂತು ನೋಡುತ್ತಿರುವಾಗಲೇ, ಈ ವಾನರಸೇನೆಗಳೆಲ್ಲವೂ ಬೇರೆಬೇರೆ ಭಾಗಗಳಾಗಿ ಹೊರಟು, ರಾಮನ ಮನಸ್ಸಿಗೆ ಸಂತೋಷವನ್ನು ಹುಟ್ಟಿಸುತ್ತ, ಆ ಲಂಕೆ ಯ ಗೋಡೆಯನ್ನೆ ರಿದುವು ತಾಮ್ರದಂತೆ ಕೆಂಪಾದ ಮುಖವುಳ್ಳವರಾಗಿ ಯೂ, ಬಂಗಾರದಂತೆ ಮೈಬಣ್ಣವುಳ್ಳವರಾಗಿಯೂ ಇದ್ದ ಆ ವಾನರರೆಲ್ಲ ರೂ, ರಾಮಸಿಗಾಗಿ ತಮ್ಮ ತಮ್ಮ ಪ್ರಾಣಗಳನ್ನೂ ಪ್ಪಿಸುವುದಕ್ಕೂ ಹಿಂಜ ರಿಯದೆ, ದೃಢನಿಶ್ಚಯವನ್ನು ಮಾಡಿಕೊಂಡು, ಸಾಲೆ, ತಾಳೆ, ಮೊದಲಾದ ದೊಡ್ಡ ದೊಡ್ಡ ಮರಗಳನ್ನೂ, ದೊಡ್ಡ ದೊಡ್ಡ ತಲೆಗಳನ್ನೂ ಆಯುಧಗಳ ನ್ಯಾಗಿ ಹಿಡಿದು, ಆ ಲಂಕೆಯ ಕೋಟೆಯನ್ನೇರಿದರು ಆಗಲೇ ಕೆಲವು ವಾನ ರರು ತಾವು ತಾವು ಕೈಯಲ್ಲಿ ಹಿಡಿದಿದ್ದ ಪಕ್ವತಶಿಖರಗಳಿಂದಲೂ, ಮುಷ್ಟಿ ಗಳಿಂದಲೂ ಹೊಡೆದು, ಆ ಲಂಕೆಯ ಪ್ರಾಕಾರಶಿಖರಗಳನ್ನೂ, ಅದರ ಸು ತಲಿನ ಉದ್ಯಾನವನಗಳನ್ನೂ, ಪುರದ್ಘಾರಗಳನ್ನೂ ಮುರಿದು ಕೆಡಹುತ್ತ,