ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫O ಶ್ರೀಮದ್ರಾಮಾಯಣವು [ಸರ್ಗ ೪೩. ಮತ್ತೊಂದು ಕಡೆಯಲ್ಲಿ ಅಗ್ನಿ ಕೇತು,ರಶ್ಮಿ ಕೇತು, ಸುಪ್ತಷ್ಟು , ಯಜ್ಞಕೊ ಪರೆಂಬ ನಾಲರು ರಾಕಸರೂ ಒಂದಾಗಿ ಸೇರಿ, ರಾಮನಮೇಲೆ ಎಡೆಬಿಡದೆ ಬಾಣವರ್ಷವನ್ನು ಸುರಿಸುತ್ತಿರಲು, ರಾಮನು ಕೋಪಗೊಂಡವನಾಗಿ, ಆ ಗ್ನಿ ಜ್ವಾಲೆಗಳಂತಿದ್ದ ನಾಲ್ಕು ತೀಕ್ಷಬಾಣಗಳಿಂದ, ಆ ನಾಲ್ವರುರಾಕ್ಷಸ ರ ತಲೆಗಳನ್ನೂ ಕಡಿದು ಹಾಕಿದನು, ಮೈಂದನು ತನ್ನ ಮುಷ್ಠಿಯಿಂದಲೇ ವಜ್ರಮುಷ್ಠಿಯೆಂಬ ರಾಕ್ಷಸನನ್ನು ಕೊಂದು, ಅವನ ರಥವನ್ನೂ ಮುರಿದು, ಅವನ ರಧಾಶ್ವಗಳನ್ನೂ ಧ್ವಂಸಮಾಡಿದನು ಹೀಗೆ ಮೈಂದನ ಮುಷ್ಠಿಪ್ರಹಾರದಿಂದ ಹತನಾದ ವಜ್ರಮುಷ್ಠಿಯು, ಪುರಪ್ರಾಕಾರದ ಅಟ್ಟಲೆಯು ಮುರಿದುಬಿದ್ದಂತೆ, ತನ್ನ ರಥದೊಡನೆಯೂ, ರಥಾಶ್ವಗಳೊಡ ನೆಯೂ ನೆಲಕ್ಕುರುಳಿದನು. ಸೂಯ್ಯನು ತನ್ನ ಕಿರಣಗಳಿಂದ ಅಂಧಕಾರವ ನ್ನು ಭೇದಿಸುವಂತೆ, ನಿಕುಂಭನು, ಕಾಡಿಗೆಯ ರಾಶಿಯಂತೆ ಕಪ್ಪುಬಣ್ಣವುಳ್ಳ ನೀಲನನ್ನು ತನ್ನ ತೀಕ್ಷಬಾಣಗಳಿಂದ ಪ್ರಹರಿಸಿದನು ಮತ್ತು ಆ ನಿಕುಂಭ ನು ಬಹಳ ಹಸ್ತಲಾಘುವವುಳ್ಳವನಾದುದರಿಂದ, ಇನ್ನೂ ಎಡೆಬಿಡದೆ ಮೇ ಲೆ ಮೇಲೆ ಮರುಬಾಣಗಳಿಂದ ಆ ನೀಲನ ದೇಹವನ್ನು ಮುಚ್ಚಿ ಗಟ್ಟಿ ಯಾಗಿ ಕೇಕೆಹಾಕಿ ನಕ್ಕನು ಎಣೆಯಿಲ್ಲದ ಪರಾಕ್ರಮವುಳ್ಳ ನೀಲನಾ ದರೋ ಆ ರಾಕ್ಷಸನ ಬಾಣಹತಿಯನ್ನೂ ಲಕ್ಷಮಾಡದೆ, `ಯುದ್ಧದಲ್ಲಿ ವಿಷ್ಣು ದೇವನು ಹೇಗೋಹಾಗೆ, ಆ ನಿಕುಂಭನ ರಥಚಕ್ರವನ್ನೇ ಕೈಗೆ ತೆಗೆ ದುಕೊಂಡು, ಆ ಚಕ್ರದಿಂದಲೇ ನಿಕುಂಭನನ್ನೂ ,ಅವನ ಸಾರಥಿಯನ್ನೂ ಬ ಡಿದು, ಅವರಿಬ್ಬರ ತಲೆಗಳನ್ನೂ ಏಕಕಾಲದಲ್ಲಿ ಕತ್ತರಿಸಿ ಕೆಡಹಿದನು ವ ಜ್ರಾಯುಧಕ್ಕೂ ಸಿಡಿಲಿಗೂ ಸಾಟಿಯಾದ ದೇಹಸ್ಪರ್ಶವುಳ್ಳ ದ್ವಿವಿದನೆಂಬ ಯೂಥಪತಿಯು, ಯುದ್ಧದಲ್ಲಿ ರಾಕ್ಷಸರೆಲ್ಲರೂ ನೋಡುತ್ತಿರುವಾಗಲೇ, ಅಶಶಿಪ್ರಭನೆಂಬ ರಾಕ್ಷಸಸೇನಾಪತಿಯಮೇಲೆ ಒಂದು ದೊಡ್ಡ ಪಕ್ವತತಿ ಖರವನ್ನು ತಂದು ಬೀಸಿಬಿಡಿದನು. ಹೀಗೆ ಪರತಶಿಖರಗಳಿಂದ ಯುದ್ಧಮಾ ಡುತ್ತಿರುವ ವಾನರವೀರನಾದ ದ್ವಿವಿದನನ್ನು ನೋಡಿ, ಅಶನಿಪ್ರಭನು ಆ ತ್ಯಾಕ್ರೋಶಗೊಂಡವನಾಗಿ, ಸಿಡಿಲಿಗೆ ಸಮಾನಗಳಾದ ತನ್ನ ತೀಕ್ಷಬಾಣ ಗಳನ್ನು ಅವನಮೇಲೆ ಪ್ರಯೋಗಿಸಿದನು. ಆಗ ದ್ವಿವಿದನು, ತನ್ನ ದೇಹವೆಲ್ಲ ವೂ ರಾಕ್ಷಸರ ಬಾಣಗಳಿಂದ ಭಿನ್ನವಾದುದನ್ನು ನೋಡಿ, ಕೋಪಾವೇಶದಿಂ