ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫೧ ಸರ್ಗ, ೪೩ ] ಯುದ್ದ ಕಾಂಡವು, ದ ಕೂಡಿದವನಾಗಿ, ಒಂದು ಸಾಲವೃಕ್ಷವನ್ನು ಕೈಗೆತ್ತಿಕೊಂಡು, ಅದರಿಂದ ಆ ರಾಕ್ಷಸನನ್ನೂ, ಅವನ ರಥವನ್ನೂ, ಅವನ ರಥಾಶ್ವಗಳನ್ನೂ ಬಡಿದು ಕೆಡ ಹಿದನು. ಅತ್ತಲಾಗಿ ವಿದ್ಯುನ್ಮಾಲಿಯು, ರಥದಲ್ಲಿ ಕುಳಿತಹಾಗೆಯೇ ಚಿನ್ನ ದ ಕಟ್ಟು ತನ್ನ ಬಾಣಗಳಿಂದ ಸುಷೇಣನನ, ಪಹರಿಸಿ, ಬಾರಿಬಾರಿಗೂ ಸಿಂಹನಾದವನ್ನು ಮಾಡುತಿದ್ದನು. ವಾನರೋತ್ತಮನಾದ ಸುಷೇಣನಾ ದರೋ ಆ ವಿದ್ಯುನ್ಮಾಲಿಯು ರಥದಲ್ಲಿ ಕುಳಿತಿರುವುದನ್ನು ನೋಡಿ, ಒಂದು ದೊಡ್ಡ ಪಕ್ವತಶಿಖರವನ್ನು ಆ ರಥದಮೇಲೆ ಬೀಸಿಬಡಿದು ಅದನ್ನು ಪುಡಿ ಮಾಡಿದನು ಆವಿದ್ಯುನ್ಮಾಲಿಯೆಂಬ ರಾಕ್ಷಸನು ಬಹಳದೇಹಲಾಘುವವು ತೃವನಾದುದರಿಂದ, ತನ್ನ ರಥವು ಮುರಿದು ಬೀಳುವಷ್ಟರಲ್ಲಿಯೇ, ಗದೆಯ ನ್ನು ಕೈಗೆತ್ತಿಕೊಂಡು, ರಥದಿಂದ ಕೆಳಗೆ ಹಾರಿ ನೆಲದಮೇಲೆ ನಿಂತನು. ಇ ಮೂರಲ್ಲಿ ವಾನರಾಗ್ರಣಿಯಾದ ಸುಷೇಣನು, ಕೋಪೋದ್ರಿಕ್ತನಾಗಿ,ಒಂದು ದೊಡ್ಡ ಶಿಲೆಯನ್ನೆ ಕೊಂಡು, ಅವಿದ್ಯುನ್ಮಾಲಿಯ ದಿರಿಸಿ ಮುಂದೆ ಹೋ ದನು. ಹೀಗೆ ಸುಷೇಣನು ದೊಡ್ಡ ಕಲ್ಲನ್ನೆ ತಿಕೊಂಡು ತನಗಿದಿರಾಗಿ ಬರುವು ದನ್ನು ನೋಡಿ ವಿದ್ಯುನ್ಮಾಲಿಯು, ತಾನು ಕೈಯಲ್ಲಿ ಹಿಡಿದಿದ್ದ ಗದೆ ಯಿಂದ, ಆಸುಷೇಣನ ಎದೆಯಮೇಲೆ ಪ್ರಹರಿಸಿದನು ಧೀರನಾದ ಸುಷೇಣನು ಭಯಂ ಕರವಾದ ಆ ಗದಾಪ್ರಹಾರವನ್ನೂ ಲಕ್ಷಮಾಡದೆ, ಧೈಯ್ಯದಿಂದ ಮುಂದೆ ಮಗ್ಗಿ, ತಾನು ಹೊತ್ತು ತಂದ ಆ ದೊಡ್ಡಶಿಲೆಯನ್ನು ಆ ವಿದ್ಯುನ್ಮಾಲಿಯ ಎದೆಯಮೇಲೆ ಬೀಸಿಬಿಡಿದನು ಈ ಶಿಲಾಪ್ರಹಾರವು ತಗುಲಿದೊಡನೆಯೇ ವಿದ್ಯುನ್ಮಾಲಿಯು ಎದೆಯೊಡೆದು ಸತ್ತುಬಿದ್ದನು. ಹೀಗೆ ಶೂರರಾದ ಅ ನೇಕವಾನರರು ಅಲ್ಲಲ್ಲಿ ಶೂರರಾದ ಅನೇಕರಾಕ್ಷಸರನ್ನಿ ದಿರಿಸಿ, ದೇವತೆಗಳು ದೈತ್ಯರನ್ನು ಹೇಗೋಹಾಗೆ ಕಂಡಕಂಡಕಡೆಯಲ್ಲಿ ಅವರನ್ನು ಕೊಲ್ಲುತ್ತಬಂ ದರು. ಆಗ ವಾನರರರಾಕ್ಷಸರಿಬ್ಬರಿಗೂ ನಡೆದ ದ್ವಂದ್ವ ಯುದ್ಧವು. ಅ ತ್ಯಂತಭಯಂಕರವಾಗಿ ಕಾಣಿಸಿತು. ಎಲ್ಲಿ ನೋಡಿದರೂ ಮುರಿದು ಬಿದ್ದ ಕತ್ತಿಗಳು! ಎಲ್ಲಿ ನೋಡಿದರೂ ಪುಡಿಪುಡಿಯಾದ ಗದೆಗಳು! ಎಲ್ಲಿ ನೋಡಿದ ರೂ ಕತ್ತರಿಸಿಬಿದ್ದ ಶಕ್ತಿತೋಮರಪಟ್ಟಸಾದ್ಯಾಯುಧಗಳು !"ಎಲ್ಲಿ ನೋ ಡಿದರೂ ಕಳಚಿಬಿದ್ದರಥಗಳು' ಎಲ್ಲಿ ನೋಡಿದರೂ ಸತ್ತು ಬಿದ್ದ ಯುದ್ಧದ ಕುದುರೆಗಳು!ಎಲ್ಲಿ ನೋಡಿದರೂ ತುಂಡುತುಂಡಾಗಿ ಬಿದ್ದ ಮದದಾನೆಗಳು