ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩80 ಸರ್ಗ ೪೪.] ಯುದ್ಧಕಾಂಡವು ದಲ್ಲಿ ಉಕ್ಕಿಬರುತ್ತಿರುವ ಸಪ್ತಸಮುದ್ರಗಳ ಪ್ರವಾಹಧ್ವನಿಯಂತೆ ಮಹಾ ಭಯಂಕರವಾಗಿ ಕೇಳಿಸಿತು, ಇಷ್ಟರಲ್ಲಿಯೇ ರಾಮನು ಅವರನ್ನು ನೋಡಿ, ಎವಹಾರುವಷ್ಟರಲ್ಲಿ ಅಗ್ನಿ ಜ್ವಾಲೆಗಳಂತೆ ತೀಕ್ಷ್ಯಗಳಾದ ಆರುಬಾಣಗ ಇನ್ನು ಪ್ರಯೋಗಿಸಿ, ಅವುಗಳಿಂದ ಆ ರಾಕ್ಷಸರಿಗೆ ಪ್ರಧಾನರಾದ ಆರುಮಂ ದಿ ರಾಕ್ಷಸರನ್ನೂ ತಡೆದನು ಶತ್ರು ದುರ್ಜಯನಾದ ಯಮಶತ್ರುವೆಂಬವ ನೊಬ್ಬನು, ಮಹೋದರ ಮಹಾಪಾರ್ಶ್ವರೆಂಬವರಿಬ್ಬರು, ದೊಡ್ಡ ದೇಹ ವುಳ್ಳ ವಜ್ರದಂಷ್ಯನೊಬ್ಬನು, ರಾವಣನಿಂದ ಲಂಕೆಯ ಉತ್ತರದ್ದಾರ ದ ಕಾವಲಿಗಾಗಿ ನಿಯಮಿಸಲ್ಪಟ್ಟಿದ್ದ ಶುಕಸಾರಣರಿಬ್ಬರು, ಈ ಆರುಮಂ ದಿ ರಾಕ್ಷಸರೂ, ಆ ರಾಮಬಾಣಗಳಿಂದ ಮರ್ಮಸ್ಥಾನಗಳಲ್ಲಿ ಹೊಡೆಯ ಲ್ಪಟ್ಟವರಾಗಿ, ತಾವು ಬದುಕಿದುದೇ ಸಾಕೆಂದು ಯುದ್ಧರಂಗದಿಂದ ಪಲಾ ಯನಮಾಡಿದರು.ಇಷ್ಟರಲ್ಲಿ ಮಹಾಬಲಾಢನಾದ ರಾಮನು ರಣರಂಗದ ↑ ಗಾಢಾಂಧಕಾರವು ಕವಿದುದನ್ನು ನೋಡಿ, ಸುವರ್ಣದಿಂದ ಚಿತ್ರಿತಗಳಾ ಗಿ, ಅಗ್ನಿ ಜ್ವಾಲೆಗಳಂತೆ ಹೊಳೆಯುತ್ತಿದ್ದ ತನ್ನ ಬಾಣಗಳನ್ನು ನಾಲ್ಕು ಕಡೆಗಳಿ ಗೂ ಪ್ರಯೋಗಿಸಿ, ಆ ಬಾಣಗಳ ಕಾಂತಿಯಿಂದಲೇ ದಿಕ್ಕುವಿದಿಕ್ಕುಗಳೆಲ್ಲವ ನ್ಯೂ ಬೆಳಗಿಸಿದನು, ( ಆಗ ಯುದ್ಧರಂಗವೆಲ್ಲವೂ ರಾಮನಾಮಾಂಕಿತಗಳಾದ ಬಾಣಗಳಿಂದಲೇ ವ್ಯಾಪ್ತವಾಯಿತು )ರಾಮನನ್ನಿ ಹರಿಸುವುದಕ್ಕಾಗಿ ಬಂದಿದ್ದ ಭಯಂಕರಾಕಾರವುಳ್ಳ ಬೇರೆ ಯಾವರಾಕ್ಷಸರಿದ್ದರೂ ಅವರೆಲ್ಲರೂ, ಬೆಂ ಕಿಯಲ್ಲಿ ಬಿದ್ದ ಶಲಭಗಳಂತೆ ಕ್ಷಣಮಾತ್ರದಲ್ಲಿ ರಾಮಬಾಣಗಳಿಗೆ ಸಿಕ್ಕಿಬೂ ದಿಯಾದರು ರಾಮಧನುಸ್ಸಿನಿಂದ ತಂಡೋಪತಂಡವಾಗಿ ಹೊರಟ ಚಿನ್ನದ ಹಿಡಿಗಳುಳ್ಳ ಸಾವಿರಾರುಬಾಣಗಳು, ಗಗನಪ್ರದೇಶವೆಲ್ಲವನ್ನೂ ವ್ಯಾಪಿಸಿರಲು, ಆ ರಾತ್ರಿಯು, ಮಿಂಚುಹುಳುಗಳಿಂದ ತುಂಬಿದ ಶರತ್ಕಾಲದ ರಾತ್ರಿಯಂ ತೆ ಕಾಣುತಿತ್ತು ಮೊದಲೇ ಭಯಂಕರವಾದ ಆ ರಾತ್ರಿಯು, ಅಲ್ಲಲ್ಲಿ ರಾಕ್ಷ ಸರ ಸಿಂಹನಾದಗಳಿಂದಲೂ, ಕಪಿಗಳ ಕೋಲಾಹಲಗಳಿಂದಲೂ, ಮೇಲೆ ಮೇಲೆ ಅತಿಭಯಂಕರವಾಗಿ 'ತೋರುತಿತ್ತು ಈ ರಣರಂಗದಿಂದ ಮೇಲೆ ಮೇಲೆ ಹೆಚ್ಚಿಬರುತ್ತಿದ್ದ ಮಹಾಧ್ವನಿಯು, ತ್ರಿಕೂಟಪಕ್ವತದ ಗುಹೆ ಗಳೆಲ್ಲವನ್ನೂ ವ್ಯಾಪಿಸಿ, ಅಲ್ಲಿಂದ ಪ್ರತಿಧ್ವನಿಯನ್ನು ಹೊರಡಿಸುತ್ತಿರಲು, ಆ ಪರತವೇ ಮಾತಾಡುವಂತೆ ಕಾಣಿಸಿತು. ಆ ರಣರಂಗದಲ್ಲಿ ಅಲ್ಲಲ್ಲಿ ಕತ್ರ