ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫೬ ಶ್ರೀಮದ್ರಾಮಾಯಣವು (ಸರ್ಗ ೪೪. ಲೆಯಂತೆ ಕಪ್ಪಾದ ಮೈಯುಳ್ಳ ದೊಡ್ಡದೊಡ್ಡ ಭೂತಾಕಾರದ ಸಿಂಗಳೀ ಕಗಳು, ಅಲ್ಲಲ್ಲಿ ತಮ್ಮ ದೊಡ್ಡ ತೋಳುಗಳನ್ನು ನೀಡಿ ಮುಂದೆ ಸಿಕ್ಕಿದ ರಾ ಕ್ಷಸರನ್ನೆಲ್ಲಾ ಆ ತೋಳುಗಳ ನಡುವೆ ಸೇರಿಸಿಕೊಂಡು, ಅವರನ್ನು ಒಂದೇ ತುತ್ತಾಗಿ ನುಂಗುತಿದ್ದುವು. ಇಷ್ಟರಲ್ಲಿ ಅಂಗದನು ಆ ಯುದ್ಧದಲ್ಲಿ ತನಗೆ ಪ್ರತಿಭಟನಾದ ಇಜಿತನ್ನು ಕೈಗಳಿಂದಪ್ಪಳಿಸಿ, ಒಂದೇ ಪ್ರಹಾರಕ್ಕೆ ಅವನ ಸಾರಥಿಯನ್ನೂ, ಕುದುರೆಗಳನ್ನೂ ಕೊಂದುಕೆಡಹಿದನು. ಹೀಗೆ ಕ್ರೂರವಾಗಿಯೂ, ಭಯಂಕರವಾಗಿಯೂ ಯುದ್ಧವು ನಡೆಯುತ್ತಿರುವಾ ಗಲೇ, ಮಹಾಕಾಯವುಳ್ಳ ಇನ್ ಜಿತ್ತು, ಅಂಗನಿಂದ ತನ್ನ ಸಾರಥಿಯ ರಥಾಶ್ವಗಳೂ ಹತವಾದುದನ್ನು ನೋಡಿ, ಆ ರಥವನ್ನು ಅಲ್ಲಿಯೇ ಬಿಟ್ಟು, ಕ್ಷಣಮಾತ್ರದಲ್ಲಿ ಯಾರಿಗೂ ತಿಳಿಯದಂತೆ ಕಣ್ಮರೆಯಾದನು ಅಂಗದನು ನಡೆಸಿದ ಮಹಾದ್ಭುತವಾದ ಈ ಕಾರವನ್ನು ನೋಡಿ ದೇವತೆಗಳೂ, ಋ ಷಿಗಳೂ, ರಾಮಲಕ್ಷಣರೂ, ಅವನನ್ನು ಬಹಳವಾಗಿ ಕೊಂಡಾಡಿದರು. ಲೋಕದಲ್ಲಿ ಸಮಸ್ತಭೂತಗಳೂ, ಇನ್ಮಜಿನ ಪರಾಕ್ರಮವನ್ನು ಚೆ ಸ್ನಾಗಿ ಬಲ್ಲುವು ( ಅವನು ಯಾವ ಯುದ್ಧದಲ್ಲಿಯೂ, ದುರ್ಜಯನಾಗಿರು ವನು ಇಂತವನು ಅಂಗದನಮುಂದೆ ನಿಲ್ಲಲಾರದೆ ಅದೃಶ್ಯನಾಗಿ ಹೋದು ದನ್ನು ನೋಡಿ ಎಲ್ಲರಿಗೂ ಆತ್ಮರು ಹುಟ್ಟಿತು ) ಅಂತಹ ಮಹಾಧೀರನೂ ಕೂಡ ಅಂಗದನಿಂದ ಪರಾಜಿತನಾದುದನ್ನು ನೋಡಿ, ಎಲ್ಲರ ಮನಸ್ಸಿನಲ್ಲಿ ಯೂ ಸಂತೆ ಷವೂ ಹುಟ್ಟಿತು ಆಗ ಸಮಸ್ತಕಪಿಗಳ ಸುಗ್ರೀವ ವಿಭೀ ಷಣಾದಿಗಳೊಡನೆ ಸೇರಿ, ಇಂದ್ರಜಿ ಗುಂಟಾದ ಪರಾಭವಕ್ಕಾಗಿ ಭಲೆ ! ಭಲೆ ' ಶಹಬಾಸ್” ಎಂದು ಅಂಗದನನ್ನು ಕೊಂಡಾಡಿದರು. ಇಷ್ಟರಲ್ಲಿ ಇವ್ರಜಿತ್ತಾದರೋ ತನಗೆ ಅಂಗದನಿಂದುಂಟಾದ ಪರಾಭವವನ್ನು ಸಹಿ ಸಲಾರದೆ, ಆತಿಭಯಂಕರವಾದ ಕೋಪವನ್ನವಲಂಬಿಸಿದನು ಈ ನಡುವೆ ಇತ್ತಲಾಗಿ ರಾಮನು ವಾನರರನ್ನು ನೋಡಿ ( ಎಲೆ ವಾನರರೆ ! ನೀವೆಲ್ಲರೂ ಈಗ ನಿಮ್ಮ ರಾಜನಾದ ಸುಗ್ರೀವನ ಸಮೀಪದಲ್ಲಿಯೇ ಬಹಳ ಎಚ್ಚರಿಕೆ ಯಿಂದಿರಬೇಕು ಆ ಇನ್ದ್ರಜಿತ್ತು ಬ್ರಹ್ಮನಿಂದ ವರವನ್ನು ಹೊಂದಿದವ ಮು, ಮೂರುಲೋಕವನ್ನೂ ಬಹಳವಾಗಿ ಬಾಧಿಸುತ್ತಿದ್ದವನು ಆದರೆ ಈಗ ಅವನಿಗೆ ಮೃತ್ಯುವು ಸಮೀಪಿಸಿರುವುದು ಅವನನ್ನು ಕೊಲ್ಲಬೇಕೆಂದಿರುವ