ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೭] ಯುದ್ಧಕಾಂಡವು ೨೩೩೯ ಲ್ಲಿ ಹಿಡಿದು, ಸಮಸ್ತದಿಕ್ಕುಗಳನ್ನೂ , ತಿರಗೂರ್ಧ್ವಪ್ರದೇಶಗಳನ್ನೂ, ಕ ಣ್ಣಿಟ್ಟು ಕಾಯುತ್ತ, ಒಂದು ಹುಲ್ಲು ಕದಲಿದರೂ ರಾಕ್ಷಸರು ಬಂದರೆಂದೇ ಶಂಕಿಸುತ್ತ ಬಹಳ ಜಾಗರೂಕತೆಯಿಂದಿದ್ದರು. ಇಷ್ಟರಲ್ಲಿ ಅತ್ತಲಾಗಿ ರಾವ ಇನು, ಜಯಶೀಲನಾಗಿ ತನ್ನ ಬಳಿಗೆ ಬಂದ ತನ್ನ ಮಗನಾದ ಇಂದ್ರಜಿತ್ತನ್ನು ಮನ್ನಿಸಿ ಕಳುಹಿಸಿದಮೇಲೆ, ಸೀತೆಗೆ ಕಾವಲಾಗಿದ್ದ ರಾಕ್ಷಸಸಿಯರನ್ನು ಕರೆತರುವಂತೆ ಆಜ್ಞೆ ಮಾಡಿದನು. ಈ ರಾಜಾಜ್ಞೆಯಂತೆ ಕೆಲವು ರಾಕ್ಷಸ ಯರು ತ್ರಿಜಟೆಯೊಡನೆ ಸೇರಿ ರಾವಣನ ಬಳಿಗೆ ಬಂದರು. ಆಗ ರಾವಣನು ಸಂತೋಷದಿಂದ ಆ ರಾಕ್ಷಸಸ್ತ್ರೀಯರನ್ನು ನೋಡಿ ಎಲೆ ರಾಕ್ಷಸಿಯರೆ' ನ « ಕುಮಾರನಾದ ಇಂದ್ರಜಿತ್ತಿನಿಂದ ರಾಮಲಕ್ಷ್ಮಣರಿಬ್ಬರೂ ಹತರಾದ ರೆಂಬ ವೃತ್ತಾಂತವನ್ನು ಈಗಲೇ ನಿವು ಸೀತೆಗೆ ತಿಳಿಸಬೇಕು ಈ ಸಂಗತಿ ಯನ್ನು ತಿಳಿಸುವುದಲ್ಲದೆ, ಆಕೆಯನ್ನು ಪುಷ್ಪಕವಿಮಾನದ ಮೇಲೇರಿಸಿ ಕರೆ ತಂದು, ರಣರಂಗದಲ್ಲಿ ಹತರಾಗಿ ಬಿದ್ದಿರುವ ರಾಮಲಕ್ಷ್ಮಣರನ್ನು ಆಕೆಗೆ ತೋರಿಸಿರಿ ' ಆ ಸೀತೆಯು ಇದುವರೆಗೂ ಯಾವನನ್ನು ನಂಬಿ ನನಗೆ ವಶ ಳಾಗದೆ ನನ್ನುನ್ನು ತಿರಸ್ಕರಿಸುತಿದ್ದಳೋ, ಆ ರಾಮನು ತನ್ನ ತಮ್ಮ ಮೊ ಡನೆ ಯುದ್ಧಾಗ್ರದಲ್ಲಿ ಹತನಾಗಿ ಬಿಟ್ಟಿರುವನು. ಇನ್ನಾದರೂ ಆ ಸೀತೆಯು ತನ್ನ ಮನಸ್ಸಿನ ಶೋಕವನ್ನೂ, ವಿಚಾರವನ್ನೂ ಬಿಟ್ಟು, ರಾಮನು ಬರುವನೆಂ ಬ ಆಶೋತ್ತರವನ್ನೂ ತೊರೆದು, ಸಾಭರಣಾಲಂಕೃತೆಯಾಗಿ ನನ್ನನ್ನು ಸೇರಬಹುದು ಯುದ್ಧದಲ್ಲಿ ರಾಮನು ತನ್ನ ತಮ್ಮನಾದ ಲಕ್ಷ್ಮಣನೊಡನೆ ಹತನಾಗಿ ಬಿದ್ದಿರುವುದನ್ನು, ವಿಶಾಲಾಕ್ಷಿಯಾದ ಆ ಸೀತೆಯು ತನ್ನ ಕಣ್ಣಾರೆ ತಾನೇ ನೋಡಿದಪಕ್ಷದಲ್ಲಿ, ಆಕೆಗೆ ಇನ್ನು ಮೇಲೆ ನನ್ನನ್ನು ಬಿಟ್ಟರೆ ಬೇರೆಗತಿ ಯಿಲ್ಲವೆಂದು ತಾನಾಗಿಯೆ ವ್ಯಕ್ತವಾಗುವುದು, ಇನ್ನು ಮೇಲೆ ನಾನಾಗಿ ಪ್ರಾರ್ಥಿಸದಿದ್ದರೂ ಅವಳು ರಾಮನಲ್ಲಿ ನಟ್ಟಿರುವ ತನ್ನ ಮನಸ್ಸನ್ನು ತಾ ನಾಗಿಯೇ ತಿರುಗಿಸಿ ನನ್ನನ್ನು ಸೇರುವಳು” ಎಂದನು ಆ ರಾಕ್ಷಸಸ್ತಿಯರೆ ಲ್ಲರೂ ದುರಾತ್ಮನಾದ ರಾವಣನ ಆಜ್ಞೆಯನ್ನು ಕೇಳಿ, ಮಹಾರಾಜನ ಅಪ್ಪಣೆ” ಎಂದು ಹೇಳಿ, ಪುಷ್ಪಕವಿಮಾನವಿದ್ದ ಸ್ಥಳಕ್ಕೆ ಹೋದರು, ರಾವ ಣಾಜ್ಞೆಯಂತೆ ಆ ರಾಕ್ಷಸಿಯರೆಲ್ಲರೂ ಆ ಪುಷ್ಪಕವಿಮಾನವನ್ನು ತೆಗೆದು ಕೊಂಡು, ಅಶೋಕವನದಲ್ಲಿ ಸೀತೆಯಿದ್ದ ಸ್ಥಳಕ್ಕೆ ಬಂದು, ಮೊದಲೇ ಪತಿ