ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20೮೬ ಶ್ರೀಮದ್ರಾಮಾಯಣವು (ಸರ್ಗ, ೪. ಭಗಳಂತೆ, ಪರೂತಾಕಾರವುಳ್ಳ ಗಜನೂ, ಮಹಾಬಲಾಢನಾದ ಗವಯನೂ, ಗವಾಕ್ಷನೂ ಆ ಸೇನೆಯ ಮುಂಭಾಗದಲ್ಲಿ ಹೊರಡಲಿ ! ವಾನರೋತ್ತಮ ನಾದ ಋಷಭನು ಆ ಸೇನೆಯ ಬಲಭಾಗದಲ್ಲಿ ನಿಂತು ಅದನ್ನು ರಕ್ಷಿಸುತ್ತಿ ರಲಿ ' ಮದ್ದದಾನೆಯಂತೆ ಇತರರಿಂದ ಇದಿರಿಸಲಾಗದ ಮಹಾಬಲವುಳ್ಳ ಗಂಧಮಾದನನು, ಆ ಸೇನೆಗೆ ಎಡಭಾಗದಲ್ಲಿದ್ದು ಅದನ್ನು ರಕ್ಷಿಸುತ್ತಿರಲಿ' ನಾ ನು ಐರಾವತವನ್ನೇರಿದ ಇಂದ್ರನಂತೆ ಈ ಹನುಮಂತನ ಹೆಗಲಮೇಲೆ ಕುಳಿ ತು, ಸಮಸ್ತ ಸೈನಿಕರಿಗೂ ಉತ್ಸಾಹವನ್ನು ಕೊಡುತ್ತ, ಸೇನೆಯ ಮಧ್ಯದಲ್ಲಿ ಬರುವೆನು ಯಕ್ಷರಾಜನಾದ ಕುಬೇರನು ಸಾರಭೌಮವೆಂಬ ದಿಗ್ಗಜವನ್ನೇರಿ ಬರುವಂತೆ ಈ ಲಕ್ಷಣನು ಅಗಂದನಮೇಲೇರಿ ನನ್ನ ಪಕ್ಕದಲ್ಲಿ ಬರಲಿ ಜಾಂ ಬವಂತನೂ, ಸುಷೇಣನೂ, ವೇಗದರ್ಶಿಯೂ ಈ ಮೂವರೂ ಆ ಸೇನೆಯ ಉ ದರಪ್ರದೇಶವನ್ನು ರಕ್ಷಿಸುತ್ತ ಬರಲಿ' ಮಹಾಬಲವುಳ್ಳ ಋಕ್ಷರಾಜನು ಆ ಮೂ ವರಿಗೂ ಸಹಾಯಕನಾಗಿರಲಿ” ಎಂದನು. ರಾಮನು ಹೇಳಿದ ಈ ಮಾತ ನ್ನು ಕೇಳಿ ಸಮಸ್ತವಾನರಸೈನ್ಯಕ್ಕೂ ಅಧಿರಾಜನಾದ ಸುಗ್ರೀವನು, ಅಲ್ಲಿದ್ದ ವಾನರರನ್ನು ಕರೆದು, ಆಗಲೇ ಪ್ರಯಾಣಹೊರಡುವಂತೆ ನಿಯಮಿಸಿದನು. ಆಗಲೇ ಅಲ್ಲಲ್ಲಿನ ಗುಹೆಗಳಲ್ಲಿಯೂ, ಪತತಿಖರಗಳಲ್ಲಿಯೂ ಅಡಗಿದ್ದ ಮ ಹಾವೀರವುಳ್ಳ ಸಮಸ್ಯವಾನರರೂ ಮೇಲೆ ಹಾರಿ ಯುದ್ಯೋತ್ಸಾಹದಿಂದ ಹೊರಟರು ರಾಮನೂಕೂಡ, ಸುಗ್ರೀವನಿಂದಲೂ, ಲಕ್ಷ್ಮಣನಿಂದಲೂ ಪ ರಸ್ಕರಿಸಲ್ಪಡುತ್ತ, ಆ ಸೈನ್ಯದೊಡನೆ ದಕ್ಷಿಣಾಭಿಮುಖವಾಗಿ ಹೊರಟನು. ಹೀಗೆ ಪ್ರಯಾಣಹೊರಟ ರಾಮನ ಸುತ್ತಲೂ ಕೊಬ್ಬಿದ ಆನೆಯ ಹಿಂಡಿ ನಂತೆ ಅನೇಕವಾನರಸೈನ್ಯವು ಮೂರುನೂರಾಗಿಯೂ, ಸಾವಿರಸಾವಿರವಾಗಿ ಯೂ, ಲಕ್ಷಲಕ್ಷವಾಗಿಯೂ, ಕೋಟೆಕೊಟಿಯಾಗಿಯೂ ಹೊರಟುಬಂದಿತು. ಮತ್ತೊಂದು ದೂಡ್ಡ ವಾನರಸೈನ್ಯವು ಅವನನ್ನು ಹಿಂಬಾಲಿಸಿಹೊರಟಿತು. ವೀರದಿಂದ ಕೊಬ್ಬಿದ ಆ ವಾನರರಾದರೋ ಮಹೋತ್ಸಾಹಗೊಂಡವರಾಗಿ ಒಮ್ಮೆ ಮೇಲೆ ನೆಗೆಯುವರು' ಒಮ್ಮೆ ಹಾರುವರು ! ಒಮ್ಮೆ ಗರ್ಜಿಸುವರು! ಆಗಾಗ ಸಿಂಹನಾದವನ್ನು ಮಾಡುವರು ' ಒಬ್ಬರಿಗೊಬ್ಬರು ಹರದಿಂದೋ ಡುವರು ! ದಾರಿಯಲ್ಲಿ ಅಲ್ಲಲ್ಲಿ ಸಿಕ್ಕಿದ ಹಣ್ಣುಗಳನ್ನು ಕಿತ್ತು ತಿನ್ನವರು.