ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೮ ಶ್ರೀಮದ್ರಾಮಾಯಣವು (ಸರ್ಗ ೪೯ ರಕ್ಕೆ ನಾನೇಕೆ ಕೈಕ್ಕಿದೆನು? ಛ' ನಾನೆಂತಹ ಅಪೂಜ್ಯನು? ನನ್ನ ಬದುಕ ನ್ನು ಸುಡಬೇಕು'ನನಗಾಗಿಯೇ ಅಲ್ಲವೇ ನನ್ನ ತಮ್ಮ ನಾದ ಲಕ್ಷಣನು ಹೀಗೆ ನೆಲದಲ್ಲಿ ಬಿದ್ದು, ಪ್ರಾಣವಿಲ್ಲದಂತೆ ಶರತಲ್ಪದಲ್ಲಿ ಮಲಗಿರುವನು” ಎಂದು ವಿಲಪಿಸುತ್ಯ, ಆಮೆಲೆ ಲಕ್ಷಣವಕಡೆಗೆ ನೋಡಿ, ವಾ ಲಕ್ಷಣಾ ? ನಾನು ಆಗಾಗ ದುಃಖಿತ ನಾದಕಾಲಗಳಲ್ಲೆಲ್ಲಾ, ನೀನು ನನ್ನನ್ನು ಸಮಾ ಧಾನಪಡಿಸುತಿದ್ದೆಯಲ್ಲವೆ ? ಈಗ ನೀನು ಈ ಅವಸ್ಥೆಯನ್ನು ಹೊಂದಿದ ಮೇಲೆ, ನಾನು ಎಷ್ಟೆಷ್ಟು ದುಃಖಿಸಿದರೂ, ನನ್ನೊಡನೆ ಮಾತಾಡುವುದ ಕ್ಕೂ ಶಕ್ತಿಯಿಲ್ಲದೆ ಬಿದ್ದಿರುವೆಯಲ್ಲಾ ' ಯಾವ ನೀನು ಈಗಿನ ಯುದ್ಧದಲ್ಲಿ ಅನೇಕರಾಕ್ಷಸರನ್ನು ಕೊಂದು ಕೆಡಹಿದೆಯೋ?, ಅಂತಹ ವೀರನಾದ ಸೀನು, ಆ ರಾಕ್ಷಸರನ್ನು ಕೆಡಹಿದ ಭೂಮಿಯಲ್ಲ, ಆದೇಶತ್ರುಗಳಿಂದ ಹತನಾಗಿ ಬಿಟ್ಟಿರುವೆಯಲ್ಲಾ ! ನಾನಿನ್ನೇನು ಹೇಳಲಿ ? ಈ ನಿನ್ನ ಅಂಗಾಂಗಗಳಲ್ಲಿ ಯ ರಕ್ತವು ಸುರಿಯುತ್ತಿರುವುದು ಸಾಂಗಗಳಲ್ಲಿಯ ಬಾಣಗಳು ನಾಟಿರುವುವು' ಶರತಲ್ಪದಲ್ಲಿ ಮಲಗಿ, ಅಸ್ತಂಗತನಾಗುವ ಸೂರನಂತೆ ಕಾ ಣುತ್ತಿರುವೆಯಲ್ಲಾ” ಎಂದು ರೋದಿಸುತಿದ್ದು, ಮನಸ್ಸಂಕಟ 'ನ್ನು ತಡೆ ಯಲಾರದೆ ತಿರುಗಿ ತನ್ನಲ್ಲಿ ತಾನು ಹಾ' ನಾನಿನ್ನೇನು ಮಾಡಲಿ? ಮರ್ಮ ಗಳಲ್ಲಿ ಬಾಣಗಳು ನಾಟಿರುವುದರಿಂದ, ಮಾತನ್ನಾಡುವುದಕ್ಕೂ ಇವರಿಗೆ ಶ ಕ್ರಿಯಿಲ್ಲ'ಇವನ ದೃಷ್ಟಿಯಿಂದಲೇ ಇವನ ಬಾಧೆ ಯ) ಸೂಚಿಸಲ್ಪಡುವ್ರದು' ದಿವ್ಯಕಾಂತಿವಿಶಿಷ್ಯನಾದ ಈ ಲಕ್ಷಣನು, ನಾನು ಕಾಡಿಗೆ ಬಂದಾಗಲೂ ನ ಇನ್ನು ಬಿಟ್ಟಿರಲಾರದೆ, ಹೇಗೆ ಹಿಂಬಾಲಿಸಿಬಂದನೋ, ಹಾಗೆಯೇ ನಾನೂ ಈಗ ಇವನು ಯಮನಬಳಿಗೆ ಹೋಗುವಾಗ, ಅವನನ್ನೆ ಹಿಂಬಾಲಿಸಿ ಹೋಗು ವೆನು ಈತನು ಯಾವಾಗಲೂ ಬಂಧುಜನಗಳಲ್ಲಿ ಪ್ರೀತಿಯನ್ನು ತೋರಿಸತಕ್ಕ ವನು ಯಾವಾಗಲೂ ನನ್ನನ್ನು ನಿಯಮದಿಂದ ಅನುಸರಿಸುತಿದ್ದವರು ಇಂ ತಹ ಸಾಧುಗುಣವುಳ್ಳ ಈ ತನು ನನ್ನ ಅಕ್ರಮದಿಂದಲ್ಲವೇ ಇಷ್ಟು ದುರ ವಸ್ಥೆಯನ್ನು ಹೊಂದಿರುವನು ವೀರನಾದ ಈ ಲಕ್ಷಣನು ತನಗೆ ಎಷ್ಟೆ ಕೋಪವುಂಟಾದಾಗಲೂ ನನ್ನೊಡನೆ ಪರುಷವಾಗಿಯಾಗಲಿ, ಅಪ್ರಿಯವಾ ಗಿಯಾಗಲಿ, ಮಾತಾಡಿದುದನ್ನು ನಾನು ಯಾವಾಗಲೂ ಕೇಳಿದುದಿಲ್ಲ. ಆ ಯ್ಯೋ ! ಇವನ ಗುಣಗಳೆಲ್ಲವೂ ಈಗ ನನ್ನ ನೆನಪಿಗೆ ಬರುತ್ತಿರುವುವಲ್ಲಾ!