ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೧ ಸರ್ಗ ೫೦.] | ಯುದ್ಧಕಾಂಡವು. ಅವನನ್ನೇ ಇಂದ್ರಜಿತ್ತೆಂದು ತಿಳಿದು, ಮಹಾವ್ಯಧೆಯಿಂದ ಕೂಡಿ ಬಿರುಗಾಳಿ ಗೆ ಸಿಕ್ಕಿದ ಮೇಫುಗಳಂತೆ, ನಾ ನಾಕಡೆಗಳಿಗೆ ಚದರುತಿದ್ದರು, ಇಲ್ಲಿಗೆ ಸಾ ಲ್ವತ್ತೊಂಭತ್ತನೆಯ ಸರ್ಗವು ( ನಿಭೀಷಣನು ರಾಮಲಕ್ಷ್ಮಣರ ಅವಸ್ಥೆಯನ್ನು ನೋಡಿ ಡಿ ದು ಖಿಸುತ್ತಿರಲು, ಸುಗ್ರಿವನು ಅವನನ್ನು ಸಮಾ। 4 ಧಾನಗೊಳಿಸಿದುದು, ಇಷ್ಟರಲ್ಲಿ ಗರುತ್ಮ೦ತನು ಬಂದು ರಾಮಲಕ್ಷಕರಿಂದ ನಾಗ ಪಾಶವನ್ನು ಬಿಡಿಸಿದುದು ಆ ದನ್ನು ನೋಡಿ ಸಮಸ್ತ ವಾನರರ ಸಂತೋಷ | {ದಿಂದ ಸಿಂಹನಾದಗಳನ್ನು ಮಾಡಿದುದು ಆಗ ಮಹಾತೇಜಸ್ವಿಯಾಗಿಯೂ, ಬಲಾಡ್ಯನಾಗಿಯೂ ಇರುವ ವಾ ನರರಾಜನಾದ ಸುಗ್ರೀವನು, ತನ್ನೊಡನಿದ್ದ ವಾನರರೆಲ್ಲರೂ ಹಾಗೆ ಆಕ ಸ್ಮಾತ್ತಾಗಿ ಪಲಾಯಿತರಾದುದನ್ನು ನೋಡಿ, ಅದಕ್ಕೆ ಕಾರಣವೇನೆಂದು ತಿಳಿಯದೆ, (ಆಹಾ' ಇದೇನು? ಪ್ರವಾಹದಲ್ಲಿ ಇದಿರುಗಾಳಿಗೆ ಸಿಕ್ಕಿದ ದೋ ಣಿಯಂತೆ, ನಮ್ಮ ವಾನರಸೇನೆಯೆಲ್ಲವೂ ಹೀಗೆ ವ್ಯಾಕುಲವಾಗಿರುವುದಕ್ಕೆ ಕಾರಣವೇನು ?” ಎಂದು ಕೇಳಿದನು ಆಗ ವಾಲಿಪುತ್ರನಾದ ಅಂಗದನು ಅವನನ್ನು ಕುರಿತು, 'ಎಲೆ ಆರನೆ' ಇದೊ' ಇಲ್ಲಿ ದಶರಥಪುತ್ರರಾದ, ಮಹಾತ್ಮರಾದ ರಾಮಲಕ್ಷ್ಮಣರಿಬ್ಬರೂ, ಸಾವಯವಗಳಲ್ಲಿಯೂ, ಬಾಣವು ನಾಟಿರುವುದರಿಂದ, ರಕ್ತದಿಂದ ತೊಯ್ದ ಮೈಯುಳ್ಳವರಾಗಿ ಶರತಲ್ಪದಲ್ಲಿ ಮಲಗಿರುವುದನ್ನು ನೀನು ನೋಡಲಿಲ್ಲವೆ? ನಮ್ಮ ವಾನರ ಸೇನೆಗೆ ಭಯವುಂಟಾಗುವುದಕ್ಕೆ ಇದಲ್ಲದೆ ಬೇರೆ ಕಾರಣವಿಲ್ಲ” ಎಂದನು ಆಗ ವಾನರರಾಜನಾದ ಸುಗ್ರೀವನು ತನ್ನ ಪ್ರಿಯಪುತ್ರನಾದ ಆಂಗದನ ನ್ನು ನೋಡಿ, ವತ್ರನೆ ' ಹಾಗಲ್ಲ ! ಹೀಗೆ ರಾಮಲಕ್ಷ್ಮಣರು ಮಲಗಿರುವು ದುಮಾತ್ರವೇ ಇದಕ್ಕೆ ಕಾರಣವಲ್ಲ. ಇದೂ ಒಂದು ಕಾರಣವಾಗಿದ್ದರೂ ಇದಕ್ಕೆ ಬೇರೆ ಯಾವುದೋ ಒಂದು ಪ್ರಧಾನಕಾರಣವಿರಬೇಕು ! ಏಕೆಂ ದರೆ, ಈ ವಾನರರ ಮುಖದಲ್ಲಿ ದುಃಖಚಿಹ್ನಗಳೊಡನೆ ಬಹಳವಾದ ಭಯ ಚಿಹ್ನೆಗಳೂ ಕಾಣುತ್ತಿರುವುವು, ಇವರೆಲ್ಲರೂ ಮಿತಿಮೀರಿದ ಭಯದಿಂದ ಕ