ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೪ ಶ್ರೀಮದ್ರಾಮಾಯಣವು [ಸರ್ಗ, ೫೦, ನ್ನು ಅವನ ಪರಿವಾರಗಳೊಡನೆ ಕೊಲ್ಲುವುದರಲ್ಲಿ ಸಂದೇಹವಿಲ್ಲ” ಎಂದನು. ಹೀಗೆ ಸುಗ್ರೀವನು, ವಿಭೀಷಣನಿಗೆ ಸಮಾಧಾನವಾಕ್ಯವನ್ನು ಹೇಳಿದಮೇಲೆ ತನ್ನ ಪಕ್ಕದಲ್ಲಿದ್ದ ತನ್ನ ಮಾವನಾದ ಸುಷೇಣನನ್ನು ನೋಡಿ 1 ಎಲೆ ಪೂ ಜ್ಯನೆ' ನೀನು ಇಲ್ಲಿಯೆ ನಿರೀಕ್ಷಿಸುತಿದ್ದು, ಪರಂತಪರಾದ ಈ ಸಹೋದರರಿ ಬ್ಬರೂ ಮೂರ್ಛತಿಳಿದೆದ್ದಮೇಲೆ, ಶೂರರಾದ ಕೆಲವು ವಾನರರೊಡಗೂಡಿ ಇವರನ್ನೂ ಕರೆದುಕೊಂಡು ಕಿಕ್ಕಿಂಧೆಗೆ ಹೋಗು' ನಾನಾದರೋ ಇಲ್ಲಿ ರಾವಣನನ್ನೂ , ಅವನ ಪುತ್ರರನ್ನೂ, ಬಂಧುಗಳನ್ನೂ ಯುದ್ಧದಲ್ಲಿ ಕೊಂ ದು, ದೇವೇಂದ್ರನು ತನ್ನ ಕೈತಪ್ಪಿಹೋದ ರಾಜ್ಯಲಕ್ಷ್ಮಿ ಯನ್ನು ತಿರುಗಿ ಕೈಸೇರಿಸಿಕೊಂಡಂತೆ ಸೀತೆಯನ್ನು ಕರೆತರುವೆನು” ಎಂದನು ಆಗ ಸುಗ್ರಿ ವನ ಮಾತನ್ನು ಕೇಳಿ ಸುಷೇಣನು ಎಲೆ ರಾಜನೆ' ಸೂತ್ವದಲ್ಲಿ ದೇವಾಸುರ ರಿಗೆ ಬಹಳ ಭಯಂಕರವಾಗಿ ನಡೆದ ಮಹಾಯುದ್ಧವನ್ನು ನಾನು ಬಲ್ಲೆನು. ಆಗ ಬಾಣಪ್ರಯೋಗದಲ್ಲಿ ಕುಶಲರಾಗಿಯೂ, ಆಯುಧವಿದ್ಯೆಯನ್ನು ಚೆ ಸ್ನಾಗಿ ಬಲ್ಲವರಾಗಿಯೂ ಇದ್ದ ಅಸುರರು, ಆಗಾಗ ದೇವತೆಗಳನ್ನು ತಮ್ಮ ಮಾಯೆಯಿಂದ ಮರುಳುಮಾಡಿ ಪ್ರಹರಿಸಿದರು ಆಗ ದೇವತೆಗಳಲ್ಲಿ ಕೆಲವ ರು ಬಾಇಪೀಡಿತರಾಗಿಯೂ, ಕೆಲವರು ಮೂರ್ಛಿತರಾಗಿಯೂ, ಕೆಲವರು ಮೃ ತರಾಗಿಯೂ, ಬಿದ್ದಿರುವುದನ್ನು ನೋಡಿ, ಅವರ ಗುರುವಾದ ಬೃಹಸ್ಪತಾ ಚಾರನು, ಮಂತ್ರಭೂಯಿಷ್ಟಗಳಾದ ಮೈತಸಂಜೀವಿನಿ ಮೊದಲಾದ ವಿಗ್ಯ ಗಳಿಂದ, ಅವರಿಗೆ ಚಿಕಿತ್ಸೆಗಳನ್ನು ಮಾಡಿ ಬದುಕಿಸಿರುವನು ಆದುದರಿಂದ ಈಗಲೂ ಆ ಮೂಲಿಕೆಗಳನ್ನು ತರುವುದಕ್ಕಾಗಿ ನಮ್ಮಲ್ಲಿ ಸಮರ್ಥರಾ ದ ಪನಸ ಸಂಪಾತಿಗಳೇ ಮೊದಲಾದ ಕೆಲವು ವಾನರರು, ಶೀಘ್ರದಲ್ಲಿಯೇ ಕೀರ ಸಮುದ್ರಕ್ಕೆ ಹೋಗಲಿ' ಈ ವಾನರರುಮಾತ್ರವೇ ಪ್ರತಗಳಲ್ಲಿರುವ ಮಹೌಷಧಿಗಳೆಲ್ಲವನ್ನೂ ಚೆನ್ನಾಗಿ ಬಲ್ಲರು' ದೇವತೆಗಳಿಂದ ನಿರ್ಮಿತವಾದ ಸಂಜೀವಕರಣಿ, ಮತ್ತು ವಿಶಲ್ಯಕರಣಿಗಳೆಂಬ ಆ ದಿವ್ಯಮೂಲಿಕೆಗಳನ್ನು ತರಿಸುವುದಕ್ಕಾಗಿ ಇವರನ್ನೇ ಕಳುಹಿಸು! ಸಮುದ್ರಗಳಲ್ಲಿ ಮೇಲೆನಿಸಿ ಕೊಂಡ ಕೀರಸ ಮುದ್ರದಲ್ಲಿ, ಮೊದಲು ದೇವತೆಗಳು ಅಮೃತಮಧ ನಮಾಡಿದ ಸ್ಥಳದಲ್ಲಿ, ಚಂದ್ರವೆಂದೂ, ದ್ರೋಣವೆಂದೂ ಎರಡು ಪದ್ಯ ತಗಳುಂಟು. ಆ ಪಕ್ವತಗಳಲ್ಲಿಯೇ ನಾನು ಹೇಳಿದ ದಿವ್ಯಷಧಿಗಳೆ ರಡ