ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೯೨ ಶ್ರೀಮದ್ರಾಮಾಯಣವು [ಸರ್ಗ, ೫೧. ದೂ ನಿನ್ನ ಪರಾಕ್ರಮಕ್ಕೆ ಇದಿರಲ್ಲ ನಿನ್ನ ವೀಠ್ಯವೋ ಬಹಳ ಭಯಂಕರವಾ ದುದು ಆದುದರಿಂದ ಈಗಲೇ ನೀನು ದೊಡ್ಡ ರಾಕ್ಷಸಸೈನ್ಯವನ್ನು ಸೇರಿಸಿ ಕೊಂಡು ಹೊರಡು'” ಎಂದನು ರಾಕ್ಷಸಯೋಧರ ಬಲಾಬಲಗಳನ್ನು ಚೆನ್ನಾಗಿ ಬಲ್ಲವನಾದ ರಾವಣನು ಹೀಗೆ ಆಜ್ಞೆ ಮಾಡಿದೊಡನೆ, ಧೂಮಾ ಕನು ಬಹಳ ಸಂತೋಷಗೊಂಡವನಾಗಿ, ಆತನಿಗೆ ನಮಸ್ಕರಿಸಿ ರಾಜಭವನ ದಿಂದ ಹೊರಟನು, ಹೀಗೆ ಥಮಾಕ್ಷನು ರಾಜದ್ವಾರದಿಂದ ಹೊರಟು, ಅಲ್ಲಿದ್ದ ಬಲಾಧ್ಯಕ್ಷನನ್ನು ಕುರಿತು, ಎಲೆ ಸೇನಾ ಪಹೀ ? ನಾನು ಯು ವ್ಯಕ್ಕಾಗಿ ಹೊರಡುತ್ತಿರುವೆನು, ನನ್ನ ಸಮಸ್ತ ಸೈನ್ಯಗಳನ್ನೂ ಕರೆತುಸು ! ಆಲಸ್ಯವಿಲ್ಲದೆ ತ್ವರೆಮಾಡು?” ಎಂದನು ರಾಜಾಜ್ಞೆಯನ್ನನುಸರಿಸಿ ಧೂ ಮಾಕನು ಹೇಳಿದ ಈ ಮಾತನ್ನು ಕೇಳಿದೊಡನೆ ಆ ಬಲಾಧ್ಯಕ್ಷನು ತನ್ನ ಕೈಕೆಳಗಿನ ಸಮಸ್ತ ಸೇನೆಯನ್ನೂ ಸಿದ್ಧಪಡಿಸಿದನು ಬಲಾಡ್ಯರಾದ ಆನೇ ಕ ಫೋರರಾಕ್ಷಸಯೋಧರು ತಮ್ಮ ತಮ್ಮ ಶರಸೂಚ 'ಗಳಾದ ವೀರ ಫುಂಟೆಗಳನ್ನು ನಡುವಿಗೆ ಕಟ್ಟಿಕೊಂಡು, ಶೂಲಮುರಗಳೇ ಮೊದಲಾದ ವಿವಿಧಾಯುಧಗಳನ್ನೂ ಕೈಯಲ್ಲಿ ಹಿಡಿದವರಾಗಿ, ಉತ್ಸಾಹದಿಂದ ಸಿಂಹ ನಾದಮಾಡುತ್ಯ, ಧೂಮ್ರಾಕ್ಷನನ್ನು ಪರಿವೇಷ್ಟಿಸಿ ಸಿದ್ಧರಾಗಿ ನಿಂತರು. ಆ ರಾಕ್ಷಸಯೋಥರೆಲ್ಲರೂ, ಅವರವರ ಯುದ್ಧಾಭ್ಯಾಸಕ್ಕೆ ತಕ್ಕಂತೆ, ಕೆಲ ವರು ಗದೆಗಳನ್ನೂ , ಕೆಲವರು ಪಟ್ಟಸಗಳನ್ನೂ, ಕೆಲವರು ಕಬ್ಬಿಣದ ಗುಬಗೆ ಗಳನ್ನೂ, ಕೆಲವರು ಮುಸಲಗಳನ್ನೂ, ಕೆಲವರು ಪರಿಫುಗಳನ್ನೂ, ಕೆಲ ವರು ಭಿಂಡಿವಾಲಗಳನ್ನೂ , ಕೆಲವರು ಭಲ್ಯಗಳನ್ನೂ, ಕೆಲವರು ಪ್ರಾಸಗ ಳನ್ನೂ, ಕೆಲವರು ಗಂಡುಗೊಡಲಿಗಳನ್ನೂ ಹಿಡಿದು, ಮೇಘಗಳಂತೆ ಗರ್ಜಿ ಸುತ್ತ ನಾಲ್ಕು ಕಡೆಗಳಿಂದಲೂ ಹೊರಟರು. ಬೇರೆ ಕೆಲವು ರಾಕ್ಷಸವೀರರು, ಯುದ್ಧಕವಚಗಳನ್ನು ಧರಿಸಿ, ಧ್ವಜಾಲಂಕೃತಗಳಾಗಿಯೂ, ಸುವರ್ಣಗವಾ ಕ್ಷಗಳಿಂದ ಶೋಭಿತಗಳಾಗಿಯೂ, ವಿಚಿತ್ರಮುಖಗಳುಳ್ಳ ಕತ್ತೆಗಳಮೇಲೆ ಹೂಡಿದುವುಗಳಾಗಿಯೂ ಇರುವ ಉತ್ತಮರಧಗಳನ್ನೇರಿ ಹೊರಟರು ಕೆಲ ವರು ಮದದಾನೆಗಳನ್ನೂ, ಕೆಲವರು ಉತ್ತಮಾಶ್ವಗಳನ್ನೂ ಏರಿ ಹೊರ ಟರು. ತೀವಧ್ವನಿಯುಳ್ಳ ಧಮಾಕ್ಷನು ತೋಳಗಳಂತೆಯೂ, ಸಿಂಹ ಗಳಂತೆಯೂ ಮುಖವುಳ್ಳ ಕತ್ತೆಗಳಿಂದ ಕೂಡಿದ ಒಂದು ಸುವರ್ಣ