ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೧ ) ಯುದ್ದ ಕಂಡವು. ೨೩೯೩ ರಥವನ್ನೇರಿದನು. ಹೀಗೆ ಮಹಾವೀರಶಾಲಿಯಾದ ಆ ಧೂಮಾಕೆ ನು, ದೊಡ್ಡ ಸಿಂಹನಾದಧ್ವನಿಯೊಡನೆ ಕತ್ತೆಗಳಿಂದ ಕೂಡಿದ ತನ್ನ ಉತ್ತಮರಧವನ್ನೇರಿ, ಅನೇಕರಾಕ್ಷಸಯೋಧರಿಂದ ಪರಿವೃತನಾಗಿ, ಮ ಹೊತ್ಸಾಹದಿಂದ ನಗುತ್ತ, ವಾನರಯೂಥಪತಿಯಾದ ಹನುಮಂತನು ತಡೆದುನಿಂತಿದ್ದ ಪತ್ನಿ ಮದ್ಯಾರದ ಕಡೆಗೆ ಬಂದನು ಭಯಂಕರಪರಾ ಕ್ರಮವುಳ್ಳ ಆ ಘೋರರಾಕ್ಷಸನು ಹೀಗೆ ಯುದ್ಯೋದ್ಯುಕ್ತನಾಗಿ ಬರುತ್ತಿ ರುವಾಗಲೇ, ಅವಸಿಗಡೈಲಾಗಿ ಅನೇಕದುರ್ನಿಮಿತ್ತಗಳು ಕಾಣಬಂದುವು. ಅವಶಕುನಸೂಚಕಗಳಾದ ಪಕ್ಷಿಗಳು ಅಡ್ಡಬರುತಿದ್ದುವು ಅವನ ರಥಶಿಖ ರದಮೇಲೆ ಮಹಾಭಯಂಕರವಾದ ಒಂದು ದೊಡ ರಣಹದು ಬಂದು ಬಿ ದ್ವಿತು ಅವನ ಧ್ವಜಾಗ್ರದಲ್ಲಿ ಶವಭಕ್ಷಕಗಳಾದ ಹಕ್ಕಿಗಳು ಸಾಲಾಗಿ ಬಂ ದು ಸೇರಿದುವು. ರಕೃಹಗ್ಗವಾದ ಮತ್ತು ಬಿಳುಪಾದ ಒಂದು ದೊಡ್ಡ ಮುಂಡವು, ವಿಕೃತಧ್ವನಿಯಿಂದ ರೋದನಮಾಡುತ್ಯ,ಧೂಮಾಕ್ಷನ ಮುಂ ಭಾಗದಲ್ಲಿ, ಅಂತರಿಕ್ಷದಿಂದ ಕೆಳಗೆ ಬಿದ್ದಿತು.ಮೇಘದಿಂದ ರಕ್ತವರ್ಷವು ಸು ರಿಯಿತು ಭೂಮಿ ಯು ಗಡಗಡನೆ ನಡುಗಿತು, ಸಿಡಿಲು ಹೊಡೆದಂತೆ ಮಹಾ ಧ್ವನಿಯಿಂದ ಇದಿರುಗಾಳಿಯು ಬೀಸುತಿತ್ತು. ಸಮಸ್ತ ದಿಕ್ಕುಗಳಲ್ಲಿಯೂ ಕತ್ತಲೆಕವಿದು ಸ್ವಲ್ಪ ಮಾತ್ರವೂ ಪ್ರಕಾಶವಿಲ್ಲದಂತಾಯಿತು. ರಾಕ್ಷಸ ರಿಗೆ ಪ್ರಾಣನಾಶಸೂಚಕಗಳಾಗಿಯೂ, ಮಹಾಘೋರಗಳಾಗಿಯೂ ಇ ರುವ ಈ ಉತ್ಪಾತಗಳನ್ನು ನೋಡಿ, ಧೂಮ್ರಾಕ್ಷನ ಮನಸ್ಸಿನಲ್ಲಿ ಮಹತ್ಯಾ ದ ಭಯವೂ, ಚಿಂತೆಯ ಹುಟ್ಟಿತು, ಧೂಮಾಕನಿಗೆ ಮುಂದಾಗಿ ಬರುತಿ " ರಾಕ್ಷಸರೆಲ್ಲರೂ ಭಯದಿಂದ ಹಿಂದುಮುಂದುತೋರದೆ ಸ್ತಬ್ಬರಾದ ರು ಇಷ್ಟಾದರೂ ಬಲಾಢನಾದ ಧಮಾಕ್ಷನು, ಆ ಉತ್ಪಾತಗಳನ್ನು ಲಕ್ಷಮಾಡದೆ, ಧೈಯ್ಯದಿಂದ ಮನಸ್ಸನ್ನು ಸ್ಥಿರಪಡಿಸಿಕೊಂಡು, ಅನೇಕರಾ ಕಸಸೈನಿಕರಿಂದ ಪರಿವೃತನಾಗಿ, ಯುದ್ರೋತ್ಸಾಹದಿಂದ ಪಟ್ಟಣವನ್ನು ಬಿಟ್ಟು ಹೊರಟುಬಂದು, ಶ್ರೀರಾಮನ ಭುಜಬಲದಿಂದ ರಚಿತವಾಗಿಯೂ. ಕೇವಲ ಕಪಿಮಯವಾಗಿಯೂ, ಮಹಾಸಮುದ್ರದಂತೆ ಅಪಾರವಾಗಿಯೂ ಇದ್ದ *ರಾಮನ ಸೈನ್ಯವನ್ನು ಕಂಡನು. ಇಲ್ಲಿಗೆ ಐವತ್ತೊಂದನೆಯ ಸರ್ಗವು.

  • ರಾಮಲಕ್ಷ್ಮಣರು ನಾಗಾಸ್ತ್ರಬದ್ಧರಾಗಿ ಮಲಗಿದ್ದುದು, ಪಾಡ್ಯದಿನದ ರಾತ್ರಿ

151