ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨hಳ೪ ಶ್ರೀಮದ್ರಾಮಾಯಣವು [ಸರ್ಗ ೫೨. -w+ ಧೂಮ್ರಾಕ್ಷನು ಹನುಮಂತನಿಂದ ಹತನಾದುದು ww ಇತ್ತಲಾಗಿ ವಾನರರೂ ಯುದ್ವಾಕಾಂಕ್ಷೆಯಿಂದಲೇ ಕಾದಿದ್ದುದ ರಿಂದ, ತಮಗಿದಿಗಾಗಿ ಧೂಮ್ರಾಕ್ಷನು ಯುದ್ಧ ಸನ್ನದ್ಧನಾಗಿ ಬರುತ್ತಿರುವುದ ನ್ನು ಕಂಡೊಡನೆ, ಪರಮಸಂತೋಷದಿಂದ ಸಿಂಹನಾದಗಳನ್ನು ಮಾಡಿದರು. ಒಬ್ಬೊಬ್ಬರೂ ವೃಕ್ಷಗಳನ್ನೆತ್ತಿಕೊಂಡು ಹೊರಟರು. ರಾಕ್ಷಸರೂ ಶೂಲ ಮುದ್ಧರಾದ್ಯಾಯುಧಗಳೊಡನೆ ಮುಂದೆ ಬಂದರು ಈ ಎರಡು ಪಕ್ಷದವ ರೂ ಒಬ್ಬರನ್ನೊಬ್ಬರು ಬಹಳ ಪ್ರಬಲವಾಗಿ ಹೊಡೆದಾಡುವುದಕ್ಕೆ ತೊಡ ಗಿದರು, ಇಬ್ಬರಿಗೂ ಬಹಳ ಭಯಂಕರವಾದ ತುಮುಲಯುದ್ಧವು ನಡೆ ಯಿತು ಫೋರರಾಕ್ಷಸರೆಲ್ಲರೂ ಒಂದಾಗಿ ಸೇರಿ ಬಂದು, ಮಹಾಭಯಂ ಕರಗಳಾದ ಪರಿಫುಗಳಿಂದಲೂ, ತ್ರಿಶೂಲಗಳಿಂದಲೂ, ಇನ್ನೂ ಬಗೆಬಗೆಯ ಅಯುಧಗಳಿಂದಲೂ, ನಾನಾಕಡೆಯಲ್ಲಿ ಯ ವಾನರನ್ನು ಕತ್ತರಿಸು ಇಬಂದರು, ಇತ್ತಲಾಗಿ ವಾನರರೂ ರಾಕ್ಷಸರನ್ನು ವೃಕ್ಷಗಳಿಂದ ಬಡಿ ದು ಕೊಲ್ಲುತಿದ್ದರು ಈ ಕಪಿಗಳ ಹಾವಳಿಯನ್ನು ನೋಡಿ, ರಾಕ್ಷಸರಿಗೆ ಮೇಲೆಮೇಲೆ ಕೋಪವು ಹೆಚ್ಚಿ ತು ಅವರೆಲ್ಲರೂ, ಅತಿಭಯಂಕರಗಳಾಗಿ ಯ, ಕಾಲಾಗ್ನಿ ಯಂತೆ ದೇದೀಪ್ಯಮಾನಗಳಾಗಿಯೂ, ಕಂಕಪತ್ರವುಳ್ಳವು ಗಳಾಗಿಯೂ ಇರುವ ತೀಕ್ಷಗಳಾದ ಋಜುಬಾಣಗಳಿಂದ ವಾನರರನ್ನು ಪ್ರಹರಿಸುತಿದ್ದರು ಹೀಗೆ ರಾಕ್ಷಸರು ದೊಡ್ಡದೊಡ್ಡ ಗದೆಗಳನ್ನೂ , ಪಟ್ಟ ಸಗಳನ್ನೂ, ಕೂಟಮುದ್ಧರಾದ್ಯಾಯುಧಗಳನ್ನೂ ಹಿಡಿದು, ಕಂಡಕಂಡ ಕಡೆಯಲ್ಲಿ ವಾನರರನ್ನು ಧ್ವಂಸಮಾಡುತ್ತಿರಲು, ಬಲಾಡ್ಯರಾದ ವಾನರೆಲ್ಲ ರೂ ರೋಷೋತ್ಸಾಹಗಳಿಂದುಟ್ಟುತ್ತ, ಸ್ವಲ್ಪಮಾತ್ರವೂ ಹಿಂಜರಿಯ ದೆ ಹೋರಾಡಿದರು ಶೂಲಮುದ್ದರಾಧ್ಯಾಯುಧಗಳಿಂದ ತಾವು ಗಾಯಹೊಂದಿದ ರೋಷದಿಂದ, ಮರಗಳನ್ನೂ, ಶಿಲೆಗಳನ್ನೂ ಕೈಗೆತ್ತಿ ಕೊಂಡರು, ಆ ವಾನರವೀರರೆಲ್ಲರೂ, ಬಹಳ ಕೂರಧ್ವನಿಯಿಂದಾರ್ಭಟಿಸಿ ಸಿಂಹನಾದಮಾಡುತ್ತಮ್ಮ ತಮ್ಮ ಹೆಸರುಗಳನ್ನು ವೀರವಾದದಿಂದುಗಡಿ ಯೆಂದೂ, ಮರುದಿನದ ಎಂದರೆ ಬಿದಿಗೆಯ ಪ್ರಾತಃಕಾಲದಲ್ಲಿ ಧೂಮ್ರಾಕ್ಷನ ಯುದ್ಧ ಪ್ರಯಾಣವೆಂದೂ ತಿಳಿಯಬೇಕು.