ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೬ ಶ್ರೀಮದ್ರಾಮಾಯಣವು (ಸರ್ಗ, ೫೨ ದನ್ನು ಕಂಡು, ಅವರಿಗಿಂತಲೂ, ಮಹಾವೇಗವುಳ್ಳ ಕೆಲವು ವಾನರರು, ಮುಂದೆ ನುಗ್ಗಿ ಅವರನ್ನು ತಮ್ಮ ಮುಷಿಗಳಿಂದ ಹೊಡೆದು, ಕಾಲುಗ ಳಿಂದೊದೆದು, ಹಲ್ಲುಗಳಿಂದ ಸಿಗಿದು, ವೃಕ್ಷಗಳಿಂದ ಬಡಿದು ಕೊಲ್ಲುತಿದ್ದರು ಈ ವಾನರರ ಪ್ರಹಾರವನ್ನು ತಡೆಯಲಾರದೆ ಅಲ್ಲಿದ್ದ ರಾಕ್ಷಸರೆಲ್ಲರೂ ಭ ಯದಿಂದ ಹಿಂತಿರುಗಿ ಓಡಿಹೋಗುವುದಕ್ಕೆ ತೊಡಗಿದರು ಇಷ್ಟರಲ್ಲಿ ಸೇ ನಾಪತಿ ಯಾದ ಧೂಮ್ರಾಕ್ಷನು, ಹೀಗೆ ತನ್ನ ಕಡೆಯ ರಾಕ್ಷಸರೆಲ್ಲರೂ ಭ ಯದಿಂದ ಪಲಾಯನಮಾಡುವುದನ್ನು ನೋಡಿ, ಈ ವಾನರರ ಕಾಠ್ಯಕ್ಕಾಗಿ ಕೋಪಗೊಂಡು, ಯುದ್ರೋ ತ್ಸಾಹದಿಂದ ಕೊಬ್ಬಿದ ಆ ವಾನರರನ್ನು ತಾನೇ ಇದಿರಿಸಿ ಯುದ್ಧವನ್ನು ತೊಡಗಿದನು ಇವನ ಕಡೆಯ ಕೆಲವು ರಾಕ್ಷಸ ರು, ಅಲ್ಲಲ್ಲಿ ಕೆಲವು ವಾನರರನ್ನು ಪ್ರಾಸಗಳಿಂದ ಪ್ರಹರಿಸಿ, ಅವರ ಸಾಂಗ ಗಳಲ್ಲಿ ಯ ರಕ್ತವು ಸೋರುವಂತೆ ಗಾಯಪಡಿಸಿ'ರರು ಕೆಲವರನ್ನು ಮು ದರಗಳಿಂದ ಹೊಡೆದು ನೆಲಕ್ಕೆ ಕೆಡಹಿದರು ಕೆಲವರನ್ನು ಪುಷಗಳಿಂದ ಲೂ, ಭಿಂಡಿವಾಲಗಳಿಂದಲೂ ಭೇದಿಸಿ ತುಂಡುಮಾಡಿದರು, ಕಲವರನ್ನು ಪಟ್ಟಸಗಳಿಂದ ತಿವಿದುಕೊಂದರು ಕೆಲವರನ್ನು ಶೂಲಗ ತಿಂದಿರಿದು ಆ ವರ ದೇಹದಲ್ಲಿ ರಕ್ತಸ್ರಾವವನ್ನುಂಟುಮಾಡಿದರು ಈ ರಾಕ್ಷಸರ ಪ್ರ ಹಾರವನ್ನು ತಡೆಯಲಾರದೆ, ಕೆಲವು ವಾನರರು ಭಯದಿಂದ ರಣರಂಗವನ್ನು ಬಿಟ್ಟು ಪಲಾಯನ ಮಾಡಿದರು ಹೀಗೆ ರಾಕ್ಷಸರ ಪ್ರಹಾರಕ್ಕೆ ಸಿಕ್ಕಿದ ವಾನರರಲ್ಲಿ, ಎದೆಸೀಳಿ ಸತ್ತವರು ಕೆಲವರು ಪಕ್ಕದ ಕರುಳುಕಿತ್ತು ಸತ್ತ ವರು ಕೆಲವರು ತ್ರಿಶೂಲಗಳಿಂದ ತಿವಿಯಲ್ಪಟ್ಟು, ಕಿತ್ತ ನರಗಳೊಡನೆ ಸತ್ತುಬಿದ್ದವರು ಕೆಲವರು ಹೀಗೆ ವಾನರರಾಕ್ಷಸರಿಗೆ ನಡೆದ ಆ ದೊಡ್ಡ ತುಮುಲಯುದ್ಧವು ಅತ್ಯಂತಭಯಂಕರವಾಯಿತು. ರಣರಂಗದ ಸಮರ ಭಾಗವೂ ಶಸ ಪ್ರಹಾರಶಬ್ದದಿಂದಲೇ ತುಂಬಿಹೋಯಿತು, ಯಾವಕಡೆ ಯನ್ನು ನೋಡಿದರೂ, ತಿಲೆಗಳೂ, ವೃಕ್ಷಗಳೂ, ದಟ್ಟವಾಗಿ ತುಂಬಿದ್ದು ವು ಧನುಹಂಕಾರಗಳೆಂಬ ತಂತಿಯ ವಾದ್ಯಗಳಿಂದ, ಗದ್ಯದಸ್ವರಗ. ಳೆಂಬ ತಾಳಗಳಿಂದಲೂ, ಕುಗ್ಗಿದ ದೀವಧ್ವನಿಯೆಂಬ ಸಂಗೀತದಿಂದಲೂ, ಆ ರಣರಂಗವು, ಸಂಗೀತಶಾಲೆಯೆಂತೆ ಕಾಣಿಸುತಿತ್ತು ಇಷ್ಟರಲ್ಲಿ ಧೂ ಮಾಕ್ಷನು, ವೀಠ್ಯದ ಕೊಬ್ಬಿನಿಂದ ನಗುತ್ತ, ರಣಾಗ್ರದಲ್ಲಿ ಧನುರ್ಧಾರಿಯಾ