ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೯೮ ಶ್ರೀಮದ್ರಾಮಾಯಣವು (ಸರ್ಗ, ೫೩, ದೊಡ್ಡಗದೆಯಿಂದ ಪ್ರಹರಿಸಲ್ಪಟ್ಟರೂ, ವಾಯುವಿನಂತೆ ಮಹಾವೇಗವುಳ್ಳ ಹನುಮಂತನು, ಸ್ವಲ್ಪ ಮಾತ್ರವೂ ಆ ಗದಾಪ್ರಹಾರವನ್ನು ಲಕ್ಷರಾಡದೆ, ತಾನು ಹೊತ್ತು ತಂದ ಪ್ರತಶಿಖರವನ್ನು ಭೂ ಮಾಕನ ನಡುನೆತ್ತಿಗೆ ಸರಿ ಯಾಗಿ ಗುರಿಯಿಟ್ಟು ಬೀಸಿದನು. ಈ ಪದ್ವತಶಿಖರವು ಮೇಲೆ ಬಿದ್ದೊಡನೆ ಧೂಮಾಕನ ಸಮಸ್ವಾವಯವಗಳೂ ಭಿನ್ನ ಭಿನ್ನಗಳಾಗಲು, ಆ ರಾಕ್ಷಸ ನ ವಜ್ರಾಯುಧದಿಂದ ಚೂರ್ಣವಾದ ಪದ್ವ ತದಂತೆ ಕೆಳಗೆ ಬಿದ್ದನು. ಈ ಧೂಮಾಕನು ಹತನಾಗಿ ಬಿದ್ದುದನ್ನು ನೋಡಿ, ಅಲ್ಲಲ್ಲಿ ಸತ್ತುಳಿದ ಕೆಲವು ರಾಕ್ಷಸರು, ತಮ್ಮ ಮೇಲೆ ಬೆನ್ನಟ್ಟಿ ಬಂದು ಹೊಡೆಯುತ್ತಿರುವ ವಾನರರ ಪ್ರಹಾರವನ್ನು ಸಹಿಸಲಾರದೆ, ಭಯದಿಂದ ಹಿಂತಿರುಗಿ ಲಂಕೆಗೆ ಓಡಿಹೋ ದರು ಇತ್ತಲಾಗಿ ಮಹಾತ್ಮನಾದ ವಾಯುಕುಮಾರನಾದರೋ, ತನಗೆ ಪ್ರಬಲವೈರಿಯಾದ ಆ ಧೂಮ್ರಾಕ್ಷನನ್ನು ಕೊಂದು ರಣರಂಗವೆಲ್ಲವನ್ನೂ ರಕ್ತಪ್ರವಾಹಗಳಿಂದ ತುಂಬಿ, ಯುದ್ಧಶ್ರಮದಿಂದ ಬಳಲಿದವನಾಗಿ ತನ್ನ ಕಡೆಯ ಸಮಸ್ಯವಾನರರಿಂದಲೂ ಉಪಚರಿಸಲ್ಪಡುತ್ತ ಸಂತೋಷದಿಂದಿ ಹೈನು, ಇಲ್ಲಿಗೆ ಐವತ್ತೆರಡನೆಯ ಸರ್ಗವು (ಧೂಮ್ರಾಕ್ಷನ ವಧವನ್ನು ಕೇಳಿ ರಾವಣನು ವಜ್ರದಂ ) ವ್ಯವನ್ನು ಕಳುಹಿಸಿದುದು ಅಂಗದನು ವಜ ( ದಂಷ ನ ಸೇನೆಯನ್ನು ನಾಶಮಾಡಿದುದು ) ಅತ್ತಲಾಗಿ ರಾಕ್ಷಸೇಶ್ವರನಾದ ರಾವಣನು ಧೂಮ್ರಾಕ್ಷನು ಹತನಾ ದನೆಂಬ ಸುದ್ದಿಯನ್ನು ಕೇಳಿ ದುಃಖಗೊಂಡು, ಹಾವಿನಂತೆ ನಿಟ್ಟುಸಿರುಬಿಡು ತ್ಯ, ಅತ್ಯಾಕ್ರೋಶವನ್ನು ಹೊಂದಿದನು ಈಕೋಪಾವೇಶದಿಂದ ರಾವಣನು ಬಹಳವಾಗಿ ಕಲಗಿದ ಮನಸ್ಸುಳ್ಳವನಾಗಿ, ಬಿಸಿಯಾಗಿ ನಿಟ್ಟುಸಿರನ್ನು ಬಿಡು ತೃ, ಶೂರನಾಗಿಯೂ, ಬಲಾಢವಾಗಿಯೂ ಇದ್ದ ವಜ್ರದಂಷ್ಯನೆಂಬ ರಾ ಕ್ಷಸನನ್ನು ಕರೆದು “ಎಲೈ ರಾಕ್ಷಸವೀರನೇ! ಈಗಲೇ ನೀನು ಇಲ್ಲಿಂದ ಹೊರ ಡು! ನಿನ್ನ ಸಹಾಯಕ್ಕಾಗಿ ದೊಡ್ಡ ರಾಕ್ಷಸಸೇನೆಯನ್ನೂ ಸಂಗಡಕರೆದು ಕೊಂಡು ಹೋಗು' ಇಲ್ಲಿಂದ ಹೋಗಿ ದಶರಥಕುಮಾರನಾದ ರಾಮನನ್ನೂ, ಸುಗ್ರೀವನನ್ನೂ, ಅಲ್ಲಿರುವ ಇತರವಾನರರೆಲ್ಲರನ್ನೂ ಕೊಂದು ಬಾ"