ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೩.] | ಯುದ್ದ ಕಂಡವು. ೨೩೯೯ ಎಂದನು ಮಾಯಯಲ್ಲಿ ನಿಪುಣನಾದ ಆ ವಜ್ರದಂಷ್ಯನು ರಾವಣಾಜ್ಞೆ ಯನ್ನು ಕೇಳಿ ಆತನಿಗೆ ಕೈಮುಗಿದು ಮಹಾರಾಜನೆ' ಅಪ್ಪಣೆ ! ಹಾಗೆ ಯೇಸರಿ'” ಎಂದುಹೇಳಿ,ದೊಡ್ಡ ರಾಕ್ಷಸಸೈನ್ಯವನ್ನೂ ಕೆಲವು ಬಲಾಢಕ್ಷರ ನ್ನೂ ಕರೆದುಕೊಂಡು ಹೊರಟನು ಇವನಹಿಂದೆ ಅನೇಕಗಜತುರಗಾಸೆ ವ್ಯಗಳೂ, ಒಂಟೆಗಳೂ.ಕತ್ತೆಗಳೂ, ಪತಾ ಕ್ಲಾಧ್ವಜಚಿತ್ರಿತಗಳಾದ ರಥಗಳೂ, ಅಸಂಖ್ಯಾತಗಳಾಗಿ ಹೊರಟುವು ಈ ಸಮಸ್ತ ಸೈನ್ಯಗಳೂ ಗಂಧಪುಷ್ಠಾವ್ಯ ಲಂಕಾರಗಳಿಂದಲೂ, ಯುದ್ಧಕವಚಗಳಿಂದಲೂ, ವಿಚಿತ್ರಗಳಾದ ಕಿರೀಟಕೇ ಯರಾದಿ ರತ್ನಾ ಭರಣಗಳಿಂದಲೂ ಭೂತ ತೆಗಳಾಗಿ,ವಜ್ರದಂಷ್ಯನನ್ನು ಹಿಂಬಾಲಿಸಿ ಹೊರಟವು. ವಜ್ರದಂಷ್ಟಕೊಡ ಉತ್ತಮಪತಾಕೆಗಳಿಂ ದಲಂಕೃತವಾಗಿಯ -, ಸ.ವರ್ಇಕಾಂತಿಯಿಂದ ದೇದೀಪ್ಯಾನವಾಗಿ ಯ ಇದ್ದ ತನ್ನ ರಥಕ್ಕೆ ಪ್ರದಕ್ಷಿಣವನ್ನು ಮಾಡಿ ಆ ರಥವನ್ನೆ ಕುಳಿತನು. ರಥದಸುತ್ತಲೂ ಅನೇಕಪದಾತಿಗಳು ನಾನಾವಿಧಗಳಾದ ದಂಡಗಳನ್ನೂ, ತೋಮರಗಳನ್ನೂ, ಶೂಲಗಳನ್ನೂ, ಮುಸಲಗಳನ್ನೂ , ಭಿಂಡಿವಾಲಗ ಇನ್ನೂ , ಪಾಶಗಳನ್ನೂ - ಶಕ್ಕಾಯುಧಗಳನ್ನೂ , ಪಟ್ಟಸಗಳನ್ನೂ, ಖಡ್ಗಗಳನ್ನೂ, ಚಕ್ರಗಳನ್ನೂ, ಗದೆಗಳನ್ನೂ, ತೀಕ್ಷ್ಯಗಳಾದ ಗಂಡುಗೊ ಡಲಿಗಳನ್ನೂ, ಇನ್ನೂ ವಿವಿಧಾಯುಧಗಳನ್ನೂ ಹಿಡಿದು, ಯುದ್ಧಸನ್ನದ್ಧ ರಾಗಿ ಹೊರಬರು. ಈ ಸೈನ್ಯದಲ್ಲಿದ್ದ ಒಬ್ಬೊಬ್ಬರಾಕ್ಷಸರೂ ಉತ್ತಮವ ಸ್ವವನ್ನು ಟ್ಟು, ಸಾಭರಣಭೂಷಿತರಾಗಿ ಜ್ವಲಿಸುತಿದ್ದರು. ಯುದ್ಧಸಮರ್ಥ ರಾದ ಕೆಲವು ರಾಕ್ಷಸರು, ತೋಮರಗಳನ್ನೂ , ಅಂಕುಶಗಳನ್ನೂ ಹಿಡಿದು, ಬಂ ಗಮಪತಗಳಂತೆ ಮಹೋನ್ನತಗಳಾದ ಮದದಾನೆಗಳನ್ನೇರಿ ಬಂದರು. ಬೇರೆ ಕೆಲವುರಾಕ್ಷಸರು ಶುಭಲಕ್ಷಣವುಳ್ಳವುಗಳಾಗಿಯ, ಮಹಾಬಲವು ಇವುಗಳಾಗಿಯೂ ಇದ್ದ ಬೇರೆ ಕೆಲವು ಯುದ್ಧಗಜಗಳನ್ನೇರಿ ಬಂದರು. ಹೀಗೆ ಕಪ್ಪು ಮೈಯುಳ್ಳ ಆ ರಾಕ್ಷಸರು ಸುವರ್ಣಾಭರಣಗಳಿಂದಲಂಕೃತ ರಾಗಿ, ಸಿಂಹನಾದಗಳನ್ನು ಮಾಡುತ್ತ, ಮುಂದುಮುಂದೆ ಸಾಗಿಬರುತ್ತಿರಲು, ವರ್ಷಾ ಕಾಲದಲ್ಲಿ ಮಿಂಚಿನೊಡಗೂಡಿ ಗರ್ಜಿಸುತ್ತಿರುವ ಮೇಘಪರಂಪರೆ ಯಂತೆ ಕಾಣುತಿದ್ದರು, ಹೀಗೆ ಸಮಸ್ತರಾಕ್ಷಸಸೈನ್ಯವೂ ವಜ್ರದಂಷ್ಟ್ರು ಮೊಡನೆ ಪರಮಧ್ಯದಿಂದ ಹೊರಟು, ವಾನರಯೂಥಪತಿಯಾದ ಅಂಗ